ಹೈದರಾಬಾದ್: ಅರ್ಜೆಂಟೀನಾದ ಪುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಇಂದು ತಡರಾತ್ರಿ ಭಾರತಕ್ಕೆ ಬಂದಿಳಿಯಲಿದ್ದಾರೆ. ಅವರ ಜತೆ ನೀವೂ ಫೋಟೋ ಕ್ಲಿಕ್ಕಿಸಿಕೊಳ್ಳಬಹುದು. ಆದರೆ ಅದಕ್ಕೆ ಬರೋಬ್ಬರಿ 10 ಲಕ್ಷ ರುಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.
3 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಜೊತೆ ಮಾತುಕತೆ ನಡೆಸಲು, ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳಿಗೆ ಅವಕಾಶವಿದೆ. ಆದರೆ ಇದಕ್ಕಾಗಿ ಬರೋಬ್ಬರಿ 10 ಲಕ್ಷ ರು. ಖರ್ಚು ಮಾಡಬೇಕಾಗುತ್ತದೆ.
26
ಮೆಸ್ಸಿಗಾಗಿಯೇ ವಿನೂತನ ಕಾರ್ಯಕ್ರಮ ಆಯೋಜನೆ
ಲಿಯೋನೆಲ್ ಮೆಸ್ಸಿ, ಕೋಲ್ಕತಾ, ಹೈದರಾಬಾದ್, ಮುಂಬೈ ಹಾಗೂ ದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ರತಿ ನಗರಗಳಲ್ಲೂ ವಿಶೇಷ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ಆಯೋಜಕರು ಮುಂದಾಗಿದ್ದಾರೆ.
36
3 ಗಂಟೆಗಳ ಕಾಲ ವಿಶೇಷ ಕಾರ್ಯಕ್ರಮಗಳಲ್ಲಿ ಮೆಸ್ಸಿ ಭಾಗಿ
ಮೆಸ್ಸಿ ಡಿಸೆಂಬರ್ 14ರಂದು ಹೈದರಾಬಾದ್‌ನಲ್ಲಿ ಇರಲಿದ್ದು, ಉಪ್ಪಲ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ಸೇರಿದಂತೆ 3 ಗಂಟೆಗಳ ಕಾಲ ವಿಶೇಷ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕೇವಲ 100 ಮಂದಿಗಷ್ಟೇ ಮೆಸ್ಸಿ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹೈದರಾಬಾದ್‌ನ ಫಲಕ್ನುಮಾ ಅರಮನೆಯಲ್ಲಿ ಮೆಸ್ಸಿ ಜೊತೆ ಫೋಟೋಶೂಟ್‌ಗೆ ಅವಕಾಶ
ವರದಿಗಳ ಪ್ರಕಾರ, ಹೈದರಾಬಾದ್‌ನ ಫಲಕ್ನುಮಾ ಅರಮನೆಯಲ್ಲಿ ಮೆಸ್ಸಿ ಜೊತೆ ಫೋಟೋಶೂಟ್‌ಗೆ ಅವಕಾಶ ಕಲ್ಪಿಸಲಾಗಿದೆ. ಇದರ ಟಿಕೆಟ್‌ಗೆ ₹9.95 ಲಕ್ಷ ಇದ್ದು, ಜಿಎಸ್‌ಟಿ ಸೇರಿದಂತೆ ₹10 ಲಕ್ಷಕ್ಕೂ ಹೆಚ್ಚಾಗುತ್ತದೆ. ಟಿಕೆಟ್‌ಗಳನ್ನು ಡಿಸ್ಟ್ರಿಕ್ಟ್ ಆ್ಯಪ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.
56
ಮೆಸ್ಸಿ ನೋಡಲು ತುದಿಗಾಲಲ್ಲಿ ನಿಂತ ಫ್ಯಾನ್ಸ್
ಒಂದೂವರೆ ದಶಕದ ಬಳಿಕ ಭಾರತಕ್ಕೆ ಬಂದಿಳಿಯುತ್ತಿರುವ ಫುಟ್ಬಾಲ್ ಲೆಜೆಂಡ್ ಮೆಸ್ಸಿಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದನ್ನೇ ಲಾಭವಾಗಿ ಬಳಸಿಕೊಳ್ಳಲು ಆಯೋಜಕರು ಮುಂದಾಗಿದ್ದಾರೆ.
66
ಎಲ್ಲಾ ನಗರದಲ್ಲೂ ದುಬಾರಿ ಟಿಕೆಟ್
ಮೆಸ್ಸಿ ಕಾರ್ಯಕ್ರಮಕ್ಕೆ ಎಲ್ಲಾ ನಗರಗಳಲ್ಲೂ ದುಬಾರಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಮುಂಬೈ ಕಾರ್ಯಕ್ರಮದ ಟಿಕೆಟ್ ಮೌಲ್ಯ ಕನಿಷ್ಠ ₹7000, ಗರಿಷ್ಠ 24,000, ಕೋಲ್ಕತಾದಲ್ಲಿ ಕನಿಷ್ಠ ₹4,400, ಗರಿಷ್ಠ 12,000, ಹೈದರಾಬಾದ್‌ನಲ್ಲಿ ಕನಿಷ್ಠ ₹2,300, ಗರಿಷ್ಠ ₹9,000 ಇದೆ.