ಅಡೆ ದೋಸೆ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ. ಮದುವೆ ಸಮಾರಂಭಗಳಲ್ಲಿ ಇದು ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಈ ಲೇಖನದಲ್ಲಿ ರುಚಿಕರವಾದ ಅಡೆ ದೋಸೆ ಮಾಡುವ ವಿಧಾನವನ್ನು ವಿವರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಅಡೆ ದೋಸೆ ಸಿಕ್ಕಾಪಟ್ಟೆ ಫೇಮಸ್ ಆಗುತ್ತದೆ. ಅಡೆ ದೋಸೆ ಸವಿಯಲು ಬೆಂಗಳೂರಿನ ಜನರು ನಿರ್ಧಿಷ್ಟ ಹೋಟೆಲ್‌ಗೆ ತೆರಳುತ್ತಾರೆ. ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಲ್ಲಿ ಅಡೆ ದೋಸೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತದೆ.
26
ಹಲವು ಧಾನ್ಯಗಳನ್ನು ಬಳಸಿ ಈ ಅಡೆ ದೋಸೆಯನ್ನು ಮಾಡಲಾಗುತ್ತದೆ. ಅಡೆ ದೋಸೆಯಲ್ಲಿ ಉಪ್ಪು-ಖಾರ ಮಿಕ್ಸ್ ಆಗಿರೋದರಿಂದ ಸೈಡ್‌ಗೆ ಚಟ್ನಿಯ ಅವಶ್ಯಕತೆಯೂ ಇರಲ್ಲ. ಒಮ್ಮೆ ಅಡೆ ದೋಸೆ ರುಚಿ ನೋಡಿದವರು ಮತ್ತೆ ಮತ್ತೆ ಕೇಳುತ್ತಾರೆ. ಈ ಲೇಖನದಲ್ಲಿ ರುಚಿಯಾದ ಅಡೆದೋಸೆ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
36
ಅಡೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು
ದೋಸೆ ಅಕ್ಕಿ: 2 ಕಪ್, ತೊಗರಿ ಬೇಳೆ: 1 ಕಪ್,
ಕಡಲೆ ಬೇಳೆ: 1 ಕಪ್, ಹೆಸರುಬೇಳೆ: ಅರ್ಧ ಕಪ್
ಉದ್ದಿನಬೇಳೆ: 3 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ: 7 ರಿಂದ 8, ಹಸಿ ತೆಂಗಿನಕಾಯಿ ತುರಿ: 1 ಕಪ್
ಉಪ್ಪು: ರುಚಿಗೆ ತಕ್ಕಷ್ಟು, ತುಪ್ಪ ಅಥವಾ ಎಣ್ಣೆ: ದೋಸೆ ಮೇಲೆ ಸವರಲು
ಮೊದಲಿಗೆ ಅಕ್ಕಿ, ತೊಗರಿ ಬೇಳೆ, ಕಡಲೆ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆ, ಬ್ಯಾಡಗಿ ಮೆಣಸಿನಕಾಯಿ ಮತ್ತು ಜೀರಿಗೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಎರಡರಿಂದ ಮೂರು ಲೋಟ ನೀರು ಸೇರಿಸಿ 6 ರಿಂದ 7 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು. ರಾತ್ರಿ ನೆನೆಸಿಟ್ಟು ಬೆಳಗ್ಗೆ ರುಬ್ಬಿಕೊಳ್ಳಬಹುದು.
56
ಎಲ್ಲಾ ಕಾಳು, ಜೀರಿಗೆ ಮತ್ತು ಬ್ಯಾಡಗಿ ಮೆಣಸಿನಕಾಯಿ 6 ರಿಂದ 7 ಗಂಟೆಗಳ ಕಾಲ ನೆನೆಸಿದ ಬಳಿಕ ಎರಡ್ಮೂರು ನೀರಿನಿಂದ ವಾಶ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ 1 ಕಪ್‌ನಷ್ಟು ಹಸಿ ತೆಂಗಿನಕಾಯಿ ತುರಿ ಸೇರಿಸಿಕೊಳ್ಳಬೇಕು. ತದನಂತರ ಎಲ್ಲವನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬೇಕು.
66
ಈಗ ಒಲೆ ಆನ್ ಮಾಡ್ಕೊಂಡು ಕಾವಲಿಟ್ಟುಕೊಳ್ಳಿ. ಕಾವಲಿ ಬಿಸಿಯಾಗ್ತಿದ್ದಂತೆ ಹಿಟ್ಟನ್ನು ತೆಳುವಾಗಿ ಹರಡಿ ಎರಡೂ ಬದಿಯಲ್ಲಿ ಬೇಯಿಸಿಕೊಳ್ಳಿ. ದೋಸೆ ಹಾಕುವಾಗ ತುಪ್ಪ ಅಥವಾ ಎಣ್ಣೆ ಬಳಸಬೇಕು. ಇದರಿಂದ ದೋಸೆ ಗರಿಗರಿಯಾಗಿರುತ್ತದೆ. ತೆಂಗಿನಕಾಯಿ/ಕಡಲೆಕಾಯಿ/ಕೆಂಪು ಮೆಣಸಿನಕಾಯಿ ಜೊತೆ ಅಡ ದೋಸೆ ಸವಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.