ಕೋಲ್ಕತಾ: ಫುಟ್ಬಾಲ್ ದಂತಕತೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಸ್ವಾಗತಕ್ಕೆ ಭಾರತ ಸಜ್ಜಾಗಿದೆ. ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡಲಿರುವ ಮೆಸ್ಸಿ ಕಾರ್ಯಕ್ರಮದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ಫುಟ್ಬಾಲ್ ದಿಗ್ಗಜ, ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 3 ದಿನಗಳ ಪ್ರವಾಸಕ್ಕಾಗಿ ಶುಕ್ರವಾರ ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ. ಮಧ್ಯರಾತ್ರಿ 1.30ರ ವೇಳೆಗೆ ಕೋಲ್ಕತಾಗೆ ಬಂದಿಳಿಯಲಿರುವ ಮೆಸ್ಸಿ, ಡಿ.15ರವರೆಗೂ ಭಾರತದಲ್ಲೇ ಇರಲಿದ್ದಾರೆ.
26
2011ರಲ್ಲಿ ಮೊದಲ ಸಲ ಭಾರತಕ್ಕೆ ಭೇಟಿ ಕೊಟ್ಟಿದ್ದ ಮೆಸ್ಸಿ
ಲಿಯೋನೆಲ್ ಮೆಸ್ಸಿ 2011ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಕೋಲ್ಕತಾದಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 1-0 ಅಂತರದಲ್ಲಿ ವೆನೆಜುಯೆಲಾ ಎದುರು ಗೆಲುವು ಸಾಧಿಸಿತ್ತು.
36
ಕೋಲ್ಕತಾದಲ್ಲಿ 70 ಅಡಿ ಎತ್ತರದ ತಮ್ಮದೇ ಪ್ರತಿಮೆ ಅನಾವರಣ ಮಾಡಲಿರುವ ಮೆಸ್ಸಿ
ಶನಿವಾರ ಕೋಲ್ಕತಾದ ವಿಐಪಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ತಮ್ಮ 70 ಅಡಿಯ ಪ್ರತಿಮೆಯನ್ನು ಲಿಯೋನೆಲ್ ಮೆಸ್ಸಿ ಅನಾವರಣಗೊಳಿಸಲಿದ್ದಾರೆ.
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸೆಲಿಬ್ರಿಟಿಗಳ ಜತೆ ಕಾರ್ಯಕ್ರಮದಲ್ಲಿ ಭಾಗಿ
ಇದಾದ ಬಳಿಕ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಸೇರಿ ಇನ್ನೂ ಕೆಲವರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಟ ಶಾರುಖ್ ಖಾನ್ ಕೂಡಾ ಉಪಸ್ಥಿತರಲಿದ್ದಾರೆ.
56
ಹೈದರಾಬಾದ್‌ನಲ್ಲಿ ಸ್ನೇಹಾರ್ಥ ಫುಟ್ಬಾಲ್ ಮ್ಯಾಚ್
ಬಳಿಕ ಸಂಜೆ ಹೈದರಾಬಾದ್‌ಗೆ ಆಗಮಿಸಲಿದ್ದು, ಏಳು ಆಟಗಾರರನ್ನೊಳಗೊಂಡ ಸ್ನೇಹಾರ್ಥ ಫುಟ್ಬಾಲ್ ಪಂದ್ಯ ಆಡಲಿದ್ದಾರೆ. ಇದರಲ್ಲಿ ತೆಲಂಗಾಣ ಮುಖ್ಯಂತ್ರಿ ರೇವಂತ್ ರೆಡ್ಡಿ ಕೂಡಾ ಇರಲಿದ್ದಾರೆ. ಈ ಪಂದ್ಯವು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.
66
ಮೆಸ್ಸಿ-ಮೋದಿ ಭೇಟಿ
ಡಿ.14ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಕೆಲ ತಾರಾ ಕ್ರಿಕೆಟಿಗರ ಜತೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲಿರುವ ಮೆಸ್ಸಿ, ಡಿ.15ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಅಂದೇ ಅವರು ಅರ್ಜೆಂಟೀನಾಕ್ಕೆ ಹಿಂದಿರುಗಲಿದ್ದಾರೆ.