ಈ ರೆಸಿಪಿಯಿಂದ ಕೆಲವೇ ನಿಮಿಷಗಳಲ್ಲಿ ಸಾಫ್ಟ್‌ ಇಡ್ಲಿ ರೆಡಿ!

First Published Jan 11, 2021, 5:18 PM IST

ಇಡ್ಲಿ ದಕ್ಷಿಣ ಭಾರತದ ಫೇಮಸ್‌ ತಿಂಡಿಗಳಲ್ಲಿ ಒಂದು. ಮೃದುವಾಗಿರುವ ಬಿಸಿ ಬಿಸಿ ಇಡ್ಲಿ ಎಲ್ಲರಿಗೂ ಇಷ್ಟ. ಆದರೆ ಇದನ್ನು  ತಯಾರಿಸಲು ಸಮಯ ಬೇಕು ಮತ್ತು ತಕ್ಷಣಕ್ಕೆ ಆಗುವ ತಿಂಡಿ ಅಲ್ಲ ಎಂದು ಯೋಚಿಸಬೇಡಿ. ಇಲ್ಲಿದೆ ಇನ್‌ಸ್ಟೆಂಟ್‌ ಇಡ್ಲಿ ಮಾಡುವ ವಿಧಾನ.

ಬೇಕಾಗುವ ಸಾಮಗ್ರಿಗಳು :1 ಪ್ಯಾಕೆಟ್ ಇಡ್ಲಿ ಮಿಕ್ಸ್‌,  1 ಟೀಸ್ಪೂನ್ ಫ್ರೂಟ್‌ ಸಾಲ್ಟ್,  ನೀರು ,ಮೈಕ್ರೋ ಸೇಫ್‌ ಇಡ್ಲಿ ಮೌಲ್ಡ್‌,  ಮೈಕ್ರೋ ಸೇಫ್ ಇಡ್ಲಿ ಪಾತ್ರೆ.

ಇಡ್ಲಿ ಮಿಕ್ಸ್‌ನಿಂದ ದಿಢೀರ್‌ ಆಗಿ ಇಡ್ಲಿ ತಯಾರಿಸಬಹುದು.
undefined
ಅನೇಕ ಬ್ರಾಂಡ್‌ಗಳ ಇಡ್ಲಿ ಮಿಶ್ರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ಬಟ್ಟಲಿನಲ್ಲಿ ಇಡ್ಲಿ ಮಿಶ್ರಣವನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಮತ್ತು ಹಿಟ್ಟು ತಯಾರಿಸಿ.
undefined
ಇಡ್ಲಿ ಹಿಟ್ಟು ತುಂಬಾ ತೆಳ್ಳಗೆ ಅಥವಾ ಹೆಚ್ಚು ದಪ್ಪವಾಗಿರ ಬಾರದು ಎಂಬುದನ್ನು ಗಮನಿಸಿ.
undefined
ಈಗ ಮೊದಲು ಸ್ವಲ್ಪ ನೀರನ್ನು ಇಡ್ಲಿಯ ಮೈಕ್ರೋ ಸೇಫ್ ಪಾತ್ರಗೆ ಹಾಕಿ, ಇಡ್ಲಿ ಸ್ಟ್ಯಾಂಡ್ ಇರಿಸಿ.
undefined
ಮೌಲ್ಡ್‌ಗೆ ಚೆನ್ನಾಗಿ ಎಣ್ಣೆ ಹಚ್ಚಿ.
undefined
ಹಿಟ್ಟು ಸಿದ್ಧವಾದಾಗ, ಕೊನೆಯಲ್ಲಿ ಫ್ರೂಟ್‌ ಸಾಲ್ಟ್ ಮಿಶ್ರಣ ಮಾಡಿ. ಇದನ್ನು ಸೇರಿಸಿದ ನಂತರ ಇಡ್ಲಿ ಹಿಟ್ಟು ಹುದುಗು ಬರಲು ಪ್ರಾರಂಭವಾಗುತ್ತದೆ.
undefined
ತಕ್ಷಣ ಈ ಮಿಶ್ರಣವನ್ನು ಇಡ್ಲಿ ಅಚ್ಚಿಗೆ ತುಂಬಿಸಿ ಮತ್ತು ಓವನ್‌ನಲ್ಲಿ ಇಡಿ.
undefined
ಈ ರೆಸಿಪಿ ಅನುಸರಿಸಿದರೆ ಕೆಲವೇ ನಿಮಿಷಗಳಲ್ಲಿ ಸಾಫ್ಟ್‌ ಇಡ್ಲಿ ಸವಿಯಲು ರೆಡಿ.
undefined
click me!