ರೆಸಿಪಿ - ಕೆಲವೇ ನಿಮಿಷಗಳಲ್ಲಿ ಮಾಡಬಹುದು ಟೇಸ್ಟಿ ವಾಲ್‌ನಟ್‌ ಬರ್ಫಿ!

First Published Mar 24, 2021, 7:17 PM IST

ಮನೆಗೆ ದಿಢೀರ್  ಎಂದು ಗೆಸ್ಟ್ ಬಂದಾಗ ಅಥವಾ ಮಕ್ಕಳ ಬರ್ತ್‌ಡೇ ಪಾರ್ಟಿ ಇರಲಿ ಸ್ವೀಟ್ಸ್‌ ಇಲ್ಲದೇ ಆತಿಥ್ಯ ಕಂಪ್ಲೀಟ್‌ ಅನಿಸುವುದಿಲ್ಲ. ಅಂತಹ ಸಂದರ್ಭ ಅಂಗಡಿಯಿಂದ ಖರೀದಿಸುವುದಕ್ಕಿಂತ ಮನೆಯಲ್ಲೇ ಸಿಹಿ ತಿಂಡಿ ಮಾಡಿದರೆ, ಎಲ್ಲರಿಗೂ ಖುಷಿಯಾಗುತ್ತದೆ. ಮನೆಯಲ್ಲಿಯೇ ಸ್ವೀಟ್‌ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎನ್ನುವರಿಗಾಗಿ ಇಲ್ಲಿದೆ ಸಖತ್‌ ಈಸೀ ಹಾಗೂ ಮೈಕ್ರೋ ಒವನ್‌ನಲ್ಲಿ  ಕೆಲವೇ ನಿಮಿಷಗಳಲ್ಲಿ ಮಾಡಬಹುದಾದ ವಾಲ್‌ನಟ್ಸ್‌ ಬರ್ಫಿ ರೆಸಿಪಿ. 

ವಾಲ್‌ನಟ್‌ ಬರ್ಫಿ ತಯಾರಿಸಲು 12 ಕಪ್ ವಾಲ್‌ನಟ್ಸ್‌, 2 ಚಮಚ ಸಕ್ಕರೆ, 2 ಚಮಚ ಹಾಲಿನ ಪುಡಿ, 2 ಚಮಚ ಹಾಲು, ಒಂದು ಚಿಟಿಕೆ ಜಾಯಿಕಾಯಿ ಪುಡಿ, 1 ಚಮಚ ತುಪ್ಪ.
undefined
ಮೊದಲನೆಯದಾಗಿ, ಮೈಕ್ರೊವೇವ್ ಸೇಫ್ ಬಟ್ಟಲಿನಲ್ಲಿ ಹಾಲು, ಹಾಲಿನ ಪುಡಿ, ಜಾಯಿಕಾಯಿ ಪುಡಿ ಮತ್ತು ಸಕ್ಕರೆಯನ್ನು ಹಾಕಿ.
undefined
ಮತ್ತೊಂದು ಮೈಕ್ರೊವೇವ್ ಸೇಫ್ ಬಟ್ಟಲಿನಲ್ಲಿ ವಾಲ್‌ನಟ್ಸ್‌ ಮತ್ತು ತುಪ್ಪ ಚೆನ್ನಾಗಿ ಮಿಕ್ಸ್‌ ಮಾಡಿ.ಅದನ್ನು 2 ನಿಮಿಷಗಳ ಕಾಲ ಮೈಕ್ರೊವೇವ್‌ ಮಾಡಿ. ವಾಲ್‌ನಟ್ಸ್‌ನ ಚಿಕ್ಕ ಚಿಕ್ಕ ಪೀಸ್‌ ಬಳಸಿ.
undefined
ಇನ್ನೊಂದು ಬೌಲ್‌ನಲ್ಲಿರುವ ಹಾಲಿನ ಮಿಶ್ರಣವನ್ನು ವಾಲ್‌ನಟ್‌ಗೆ ಬೆರೆಸಿ ಮೈಕ್ರೊವೇವ್‌ನಲ್ಲಿ 1 ನಿಮಿಷ ಇರಿಸಿ.
undefined
ಇದಕ್ಕೆ ಸ್ವಲ್ಪ ಚಾಕೊಲೇಟ್ ಅಥವಾ ಕೋಕೋ ಪೌಡರ್ ಮಿಕ್ಸ್‌ ಮಾಡಿದಲ್ಲಿ ಮಕ್ಕಳು ಬಹಳ ಖುಷಿಯಿಂದ ತಿನ್ನುತ್ತಾರೆ.
undefined
ನಂತರ ಟ್ರೇಗೆ ತುಪ್ಪ ಸವರಿ ವಾಲ್‌ನಟ್‌ನ ಮಿಶ್ರಣವನ್ನು ಸುರಿಯಿರಿ. ಇದನ್ನು 1 ಗಂಟೆ ಕಾಲ ಸೆಟ್‌ ಆಗಲು ಬಿಡಿ
undefined
ಇತರ ನಟ್ಸ್‌ನಿಂದ ಅಲಂಕರಿಸಿಬೇಕಾದ ಆಕಾರದಲ್ಲಿ ಕತ್ತರಿಸಿದರೆ ವಾಲ್‌ನಟ್ಟ್‌ ಬರ್ಫಿ ಸವಿಯಲು ರೆಡಿ.
undefined
ಒಂದು ಕೆಜಿ 1200 ರಿಂದ 1500 ರೂಪಾಯಿಗೆ ಲಭ್ಯವಿರುವ ವಾಲ್‌ನಟ್ ಬರ್ಫಿ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ತಯಾರಿಸಿ ಎಂಜಾಯ್‌ ಮಾಡಿ.
undefined
click me!