ನವದೆಹಲಿ: ಭಾರತದ ಪ್ರವಾಸ ಕೈಗೊಂಡಿದ್ದ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿಗೆ ಅನಂತ್ ಅಂಬಾನಿ ಅಪರೂಪದ ವಾಚ್ ಗಿಫ್ಟ್ ನೀಡಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ
ಭಾರತ ಪ್ರವಾಸದಲ್ಲಿದ್ದ ಫುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಗುಜರಾತ್‌ನ ಜಾಮ್‌ನಗರದಲ್ಲಿರುವ ವನತಾರಕ್ಕೆ ಭೇಟಿ ನೀಡಿದ್ದ ವೇಳೆ ಅವರಿಗೆ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಬರೋಬ್ಬರಿ ₹10.9 ಕೋಟಿ ಮೌಲ್ಯದ ದುಬಾರಿ ವಾಚ್ ಗಿಫ್ಟ್ ನೀಡಿದ್ದಾರೆ.
25
ಜಗತ್ತಿನಲ್ಲಿ ಕೇವಲ 12 ಜನರಲ್ಲಿ ಮಾತ್ರ ಇದೆ!
ವಿಶ್ವದಲ್ಲೇ ಅತ್ಯರೂಪದ ವಾಚ್ ಸಂಗ್ರಹವೆಂದು ಎನಿಸಿಕೊಂಡಿರುವ ರಿಚರ್ಡ್ ಮಿಲ್ಲೆ ಆರ್‌ಎಂ 003- ವಿ2 ಜಿಎಂಟಿ ಮಾಡೆಲ್‌ನ ವಾಚ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶಿಷ್ಟ ವಿನ್ಯಾಸಕ್ಕೆ ಹೆಸರುವಾಸಿಯಾಗಿದ್ದು, ಜಗತ್ತಿನಲ್ಲಿ ಕೇವಲ 12 ಜನರಲ್ಲಿ ಮಾತ್ರವೇ ಇದೆ.
35
ಮೆಸ್ಸಿ ಹಲವು ಐಷಾರಾಮಿ ವಾಚ್‌ಗಳ ಒಡೆಯ
ಈಗಾಗಲೇ ರೊಲೆಕ್ಸ್ ಜಿಎಂಟಿ ಮಾಸ್ಟರ್, ಆಡೆಮರ್ಸ್ ಪಿಗುಯೆಟ್ ರಾಯಲ್ ಓಕ್ ಜಂಬೊ, ಪಾಟೆಕ್ ಫಿಲಿಪ್ ಐಷಾರಾಮಿ ವಾಚ್‌ಗಳ ಒಡೆಯನಾಗಿರುವ ಮೆಸ್ಸಿಯ ವಾಚ್ ಸಂಗ್ರಹಕ್ಕೆ ಈಗ ಹೊಸ ಸೇರ್ಪಡೆಯಾಗಿದೆ.
ಫುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಜಾಮ್‌ನಗರದಲ್ಲಿರುವ ವನತಾರಕ್ಕೆ ಭೇಟಿ ನೀಡಿದ ನೆನಪಿಗಾಗಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿ ಸಿಂಹದ ಮರಿಯೊಂದಕ್ಕೆ ‘ಲಿಯೋನಲ್’ ಎಂದು ನಾಮಕರಣ ಮಾಡಿದ್ದಾರೆ.
55
ಅನಂತ್ ದಂಪತಿ ಸಿಂಹಕ್ಕೆ ಮೆಸ್ಸಿ ಹೆಸರು
ವನತಾರಕ್ಕೆ ಭೇಟಿ ನೀಡಿದ್ದ ಮೆಸ್ಸಿ, ಅಲ್ಲಿನ ವನ್ಯಜೀವಿಗಳ ಪುನರ್ವಸತಿಗೆ ಹಮ್ಮಿಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ವೇಖೆ ಅನಂತ್ ದಂಪತಿ ಸಿಂಹಕ್ಕೆ ಮೆಸ್ಸಿಯ ಹೆಸರಿಟ್ಟಿದ್ದಾರೆ.