ಹಾಗಲಕಾಯಿಯಲ್ಲಿನ ಕಹಿ ತೆಗೆಯಲು ಬಳಸಿ ಅಮ್ಮ ಹೇಳಿಕೊಟ್ಟ 5 ಟಿಪ್ಸ್

Published : Feb 15, 2025, 10:05 AM ISTUpdated : Feb 15, 2025, 10:06 AM IST

How to remove bitter from bitter gourd: ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದು ಆದರೆ ಕಹಿ. ಮಧುಮೇಹಿಗಳಿಗೆ ಇದು ರಾಮಬಾಣ. ಸಾಂಪ್ರದಾಯಿಕ ವಿಧಾನಗಳಿಂದ ಹಾಗಲಕಾಯಿಯ ಕಹಿ ಕಡಿಮೆ ಮಾಡಬಹುದು.

PREV
17
ಹಾಗಲಕಾಯಿಯಲ್ಲಿನ ಕಹಿ ತೆಗೆಯಲು ಬಳಸಿ ಅಮ್ಮ ಹೇಳಿಕೊಟ್ಟ 5 ಟಿಪ್ಸ್

ಹಾಗಲಕಾಯಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದ್ರೆ ಅದು ಕಹಿ ಆಗಿರುತ್ತೆ ಅಂತ ತುಂಬಾ ಜನರು ಇದರಿಂದ ದೂರವಿರುತ್ತಾರೆ. ಅದರಲ್ಲಿಯೂ ಮಧುಮೇಹಿಗಳಿಗೆ ಹಾಗಲಕಾಯಿ ರಾಮಬಾಣ. ಹಾಗಲಕಾಯಿಯಲ್ಲಿನ ಕಹಿ ಅಂಶ ಕಡಿಮೆ ಮಾಡುವ ಮೂಲಕ ಇದನ್ನು ಸೇವಿಸಬಹುದು. 

27

ಸಾಂಪ್ರದಾಯಿಕ ವಿಧಾನಗಳ ಮೂಲಕ ಹಾಗಲಕಾಯಿಯಲ್ಲಿನ ಅಂಶ ಕಡಿಮೆ  ಮಾಡಬಹುದು. ಈ ರೀತಿ ಮಾಡೋದರಿಂದ ಕಹಿ ಕಡಿಮೆಯಾಗಿ ಹಾಗಲಕಾಯಿ ಅಡುಗೆ ತುಂಬಾನೇ ರುಚಿಕರವಾಗುತ್ತದೆ. ಈ ವಿಧಾನದ ಮೂಲಕ ಕಹಿ ಅಂಶ ಕಡಿಮೆ ಮಾಡಿ ಹಳ್ಳಿಗಳಲ್ಲಿ ಹಾಗಲಕಾಯಿ ಬಳಸಿ ಅಡುಗೆ ಮಾಡಲಾಗುತ್ತದೆ.

37
ಸಲಹೆ 1

ಹಾಗಲಕಾಯಿ ಮೇಲಿನ ಒರಟಾಗಿರೋದನ್ನು ಕತ್ತರಿಸಿ ತೆಗೆದುಕೊಳ್ಳಿ. ಇದರಿಂದ ಹಾಗಲಕಾಯಿ ಮೇಲ್ಭಾಗದ ಕಡಿಮೆಯಾಗುತ್ತದೆ. ಹಾಗಲಕಾಯಿ ಮೇಲ್ಭಾಗದ ಒರಟು ಭಾಗವೇ  ಹೆಚ್ಚು ಕಹಿಯಾಗಿರುತ್ತದೆ. ಮೇಲ್ಭಾಗದ ಸಿಪ್ಪೆ ತೆಗೆಯೋದರಿಂದ ಹಾಗಲಕಾಯಿ ಕಹಿ ಕಡಿಮೆಯಾಗುತ್ತದೆ. 

47
ಸಲಹೆ 2

ಹಾಗಲಕಾಯಿಯಲ್ಲಿನ ಬೀಜಗಳನ್ನು ತೆಗೆದು ಅಡುಗೆಗೆ ಬಳಸಿಕೊಳ್ಳಬೇಕು. ಈ ಬೀಜಗಳಿಂದ ಕಹಿ ಹೆಚ್ಚಾಗುತ್ತದೆ. ಬೀಜಗಳನ್ನು ತೆಗೆಯೋದರಿಂದ ಕಹಿ ಅಂಶ ಕಡಿಮೆ  ಮಾಡಬಹುದು . 

57
ಸಲಹೆ 3

ಕತ್ತರಿಸಿಕೊಂಡಿರುವ ಹಾಗಲಕಾಯಿಯನ್ನು ಉಪ್ಪಿನ ನೀರಿನಲ್ಲಿ 20 ರಿಂದ 30 ನಿಮಿಷ  ನೆನಸಿಟ್ಟುಕೊಳ್ಳಬೇಕು. ನಂತರ ನೀರು ತೆಗೆದು ಕಾಟನ್ ಬಟ್ಟೆಯಲ್ಲಿ ಹಾಗಲಕಾಯಿ  ಹಾಕಿಕೊಂಡು ಒತ್ತಿಕೊಳ್ಳಬೇಕು.  ಇದರಿಂದ  ಸಂಪೂರ್ಣವಾಗಿ ನೀರಿನಂಶ ಹೋಗುತ್ತದೆ. ಈ ಮೂಲಕವೂ ಹಾಗಲಕಾಯಿಯಲ್ಲಿನ ಕಹಿ ಅಂಶ ತೆಗೆಯಬಹುದು.

67
ಸಲಹೆ 4

ಉಪ್ಪು ನೀರಿನಲ್ಲಿ ನೆನೆಸಿದ ಹಾಗಲಕಾಯಿಯನ್ನು ಬಿಸಿನಲ್ಲಿ ಎರಡರಿಂದ ಮೂರು ಗಂಟೆಗಳ ಕಾಲ ಒಣಗಿಸಿಕೊಳ್ಳಬೇಕು. ಹೀಗೆ ಮಾಡೋದರಿಂದ ನೀರಿನಂಶ ಆವಿಯಾಗಿ ಹಾಗಲಕಾಯಿಯಲ್ಲಿನ ಕಹಿ ಅಂಶ ಕಡಿಮೆಯಾಗುತ್ತದೆ. 

77
ಸಲಹೆ 5

ಹಾಗಲಕಾಯಿ ಅಡುಗೆ ಮಾಡುವಾಗ ತುಂಡು ಬೆಲ್ಲ ಹಾಕೋದರಿಂದ ಕಹಿ ಕಡಿಮೆಯಾಗುತ್ತದೆ. ಜೀರಿಗೆ ಸೇರಿದಂತೆ ಹೆಚ್ಚು ಮಸಾಲೆಗಳನ್ನು ಬಳಸಿದ್ರೆ  ಹಾಗಲಕಾಯಿಯಲ್ಲಿನ ಕಹಿ ಅಂಶ ಕಡಿಮೆಯಾಗಬಹುದು. ಹಾಗಲಕಾಯಿ ಪದಾರ್ಥ ತಯಾರಿಸಿದ ಬಳಿಕ ನಿಂಬೆಹಣ್ಣಿನ ರಸ ಸೇರಿಸಿಕೊಳ್ಳಬಹುದು.

Read more Photos on
click me!

Recommended Stories