ರೆಸಿಪಿ: ದೀಪಾವಳಿಗಾಗಿ ಮನೆಯಲ್ಲೇ ತಯಾರಿಸಿ ಫ್ರೆಶ್‌ ಕೋವಾ!

First Published | Nov 9, 2020, 5:27 PM IST

ಹಬ್ಬವು ಹತ್ತಿರವಾದ ಹಾಗೇ ಹೊಸ ಹೊಸ ಸಿಹಿತಿಂಡಿ ತಯಾರಿಸುವ ಯೋಜನೆಯೂ ಫ್ರಾರಂಭವಾಗುತ್ತದೆ. ಹೆಚ್ಚಿನ ಸ್ವೀಟ್ಸ್‌ ತಯಾರಿಸಲು ಕೋವಾ ಅಗತ್ಯ. ಫ್ರೆಶ್‌ ಕೋವಾವನ್ನು ನೀವು ಮನೆಯಲ್ಲೇ ಸುಲಭವಾಗಿ ಪ್ರಿಪೇರ್‌ ಮಾಡಬಹುದು. ಅದೂ  ಕೆಲವೇ ನಿಮಿಷಗಳಲ್ಲಿ   ಮಾರುಕಟ್ಟೆಯ್ಲಲಿ ಸಿಗುವಂತಹ ಕೋವಾ ಮನೆಯಲ್ಲೇ ರೆಡಿ. 

ಸಾಮಗ್ರಿಗಳು : 1 ಕಪ್ ಅಥವಾ 200 ಗ್ರಾಂ ಹಾಲಿನ ಪುಡಿ, 2 ಚಮಚ ಬೆಣ್ಣೆ, ಅರ್ಧ ಕಪ್ ಹಾಲು ಮತ್ತು 4 ಕಪ್ ಕೆನೆ.
ಮೊದಲು, ಬಾಣಲೆಯಲ್ಲಿ ಬೆಣ್ಣೆಯನ್ನು ಕರಗಿಸಿಕೊಳ್ಳಿ. ಉಪ್ಪು ಇಲ್ಲದಬಿಳಿ ಬೆಣ್ಣೆ ಅಗತ್ಯ ಎಂದು ನೆನಪಿನಲ್ಲಿಡಿ. ಬೆಣ್ಣೆಯನ್ನು ಸಣ್ಣ ಉರಿಯಲ್ಲಿ ಕರಗಿಸಿ.
Tap to resize

ನಂತರ ಅದಕ್ಕೆ ಹಾಲು ಸೇರಿಸಿ ಮತ್ತು ಬೆಣ್ಣೆ, ಕೆನೆ ಮತ್ತು ಹಾಲು ಚೆನ್ನಾಗಿ ಮಿಕ್ಸ್‌ ಆಗಲು ಬಿಡಿ. ನಿರಂತರವಾಗಿ ಈ ಮಿಶ್ರಣವನ್ನು ಕೈಯಾಡುತ್ತಿರಿ.
ಉಂಡುಂಡೆಯಾಗದಂತೆ ಎಚ್ಚರ ವಹಿಸಿ.
ಇದರ ನಂತರ, ಹಾಲಿನ ಪುಡಿಯನ್ನು ನಿಧಾನವಾಗಿ ಸ್ವಲ್ಪ ಸ್ಪಲ್ಪ ಸೇರಿಸಿ, ಮಿಕ್ಸ್‌ ಮಾಡುತ್ತಾ ಇರಿ. ಅಷ್ಟು ಹಾಲಿನ ಪುಡಿಯನ್ನು ಒಟ್ಟಿಗೆ ಹಾಕಬೇಡಿ. ಹಾಗೆ ಮಾಡುವುದರಿಂದ ಹಾಲಿನ ಪುಡಿ ಗಂಟಾಗುತ್ತದೆ.
2 ನಿಮಿಷಗಳ ನಂತರ ಹಾಲು ದಪ್ಪವಾಗಲು ಪ್ರಾರಂಭಿಸಿತ್ತದೆ. ಮಿಶ್ರಣವು ಒಟ್ಟು ಸೇರುವವರೆಗೆ ಮಿಕ್ಸ್‌ ಮಾಡುತ್ತಾ ಇರಿ.
ಮಿಶ್ರಣ ಪ್ಯಾನ್‌ನಿಂದ ಬೇರ್ಪಟ್ಟು, ಹೊಳೆಯಲು ಪ್ರಾರಂಭಿಸಿದಾಗ ಕೋವಾ ಬಹುತೇಕ ಸಿದ್ಧವಾಗಿದೆ ಎಂದು ಅರ್ಥ
ಈಗ ಅದನ್ನು ತಣ್ಣಗಾಗಲು ಬಿಡಿ. ನಂತರ ಇದನ್ನು ನಿಮಗೆ ಇಷ್ಟವಾದ ಸ್ವೀಟ್‌ ತಯಾರಿಸಲು ಬಳಸಿ.

Latest Videos

click me!