ಮನೆಯಲ್ಲಿಯೇ ತಯಾರಿಸಿ ರೆಸ್ಟೋರೆಂಟ್ ಸ್ಟೈಲ್ ಸಾಫ್ಟ್, ಯಮ್ಮೀ ಆಮ್ಲೆಟ್

First Published | Jun 2, 2021, 2:47 PM IST

ರುಚಿಕರವಾದ ರೆಸ್ಟೋರೆಂಟ್ ಶೈಲಿಯ ಮೃದುವಾದ ಆಮ್ಲೆಟ್ ಗಾಗಿ  ಆಗಾಗ್ಗೆ ಹಂಬಲಿಸುತ್ತೀರಾ? ಅದಕ್ಕಾಗಿ ಪ್ರತಿದಿನ ರೆಸ್ಟೋರೆಂಟ್ ಗೆ ಹೋಗುವುದು, ನೆಚ್ಚಿನ ಸ್ಪಂಜಿ, ಚೀಸಿ ಮತ್ತು ಮೃದುವಾದ ಆಮ್ಲೆಟ್ ತಿನ್ನೋದು ಸಾಧ್ಯವಿಲ್ಲ, ಆದರೆ ಅದೇ ರುಚಿ ಮತ್ತು ವಿನ್ಯಾಸ ಸಿಗೋದು ಕಷ್ಟ ಎಂದು ಭಾವಿಸುತ್ತೀರಾ? ಚಿಂತೆ ಬಿಡಿ, ಮನೆಯಲ್ಲಿ ತಯಾರಿಸಿದ ಆಮ್ಲೆಟ್ ಗಳನ್ನು ಫ್ಲಫಿಯರ್ ಮತ್ತು ರುಚಿಕರವಾಗಿ ಮಾಡಲು ಕೆಲವು ಹ್ಯಾಕ್ ಗಳು ಇಲ್ಲಿವೆ. ಈ ಹ್ಯಾಕ್ ಗಳನ್ನು ಉಪಯೋಗಿಸಿ ಪ್ಲಫಿ ಆಮ್ಲೆಟ್ ತಯಾರಿಸೋದು ಹೇಗೆ ನೋಡಿ... 

ಮೊಟ್ಟೆಗಳನ್ನು ಹಾಲಿನೊಂದಿಗೆ ಬೆರೆಸಿ:ಆಮ್ಲೆಟ್ ಮಿಶ್ರಣಕ್ಕೆ ಸ್ವಲ್ಪ ಭಾಗ ಹಾಲನ್ನು ಸೇರಿಸುವುದು ಹೆಚ್ಚು ಸ್ಪಂಜಿ ಆಮ್ಲೆಟ್ ಅನ್ನು ನೀಡುತ್ತದೆ. ಕೇವಲ 1-2 ಟೇಬಲ್ ಚಮಚ ಹಾಲು ಅಥವಾ ತಾಜಾ ಕ್ರೀಮ್ ಅನ್ನು ಸೇರಿಸಬಹುದು ಮತ್ತು ಮೊಟ್ಟೆಯ ಈ ಮಿಶ್ರಣವನ್ನು ಸ್ವಲ್ಪ ನೊರೆಬರುವವರೆಗೆ ಮಿಕ್ಸ್ ಮಾಡಿ.
ನಂತರ ಪ್ಯಾನ್ ಅನ್ನು ಬೆಣ್ಣೆಯಿಂದ ಗ್ರೀಸ್ ಮಾಡಿ ಮತ್ತು ನಂತರ ಮಿಶ್ರಣವನ್ನು ಪ್ಯಾನ್ ಗೆ ಹಾಕಿ. ಇದರಿಂದ ಸ್ಪಾಂಜಿನಂತಹ ಆಮ್ಲೆಟ್ ತಯಾರಾಗುತ್ತದೆ.
Tap to resize

ಬೆಣ್ಣೆ ಹಾಕೋದು ಬೆಸ್ಟ್ :ನಿಸ್ಸಂದೇಹವಾಗಿಆಮ್ಲೆಟ್ ಗಳಿಗೆ ಕ್ಲಾಸಿಕ್ ಬೆಣ್ಣೆ ಮತ್ತು ಕೆನೆ ರುಚಿಯನ್ನು ಸೇರಿಸುತ್ತದೆ, ಆದರೆ ಅದು ಆಮ್ಲೆಟ್ ಗಳ ವಿನ್ಯಾಸವನ್ನು ಸಹ ಹೆಚ್ಚಿಸಬಹುದು ಎಂದು ತಿಳಿದಿದೆಯೇ.
ಹೌದು, ಆಮ್ಲೆಟ್ ಅನ್ನು ಪ್ಯಾನ್ ಗೆ ಹಾಕುವ ಮೊದಲು ಕರಗಿದ ಬೆಣ್ಣೆಯನ್ನು ಬಾಣಲೆಗೆ ಸೇರಿಸುವುದು ಆಮ್ಲೆಟ್ ಬೇಗನೆ ಉಬ್ಬಿ ಬರಲು ಸಹಾಯ ಮಾಡುತ್ತದೆ.
ಬೆಣ್ಣೆ ಬಿಸಿಯಾದಾಗ ಮಾತ್ರ ಮಿಶ್ರಣನ್ನು ಸೇರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಇದು ಆಮ್ಲೆಟ್ ಮಿಶ್ರಣ ಉಬ್ಬಿ ಬರಲು ಮತ್ತು ಮೃದುವಾಗಲು ಬೆಣ್ಣೆ ಸಹಾಯ ಮಾಡುತ್ತದೆ.
ಇದನ್ನು ಪ್ರತ್ಯೇಕವಾಗಿ ವಿಸ್ಕ್ ಮಾಡಿ :ಇದು ಮೃದುವಾದ ಆಮ್ಲೆಟ್ ಗಳನ್ನು ತಯಾರಿಸಲು ಸಹಾಯ ಮಾಡುತ್ತದೆ, ಮೊಟ್ಟೆಯ ಹಳದಿ ಲೋಳೆ ಮತ್ತು ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕವಾಗಿ ವಿಕ್ಸ್ ಮಾಡಿ. ಇದು ಮನೆಯಲ್ಲಿ ತಯಾರಿಸಿದ ಆಮ್ಲೆಟ್ ಗಳಿಗೆ ಆ ಪರಿಪೂರ್ಣ ರೆಸ್ಟೋರೆಂಟ್ ರೀತಿಯ ವಿನ್ಯಾಸವನ್ನು ನೀಡಲು ಸಹಾಯ ಮಾಡುತ್ತದೆ.
ಮೊಟ್ಟೆಯ ಭಾಗಗಳು ನೊರೆಯಾಗಿ ಬದಲಾಗುವ ರೀತಿಯಲ್ಲಿ ವಿಕ್ಸ್ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ, ಇದು ಆಮ್ಲೆಟ್ ಗಳ ತುಂಬಾನೇ ಸ್ಮೂತ್ ಆಗಲು ಸಹಾಯ ಮಾಡುತ್ತದೆ. ಇದನ್ನು ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಮೊದಲನೆಯದಾಗಿ ಆಮ್ಲೆಟ್ ಗೆ ಟಾಪಿಂಗ್ ಗಳನ್ನು ಸೇರಿಸಲು ಉತ್ತಮ ಮಾರ್ಗವೆಂದರೆ ಬಾಣಲೆಯ ಮೇಲೆ ಮಿಶ್ರಣವನ್ನು ಸುರಿದ ನಂತರ ಅವುಗಳನ್ನು ಸೇರಿಸುವುದು. ಅದಕ್ಕೂ ಮುನ್ನ ಯಾವುದೇ ಮಸಾಲೆಗಳನ್ನು ಸೇರಿಸಬೇಡಿ.
ಆದರೆ ಆಮ್ಲೆಟ್ ಗೆ ತುಂಬಾ ತರಕಾರಿಗಳು, ಮಾಂಸಗಳು ಅಥವಾ ಹೆಚ್ಚು ಚೀಸ್ ನೊಂದಿಗೆ ಲೋಡ್ ಮಾಡುವುದು ಫ್ಲಫಿನೆಸ್ ಅನ್ನು ಹಾಳುಮಾಡುತ್ತದೆ. ಇದು ಆಮ್ಲೆಟ್ ನ ರುಚಿಯನ್ನು ಬದಲಾಯಿಸುವುದಿಲ್ಲ, ಆದರೆ ಖಂಡಿತವಾಗಿಯೂ ಆಮ್ಲೆಟ್ ನ ವಿನ್ಯಾಸವನ್ನು ಬದಲಾಯಿಸುತ್ತದೆ.
ಚಿಟಿಕೆ ಬೇಕಿಂಗ್ ಸೋಡಾ ಸೇರಿಸಿ:ಮೊಟ್ಟೆಗಳನ್ನು ವಿಸ್ಕ್ ಮಾಡುವಾಗ, ಚಿಟಿಕೆ ಬೇಕಿಂಗ್ ಸೋಡಾ ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ, ಇದು ಆಮ್ಲೆಟ್ ಗಳನ್ನು ಸೂಪರ್ ಫ್ಲಫಿ ಮಾಡುತ್ತದೆ.

Latest Videos

click me!