Walnut benefits in kannada: ಚಳಿಗಾಲದಲ್ಲಿ ಪ್ರತಿದಿನ ವಾಲ್‌ನಟ್ ತಿನ್ನೋದ್ರಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ವಾಲ್‌ನಲ್ಲಿ ಹೆಲ್ತೀ ಫ್ಯಾಟ್, ಫೈಬರ್, ಪ್ರೊಟೀನ್ ರೋಗ ನಿರೋಧಕ ಶಕ್ತಿ ಸಮೃದ್ಧವಾಗಿರೋದ್ರಿಂದ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ವಾಲ್ನಟ್ ತಿನ್ನುವುದು ತುಂಬಾ ಮುಖ್ಯ.
Walnut benefits in kannada: ಚಳಿಗಾಲದಲ್ಲಿ ಪ್ರತಿದಿನ ವಾಲ್‌ನಟ್ ತಿನ್ನೋದ್ರಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ವಾಲ್‌ನಲ್ಲಿ ಹೆಲ್ತೀ ಫ್ಯಾಟ್, ಫೈಬರ್, ಪ್ರೊಟೀನ್ ರೋಗ ನಿರೋಧಕ ಶಕ್ತಿ ಸಮೃದ್ಧವಾಗಿರೋದ್ರಿಂದ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ವಾಲ್ನಟ್ ತಿನ್ನುವುದು ತುಂಬಾ ಮುಖ್ಯ. ಆದರೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅವು ಯಾರು ತಿನ್ನಬಹುದು, ಯಾರು ತಿನ್ನಬಾರದು, ಯಾವಾಗ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನು ಇಲ್ಲಿ ತಿಳಿಸಲಾಗಿದೆ.
ವಾಲ್ನಟ್‌ನಲ್ಲಿಒಮೆಗಾ-3 ಕೊಬ್ಬಿನಾಮ್ಲ, ರೋಗ ನಿರೋಧಕಗಳು ಮೆದುಳಿನ ಆರೋಗ್ಯಕ್ಕೆ ತುಂಬಾ ಮುಖ್ಯ. ಅದರಲ್ಲೂ ನಿಮ್ಮ ಸ್ಮರಣಶಕ್ತಿ ಮತ್ತು ಏಕಾಗ್ರತೆಯತೆ ಹೆಚ್ಚಿಸಲು, ಮಾನಸಿಕ ಆರೋಗ್ಯಕ್ಕೆ ನಿಯಮಿತವಾಗಿ ವಾಲ್‌ನಟ್ ತಿನ್ನುವುದು ಒಳ್ಳೆಯದು.
25
ವಾಲ್‌ನಟ್ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು
ವಿಶೇಷ ಅಂದ್ರೆ ವಾಲ್‌ನಟ್ ಹೆಚ್ಚಿನ ಕ್ಯಾಲೋರಿ ಹೊಂದಿದ್ರೂ ಕೂಡ ಅವುಗಳಲ್ಲಿ ಫೈಬರ್, ಪ್ರೊಟೀನ್, ಹೆಲ್ತಿ ಫ್ಯಾಟ್ ಯೆಥೇಚ್ಛವಾಗಿರೋದ್ರಿಂದ ಹೊಟ್ಟೆ ತುಂಬಿದ ಫೀಲ್ ನೀಡುತ್ತೆ. ಇದರಿಂದ ಜಂಕ್ ಫುಡ್ ಅಥವಾ ಪದೇಪದೆ ತಿಂಡಿ ತಿನ್ನುವುದನ್ನ ತಪ್ಪಿಸುತ್ತೆ.
ಇಂದು ಹೆಚ್ಚಿನವರಿಗೆ ಕೂದಲುವ ಸಮಸ್ಯೆ. ವಾಲ್‌ನಟ್ ತಿನ್ನೋದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ನಿಯಮಿತವಾಗಿ ವಾಲ್‌ನಟ್ ತಿನ್ನೋದರಿಂದ ಕೂದಲು ಉದುರುವ ಸಮಸ್ಯೆ ನಿಲ್ಲುತ್ತೆ ಅಲ್ಲದೆ ವೇಗವಾಗಿ ಕೂದಲು ಬೆಳೆಯುತ್ತೆ. ಆದರೂ ಇದು ಪ್ರತಿಯೊಬ್ಬರಿಗೂ ಬೆಳೆಯುತ್ತೆ ಎಂದು ಹೇಳಲಾಗುವುದಿಲ್ಲ.
35
ಚರ್ಮದ ಆರೋಗ್ಯಕ್ಕೆ ವಾಲ್ನಟ್ ತಿನ್ನಿ
ವಾಲ್‌ನಟ್‌ನಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದರಿಂದಾಗಿ ಚಳಿಗಾಲದಲ್ಲಿ ಚರ್ಮವನ್ನು ರಕ್ಷಿಸುತ್ತೆ. ಪ್ರತಿದಿನ ವಾಲ್ನಟ್ ತಿನ್ನುವುದುರಿಂದ ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನ. ಅದರಲ್ಲೂ ವಾಲ್‌ನಟ್‌ನಲ್ಲಿ ಆಂಟಿಆಕ್ಸಿಡೆಂಟ್ ಹೊಂದಿದ್ದು ಜೀವಕೋಶಗಳಿಗೆ ಹಾನಿಯಾಗೋದನ್ನ ತಡೆಯುತ್ತೆ.
ಮೆದುಳು, ಚರ್ಮ, ಕೂದಲಿನ ಆರೋಗ್ಯಕ್ಕಾಗಿ ವಾಲ್‌ನಟ್ ತಿನ್ನೋದು ಒಳ್ಳೆಯದು. ಆದರೆ ತಿನ್ನುವ ಪ್ರಮಾಣ ತಿಳಿದುಕೊಳ್ಳುವುದು ತುಂಬಾ ಮುಖ್ಯ. ದಿನಕ್ಕೆ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆರೋಗ್ಯಕರವಾಗಿ ನೀವು ದಿನಕ್ಕೆ ಎರಡು ವಾಲ್ನಟ್ ಅಥವ ಮೂರು ತಿನ್ನಬಹುದು. ಹೆಚ್ಚು ತಿಂದಷ್ಟು ಹೆಚ್ಚು ಆರೋಗ್ಯಕರ ಎಂದು ತಿಂದರೆ ತೂಕ ಹೆಚ್ಚಾಗಬಹುದು. ಅಥವಾ ಜೀರ್ಣಕ್ರಿಯೆ ಸಮಸ್ಯೆಗೆ ಕಿರಿಕಿರಿಯಾಗಬಹುದು.
55
ವಾಲ್‌ನಟ್ ಯಾರು ತಿನ್ನಬಾರದು?
ಕೆಲವರಿಗೆ ಸೀಡ್ಸ್ ತಿನ್ನುವುದರಿಂದ ಅಲರ್ಜಿ ಆಗುತ್ತೆ. ಅಂಥವರು ವಾಲ್‌ನಟ್ ತಿನ್ನಬಾರದು. ಇನ್ನು ಮಧುಮೇಹ ಇರೋರು, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು, ಕ್ಯಾಲೊರಿ ಗಮನದಲ್ಲಿಟ್ಟುಕೊಂಡು ನಿಯಮಿತವಾಗಿ ತಿನ್ನಬೇಕು. ಆದರೆ ಅತಿಯಾದರೆ ಅಮೃತವೂ ವಿಷ ಅಂತಾರಲ್ಲ ಹಾಗೆ ಹೆಚ್ಚು ವಾಲ್ನಟ್ ತಿನ್ನೊದು ಕೂಡ ಒಳ್ಳೆಯದಲ್ಲ. ಪ್ರತಿದಿನ ನಿಯಮಿತವಾಗಿ ಎರಡು ಅಥವಾ ಮೂರು ತಿನ್ನಿ. ಆರೋಗ್ಯಕ್ಕೆ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.