ದೋಸೆ ಹಿಟ್ಟು
ಇಂದು ನಾವು ನಿಮಗೆ ಬೆಳಗ್ಗೆ ಉಳಿದ ದೋಸೆ ಹಿಟ್ಟು ಹುಳಿಯಾಗುವ ಮುನ್ನ ಹೇಗೆ ಅದರಿಂದ ಮತ್ತಷ್ಟು ರುಚಿಕರ ತಿಂಡಿಗಳನ್ನು ಮಾಡಬಹುದು ಎಂದು ಹೇಳುತ್ತಿದ್ದೇವೆ. ಉಳಿದ ದೋಸೆ ಹಿಟ್ಟಿನಿಂದ 9 ಬಗೆ ಬಗೆಯ ತಿಂಡಿ ತಯಾರಿಸಬಹುದು. ಈ ತಿಂಡಿ ತಿಂದ್ರೆ ಇದು ಬೆಳಗ್ಗೆ ಉಳಿದ ದೋಸೆ ಹಿಟ್ಟು ಅಂತ ಯಾರಿಗೂ ಗೊತ್ತಾಗಲ್ಲ.
ದೋಸೆ ಹಿಟ್ಟು
ಈ ರೀತಿ ತಿಂಡಿ ತಯಾರಿಸಿದ್ರೆ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನ ವರ್ಗದವರಿಗೂ ಇಷ್ಟವಾಗುತ್ತದೆ. ಶಾಲೆಯಿಂದ ಬರುತ್ತಲೇ ತಿಂಡಿ ಅಂತ ಕೇಳುವ ಮಕ್ಕಳಿಗೆ ಈ ಅಡುಗೆ ಖಂಡಿತ ಇಷ್ವವಾಗುತ್ತದೆ. ಆ 9 ತಿಂಡಿಗಳು ಏನು ಅಂತ ನೋಡೋಣ ಬನ್ನಿ.
1.ಉತ್ತಪ್ಪಂ Uttapam
ದೋಸೆ ಹಿಟ್ಟಿಗೆ ಈರುಳ್ಳಿ, ಟೊಮೆಟೋ, ಹಸಿಮೆಣಸಿನಕಾಯಿ, ಕೋತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಿಸಿಕೊಳ್ಳಬೇಕು. ಬೇಕಿದ್ದರೆ ನಿಮಗೆ ಅಥವಾ ಮಕ್ಕಳಿಗೆ ಇಷ್ಟವಾಗುವ (ಕ್ಯಾರಟ್, ಸೌತೆಕಾಯಿ) ತರಕಾರಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಸೇರಿಸಬಹುದು. ಕಾವಲಿ ಬಿಸಿ ಮಾಡಿಕೊಂಡು ತರಕಾರಿ ಮಿಶ್ರಿತ ಹಿಟ್ಟು ಹಾಕಿ, ಸುತ್ತಲೂ ಎಣ್ಣೆ ಸವರಿ ಎರಡೂ ಬದಿಯಲ್ಲಿ ಬೇಯಿಸಿದ್ರೆ ಸವಿಯಲು ರುಚಿಯಾದ ಉತ್ತಪ್ಪಂ ಸಿದ್ಧವಾಗುತ್ತದೆ.
2.ಪಡ್ಡು PadduPaniyarmAppe
ದೋಸೆ ಹಿಟ್ಟಿನಿಂದ ಪಡ್ಡು/ಅಪ್ಪೆ ಸಹ ತಯಾರಿಸಬಹುದು. ದೋಸೆ ಹಿಟ್ಟಿಗೆ ಚಿಕ್ಕದಾದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೋತಂಬರಿ ಸೊಪ್ಪು ಸೇರಿಸಿದರೆ ಪಡ್ಡು ತಯಾರಿಸುವ ಮಿಶ್ರಣ ಸಿದ್ಧವಾಗುತ್ತದೆ. ನಂತರ ಪಡ್ಡು ತಯಾರಿಸುವ ಮಣೆಗೆ ಒಂದಿಷ್ಟು ಎಣ್ಣೆ ಸವರಿ ಹಿಟ್ಟು ಹಾಕಿ, ಎರಡು ಬದಿ ಬೇಯಿಸಿದ್ರೆ ರುಚಿಯಾದ ಪಡ್ಡು ರೆಡಿಯಾಗುತ್ತದೆ.
3.ದೋಸೆ ಸ್ಯಾಂಡ್‌ವಿಚ್ Dosa Sandwich
ಇಂದಿನ ಮಕ್ಕಳಿಗೆ ಸ್ಯಾಂಡ್‌ವಿಚ್ ಅಂದ್ರೆ ಹೆಚ್ಚು ಇಷ್ಟವಾಗುತ್ತದೆ. ತೆಳುವಾಗಿ ದೋಸೆ ಮಾಡಿ ಅದಕ್ಕೆ ಕೆಂಪು ಚಟ್ನಿ ಅಥವಾ ಟೊಮೆಟೋ ಸಾಸ್, ಸ್ಮ್ಯಾಶ್ ಮಾಡಿದ ಆಲೂಗಡ್ಡೆಗೆ ಒಂದಿಷ್ಟು ಉಪ್ಪು-ಖಾರ ಸೇರಿಸಿ ದೋಸೆ ಮೇಲೆ ತೆಳುವಾಗಿ ಹರಡಬೇಕು. ಬೇಕಿದ್ರೆ ಮಕ್ಕಳಿಗೆ ಇಷ್ಟವಾಗುವ ತರಕಾರಿ ಸೇರಿಸಬಹುದು. ನಂತರ ಸ್ಯಾಂಡ್‌ವಿಚ್ ರೀತಿಯಲ್ಲಿ ಕತ್ತರಿಸಿ ಕೊಟ್ಟರೆ ಮಕ್ಕಳಿಗೆ ಇಷ್ಟವಾಗುತ್ತದೆ.
4.ದೋಸೆ ವ್ರಾಪ್ Dosa Wrap
ದೋಸೆ ಹಿಟ್ಟನ್ನು ಕಾವಲಿ ಮೇಲೆ ದೊಡ್ಡದಾಗಿ ಹಾಕಿ. ನಂತರ ದೋಸೆ ಬೇಯುತ್ತಿರುವಾಗ ಪನೀರ್, ಚಿಕನ್ ಅಥವಾ ತರಕಾರಿ ಹಾಕಿ ಚೆನ್ನಾಗಿ ಸ್ಮ್ಯಾಶ್ ಮಾಡಿ. ನಂತರ ದೋಸೆಯನ್ನು ಚಿಕ್ಕ ಚಿಕ್ಕ ರೋಲ್ ಮಾಡಿ ರ್ಯಾಪ್ ಮಾಡಿರೆ ಮತ್ತೊಂದು ರುಚಿಯಾದ ತಿಂಡಿ ಸವಿಯಲು ಇಷ್ಟವಾಗುತ್ತದೆ. ಬೇಕಿದ್ರೆ ದೋಸೆ ಮೇಲೆ ಚೀಜ್ ಸ್ಲೈಸ್ ಹಾಕಿದರೆ ಇದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.
5.ಹೆಸರು ದೋಸೆ Masala Pesarattu
ಬೆಳಗ್ಗೆ ದೋಸೆ ಹಿಟ್ಟು ಉಳಿಯುವ ಲಕ್ಷಣ ಕಾಣಿಸುತ್ತಿದ್ದರೆ ಆ ಕ್ಷಣವೇ ಹೆಸರುಕಾಳು ನೆನೆಸಿಟ್ಟುಕೊಳ್ಳಿ. ಸುಮಾರು ನಾಲ್ಕೈದು ಗಂಟೆ ಬಳಿಕ ನೆನಸಿದ ಹೆಸರುಕಾಳನ್ನು ಚೆನ್ನಾಗಿ ರುಬ್ಬಿಕೊಂಡು ದೋಸೆಹಿಟ್ಟಿಗೆ ಸೇರಿಸಿಕೊಳ್ಳಿ. ಸುಮಾರು 1 ಗಂಟೆ ಬಳಿಕ ರುಚಿಯಾದ ಹೆಸರುಕಾಳು ದೋಸೆ ಮಾಡಿಕೊಳ್ಳಬಹುದು. ಇದರಿಂದ ದೋಸೆ ಹಿಟ್ಟು ಹುಳಿ ಬಂದಿರೋದು ಗೊತ್ತಾಗಲ್ಲ. ಈ ರೆಸಿಪಿ ಆರೋಗ್ಯಕ್ಕೂ ಒಳ್ಳೆಯದು.
6.ವ್ಯಾಫ್ಲೆಸ್ ದೋಸೆ Dosa Waffles
ನಿಮ್ಮಲ್ಲಿ ವ್ಯಾಫ್ಲೆಸ್ ಸೆಟ್ ಇದ್ರೆ ಈ ರೀತಿ ದೋಸೆ ಮಾಡಬಹುದು. ವ್ಯಾಫ್ಲೆಸ್ ದೋಸೆ ತುಂಬಾ ಕ್ರಿಸ್ಪಿಯಾಗಿರುತ್ತದೆ. ಖಾರವಾದ ಟೊಮೆಟೋ ಚಟ್ನಿ ಅಥವಾ ಗಟ್ಟಿ ಮೊಸರಿನ ಜೊತೆಯಲ್ಲಿ ವ್ಯಾಫ್ಲೆಸ್ ದೋಸೆ ಸವಿಯಬಹುದು. ಹಸಿತೆಂಗಿನಕಾಯಿ ಚಟ್ನಿಯೂ ಇದಕ್ಕೆ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.
7.ದೋಸೆ ಪಿಜ್ಜಾ Dosa Pizza
ದೋಸೆ ಹಿಟ್ಟಿನಿಂದಲೂ ಪಿಜ್ಜಾ ಮಾಡಬಹುದು. ದಪ್ಪವಾಗಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಹಾಕಬೇಕು. ನಂತರ ಪಿಜ್ಜಾಗೆ ಬಳಸುವ ಎಲ್ಲಾ ಪದಾರ್ಥಗಳನ್ನು ಹಾಕಬೇಕು. ಕೊನೆಯದಾಗಿ ದೋಸೆ ಮೇಲೆ ಚೀಸ್ ಸ್ಲೈಸ್ ಮಾಡಿ, ಒಂದು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ, ಕಟ್ ಮಾಡಿದ್ರೆ ದೇಶಿ ಸ್ಟೈಲ್ ಪಿಜ್ಜಾ ರೆಡಿಯಾಗತ್ತದೆ.
8.ದೋಸೆ ಹಿಟ್ಟಿನ ಬೋಂಡಾ Dosa Batter Bonda
ದೋಸೆ ಬ್ಯಾಟರ್‌ಗೆ ಅಕ್ಕಿ ಹಿಟ್ಟು ಸೇರಿಸಬೇಕು. ನಂತರ ಇದಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿಕಾಯಿ, ತೆಂಗಿನಕಾಯಿ ಮತ್ತು ಕೋತಂಬರಿ ಸೊಪ್ಪು ಸೇರಿಸಿ ಬೋಂಡಾ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು. ಬಿಸಿಎಣ್ಣೆಗೆ ಒಂದಾದ ನಂತರ ಚಿಕ್ಕ ಉಂಡೆಗಳನ್ನು ಹಾಕಿ ಡೀಪ್ ಫ್ರೈ ಮಾಡಿದರೆ ಟೀ ಜೊತೆ ಸವಿಯಲು ಟೇಸ್ಟಿ ಆಂಡ್ ಕ್ರಿಸ್ಪಿ ಬೋಂಡಾ ಸಿದ್ಧವಾಗುತ್ತದೆ.
9.ದೋಸೆ ಇಡ್ಲಿ Dosa Idli
ದೋಸೆ ಹಿಟ್ಟಿನಿಂದ ಇಡ್ಲಿ ಮಾಡಬಹುದು. ಇಡ್ಲಿ ಪ್ಯಾನ್‌ಗೆ ಕೊಂಚ ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕಿಕೊಳ್ಳಬೇಕು. ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷ ಬೇಯಿಸಿದ್ರೆ ಸಾಫ್ಟ್ ಇಡ್ಲಿ ಸಿದ್ಧವಾಗುತ್ತದೆ. ದೋಸೆ ಹಿಟ್ಟಿಗೆ ಬೇಕಿದ್ದರೆ ನೆನಸಿದ ಅವಲಕ್ಕಿಯನ್ನು ರುಬ್ಬಿಕೊಂಡು ಸೇರಿಸಿಯೂ ಇಡ್ಲಿ ಮಾಡಬಹುದು. ಕಾಯಿ ಚಟ್ನಿ ಅಥವಾ ಸಾಂಬರ್ ಜೊತೆ ಸವಿಯಬಹುದು.