ಕೊತ್ತಂಬರಿ ಸೊಪ್ಪು ಹಾಕಿ ಚಹಾ ಮಾಡೋ ಚಾಯ್‌ವಾಲಾ; ಆಕ್ಷನ್ ಹೀರೋ ತರ ಇವರ ಸ್ಟೈಲ್!

First Published Apr 21, 2024, 5:04 PM IST

ನೀವು ಮಸಾಲಾ ಚಹಾವನ್ನು ಕುಡಿದಿರಬೇಕು ಮತ್ತು ಇದೇ ರೀತಿಯ ಅನೇಕ ರೀತಿಯ ಚಹಾದ ಬಗ್ಗೆಯೂ ಕೇಳಿರಬೇಕು ಅಲ್ವಾ.  ಆದರೆ ಈ ಸಮಯದಲ್ಲಿ ವೈರಲ್ ಆಗುತ್ತಿರುವ ಚಹಾ ಮಾರಾಟಗಾರನೊಬ್ಬ ಕೆಲವು ವಿಭಿನ್ನ ರೀತಿಯ ಚಹಾ ಮಾಡೋ ಮೂಲಕ ಆಹಾರಪ್ರಿಯರಿಗೆ ಶಾಖ್ ನೀಡಿದ್ದಾರೆ. 

ಬೀದಿ ಬದಿ ವ್ಯಾಪಾರಿಗಳು(street food seller) ತಮ್ಮ ಅಡುಗೆ ಕೌಶಲ್ಯವನ್ನು ತೋರಿಸಲು ಅಥವಾ ಹೊಸದನ್ನು ಪ್ರಯೋಗಿಸಲು ತಾವು ತಯಾರಿಸುವ ಆಹಾರಗಳಿಗೆ ವಿಭಿನ್ನ ವಸ್ತುಗಳನ್ನು ಹಾಕುವುದನ್ನು ನೀವು ನೋಡಿರಬಹುದು. ಕೆಲವೊಮ್ಮೆ ಆ ವಿಚಿತ್ರ ಆಹಾರಗಳು ಜನರಿಗೆ ಇಷ್ಟವಾಗುತ್ತೆ, ಆದರೆ ಕೆಲವು ಫುಡ್ ಕಾಂಬಿನೇಶನ್ ನೋಡಿದ್ರೆನೆ ವಾಂತಿ ಬರುವಂತಿರುತ್ತೆ. ಅಂತದ್ದೇ ಒಂದು ವಿಚಿತ್ರ ಚಹಾ ಮಾಡುವ ಮೂಲಕ ಸುದ್ದಿಯಾಗಿದ್ದಾನೆ ಒಬ್ಬ ಚಾಯ್ ವಾಲ. 
 

ಜನರು ಬೆಣ್ಣೆಯಿಂದ ಒಗ್ಗರಣೆ ಕೊಡೋದು ಮತ್ತು ಕೊತ್ತಂಬರಿಯಿಂದ ದಾಲ್ ಅಥವಾ ಸಬ್ಜಿಯನ್ನು ಅಲಂಕರಿಸುವುದನ್ನು ನೀವು ನೋಡಿರಬಹುದು. ಜೊತೆಗೆ ನೀವು ಮಸಾಲಾ ಚಹಾವನ್ನು ಕುಡಿದಿರಬೇಕು, ಬೇರೆ ಬೇರೆ ರೀತಿಯ ಚಹಾಗಳ ಬಗ್ಗೆಯೂ ಕೇಳಿರಬಹುದು. ಆದರೆ ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಿಸಿದಂತಹ ಚಹಾವನ್ನು ನೀವು ಕುಡಿದಿರಲು ಸಾಧ್ಯವೇ ಇಲ್ಲ. 
 

ಕೊತ್ತಂಬರಿ ಸೊಪ್ಪು ಹಾಕಿ ತಯಾರಿಸಿದ ಚಹಾ: ಕೆಲದಿನಗಳಿಂದ ವೈರಲ್ ಆಗುತ್ತಿರುವ ವೀಡಿಯೊದಲ್ಲಿ (viral video), ಚಹಾ ಮಾರಾಟಗಾರನೊಬ್ಬ (tea seller)  ಚಹಾ ತಯಾರಿಸುತ್ತಿರುವುದನ್ನು ನೀವು ನೋಡಬಹುದು. ಅವರು ಚಹಾ ತಯಾರಿಸುವ ಮಡಕೆ ಎಷ್ಟೋ ಸಲ, ಬಿದ್ದು ಎದ್ದು ನಿಂತಂತಿದೆ.  ಈ ಚಾಯ್ ವಾಲನ ಸ್ಟೈಲ್ ಕೂಡ ಕಡಿಮೆಯೇನಿಲ್ಲ. 

ವಸ್ತುಗಳನ್ನು ಮೇಲಕ್ಕೆ ಎಸೆದು ಕ್ಯಾಚ್ ಹಿಡಿದು ನಂತರ ಅದನ್ನು ಪಾತ್ರೆಗೆ ಸೇರಿಸುತ್ತಾನೆ.  ಪ್ರತಿಸಲ ಚಹಾಕ್ಕೆ ಏನಾದರೂ ಸೇರಿಸುವಾಗ ಚಮಚವನ್ನು ಮೇಲಕ್ಕೆ ಎತ್ತಿ, ತಿರುಗಿಸಿ, ಪಾತ್ರೆಗೆ ಬಡಿಯುವ ಮೂಲಕ ಆಕ್ಷನ್ ಸ್ಟಾರ್ ತರ ಮಾಡ್ತಾನೆ. ಬಹುಶಃ ಅದಕ್ಕಾಗಿಯೇ ಮಡಕೆಯ ಈ ಸ್ಥಿತಿ ಸಂಭವಿಸಿದೆ ಎಂದು ಕಾಣ್ಸತ್ತೆ. 
 

ಇಷ್ಟೇ ಆದ್ರೆ ಪರವಾಗಿಲ್ಲ, ನೀರು ಮತ್ತು ಹಾಲು, ಚಹಾ ಪುಡಿ ಬೆರೆಸಿದ ನಂತರ ಚಾಯ್ ವಾಲ ಕುದಿಯುವ ಚಹಾಕ್ಕೆ, ಲೆಮೆನ್ ಗ್ರಾಸ್ ಸೇರಿಸುತ್ತಾನೆ, ಜೊತೆಗೆ ಒಂದಷ್ಟು ಕೊತ್ತಂಬರಿ ಸೊಪ್ಪನ್ನು(coriander leaves) ಸಹ ಚಹಾಕ್ಕೆ ಬೆರೆಸಿ, ಚೆನ್ನಾಗಿ ಕುದಿಸುತ್ತಾನೆ. ನಂತರ ಅವರು ಚಹಾದಲ್ಲಿ ಬೆಲ್ಲ ಮತ್ತು ಸಕ್ಕರೆಯನ್ನು ಬೆರೆಸಿ ಬಟ್ಟೆಯಿಂದ ಫಿಲ್ಟರ್ ಮಾಡಿ ಚಹಾ ಸರ್ವ್ ಮಾಡ್ತಾರೆ. 
 

ಈ ವೀಡಿಯೊವನ್ನು ಫುಡ್ ಕೆ ಫ್ಲೇವರ್ (food ke flavours) ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೊವನ್ನುಈಗಾಗಲೇ ಲಕ್ಷಾಂತರ ಜನರು ಸಹ ವೀಕ್ಷಿಸಿದ್ದಾರೆ ಮತ್ತು ಲೈಕ್ ಮಾಡಿದ್ದಾರೆ. ಚಾಯ್ ವಾಲ ಚಹಾ ತಯಾರಿಸುವ ಸ್ಟೈಲ್ ಬಗ್ಗೆ ಜನರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಸ್ಟೈಲ್ ಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. 
 

ಇನ್ನು ಚಹಾಕ್ಕೆ ಲೆಮೆನ್ ಗ್ರಾಸ್ (lemon grass), ಕೊತ್ತಂಬರಿ ಸೊಪ್ಪು ಹಾಕೋದನ್ನು ನೋಡಿ ಚಹಾವನ್ನು ತಯಾರಿಸಲಾಗುತ್ತಿದೆಯೇ ಅಥವಾ ಚಟ್ನಿ? ಮಾಡ್ತಿದ್ದೀರಾ ಎಂದು ಕೆಲವರು ಕೇಳಿದ್ರೆ, ಅದೇ ಸಮಯದಲ್ಲಿ, ಅನೇಕ ಜನರು ಇನ್ನು ಕಣ್ಣಲ್ಲಿ ಏನೇನು ನೊಡ್ಬೇಕು ಎಂದು ಕೂಡ ಬರೆದಿದ್ದಾರೆ. 
 

click me!