ಅಡುಗೆಯ ವಿಷಯಕ್ಕೆ ಬಂದಾಗಲೆಲ್ಲಾ, ಭಾರತವನ್ನು ಖಂಡಿತವಾಗಿಯೂ ಉಲ್ಲೇಖಿಸಲಾಗುತ್ತದೆ. ಇಲ್ಲಿ ಕಂಡುಬರುವ ಅನೇಕ ಭಕ್ಷ್ಯಗಳನ್ನು ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಬಹಳ ಇಷ್ಟಪಟ್ಟು ಜನ ತಿನ್ನುತ್ತಾರೆ. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶ, ಇಲ್ಲಿನ ಜೀವನ (Life), ಉಪಭಾಷೆ ಮತ್ತು ಉಡುಗೆ (Cloths) ಮಾತ್ರವಲ್ಲದೆ ಆಹಾರವೂ (Food) ಸಾಕಷ್ಟು ಭಿನ್ನವಾಗಿದೆ.
ಭಾರತದ ಪ್ರತಿಯೊಂದು ರಾಜ್ಯ ಮತ್ತು ನಗರವು ತನ್ನದೇ ಆದ ವಿಶಿಷ್ಟ ಅಭಿರುಚಿಯನ್ನು ಹೊಂದಿದೆ. ಇಲ್ಲಿ ಕಂಡುಬರುವ ಭಕ್ಷ್ಯಗಳು (Dishes) ಪ್ರಪಂಚದಾದ್ಯಂತ ತುಂಬಾ ಇಷ್ಟವಾಗಲು ಸಹ ಇದು ಕಾರಣವಾಗಿದೆ. ಇದೆಲ್ಲದರ ಮಧ್ಯೆ, ಇತ್ತೀಚೆಗೆ ಭಾರತದ ಮತ್ತೊಂದು ಖಾದ್ಯವು ಭಾರಿ ಚರ್ಚೆಯಾಗುತ್ತಿದೆ, ಅದು ಕೆಂಪು ಇರುವೆ ಚಟ್ನಿ (red ant chutney).
ಈ ವಿಶೇಷ ಚಟ್ನಿಗೆ ಜಿಐ ಟ್ಯಾಗ್ ಸಿಕ್ಕಿದೆ
ಇತ್ತೀಚೆಗೆ, ಭಾರತದ ಒಡಿಶಾ ರಾಜ್ಯದಲ್ಲಿರುವ ಮಯೂರ್ಭಂಜ್ ಜಿಲ್ಲೆಯಲ್ಲಿ ಪ್ರಸಿದ್ಧವಾಗಿರುವ ಕೆಂಪು ಇರುವೆ ಚಟ್ನಿ ಜಿಐ ಟ್ಯಾಗ್ (GI Tag) ಪಡೆದಿದೆ. ಮತ್ತೆ ಓದೋಕೆ ಹೋಗ್ಬೇಡಿ, ನೀವು ಓದಿದ್ದು ಸರಿಯಾಗಿದೆ. ನಾವು ಇಲ್ಲಿ ಕೆಂಪು ಇರುವೆಯಿಂದ ಮಾಡಿದ ಚಟ್ನಿ ಬಗ್ಗೆ ಮಾತನಾಡುತ್ತಿದ್ದೇವೆ. ಈ ಚಟ್ನಿಯನ್ನು ಅನ್ನು ಕೈ ಚಟ್ನಿ ಎಂದೂ ಕರೆಯಲಾಗುತ್ತದೆ.
ಜನವರಿ 2, 2024 ರಂದು, ಕೆಂಪು ಇರುವೆ ಚಟ್ನಿ ತನ್ನ ನಿರ್ದಿಷ್ಟ ಅಭಿರುಚಿಯಿಂದಾಗಿ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಸಾಧಿಸಿದೆ. ಕೆಂಪು ಇರುವ ಚಟ್ನಿ ಎಲ್ಲಿನ ಜನ ಸೇವಿಸುತ್ತಾರೆ. ಈ ವಿಶೇಷ ಚಟ್ನಿ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.
ಕೆಂಪು ಇರುವೆ ಚಟ್ನಿಯನ್ನು ಎಲ್ಲಿ ತಿನ್ನಲಾಗುತ್ತದೆ?
ವಿಚಿತ್ರವೆನಿಸಿದರೂ, ಈ ಜಿಲ್ಲೆಯ ನೂರಾರು ಬುಡಕಟ್ಟು ಕುಟುಂಬಗಳು (tribal family) ಈ ಕೀಟಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತವೆ. ಒಡಿಶಾದ ಹೊರತಾಗಿ, ಜಾರ್ಖಂಡ್ ಮತ್ತು ಛತ್ತೀಸ್‌ಗಢದಂತ ಇತರ ಪೂರ್ವ ರಾಜ್ಯಗಳಲ್ಲಿಯೂ ಈ ಚಟ್ನಿಯನ್ನು ಬಹಳ ಇಷ್ಟಪಟ್ಟಿ ತಿನ್ನಲಾಗುತ್ತದೆ.
ಕೆಂಪಿರುವೆ ಚಟ್ನಿ ತಯಾರಿಸಲು, ಇರುವೆಗಳು ಮತ್ತು ಅವುಗಳ ಮೊಟ್ಟೆಗಳನ್ನು ಅವುಗಳ ಬಿಲಗಳು ಅಥವಾ ಬಾಂಬಿಯಿಂದ ಸಂಗ್ರಹಿಸಲಾಗುತ್ತದೆ. ಇದರ ನಂತರ, ಅದರ ಚಟ್ನಿ ತಯಾರಿಸಲು ಅವುಗಳನ್ನು ಮೊದಲು ಸ್ವಚ್ಛಗೊಳಿಸಲಾಗುತ್ತದೆ ಮತ್ತು ನಂತರ ಪುಡಿಮಾಡಿ ಒಣಗಿಸಲಾಗುತ್ತದೆ.
ಚಟ್ನಿಯನ್ನು ಈ ರೀತಿ ತಯಾರಿಸಲಾಗುತ್ತದೆ
ಇದರ ನಂತರ, ಉಪ್ಪು (Salt), ಶುಂಠಿ (Ginger), ಬೆಳ್ಳುಳ್ಳಿ (Garlic) ಮತ್ತು ಮೆಣಸಿನಕಾಯಿಯನ್ನು ಸೇರಿಸಿ ಮತ್ತೆ ರುಬ್ಬಿ ಈ ರೀತಿಯಾಗಿ ಕೆಂಪು ಇರುವೆ ಚಟ್ನಿಯನ್ನು ತಯಾರಿಸಲಾಗುತ್ತದೆ. ಇದು ತುಂಬಾ ಖಾರವಾಗಿರುತ್ತದೆ. ಅಷ್ಟೇ ಅಲ್ಲ ರುಚಿಕರವಾಗಿರುವುದಲ್ಲದೆ, ಈ ಚಟ್ನಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಕೆಂಪು ಇರುವೆ ಚಟ್ನಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಸತು (Zinc), ವಿಟಮಿನ್ ಬಿ -12, ಕಬ್ಬಿಣ (Iron), ಮೆಗ್ನೀಸಿಯಮ್ (Magnesium), ಪೊಟ್ಯಾಸಿಯಮ್ (Potasium) ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ ಎಂದು ನಂಬಲಾಗಿದೆ, ಇದನ್ನು ಸೇವಿಸೋದರಿಂದ ಆರೋಗ್ಯಕ್ಕೆ ತುಂಬಾ ರೀತಿಯಲ್ಲಿ ಸಹಾಯವಾಗುತ್ತದೆ ಎನ್ನಲಾಗುತ್ತದೆ.