ದೋಸೆ ಮಾಡಲು ತುಂಬಾನೇ ಸಮಯ ಬೇಕಾಗುತ್ತದೆ. ದೋಸೆಗೆ ತೆಂಗಿನಕಾಯಿ ಚಟ್ನಿ ಮಾಡಬೇಕಾ? ಆಲೂ ಪಲ್ಯಾ ಅಥವಾ ಸಾಂಬಾರ್ ಮಾಡುವ ಗೊಂದಲವಿರುತ್ತದೆ. ಮೊಟ್ಟೆ ಬಳಸಿ ದೋಸೆ ಮಾಡೋದರಿಂದ ಯಾವುದೇ ಚಟ್ನಿ ಬೇಕಾಗಲ್ಲ. ಬೆಳಗ್ಗೆ ಹಿಟ್ಟು ಉಳಿದಿದ್ರೆ ಸಂಜೆ ಮಕ್ಕಳಿಗೆ ಎಗ್ ದೋಸೆ ಮಾಡಿಕೊಡಿ.
29
ಬೇಕಾಗುವ ಸಾಮಗ್ರಿಗಳು
ಮೊಟ್ಟೆ: 3, ದೋಸೆ ಹಿಟ್ಟು, ಈರುಳ್ಳಿ: ಒಂದು (ಚಿಕ್ಕ ಗಾತ್ರದ್ದು), ಕ್ಯಾರಟ್: ಒಂದು, ಪಾಲಕ್ ಸೊಪ್ಪು, ಕೆಂಪು ಮೆಣಸಿನಕಾಯಿ: ನಾಲ್ಕು, ಜೀರಿಗೆ: ಅರ್ಧ ಟೀ ಸ್ಪೂನ್, ಕೋತಂಬರಿ ಸೊಪ್ಪು, ಎಣ್ಣೆ,ಕಾಳು ಮೆಣಸಿನ ಪುಡಿ: 1/2 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಟೊಮೆಟೋ: ಒಂದು
39
ತಯಾರಿಸುವ ವಿಧಾನ
*ಮೊದಲು ಈರುಳ್ಳಿ, ಕ್ಯಾರಟ್, ಟೊಮೆಟೋ, ಪಾಲಕ್ ಸೊಪ್ಪು, ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಹಾಗೆ ಮೊದಲೇ ದೋಸೆ ಹಿಟ್ಟು ಸಹ ರೆಡಿ ಮಾಡಿಟ್ಟುಕೊಳ್ಳಿ.
49
*ಇದಾದ ಬಳಿಕ ಮೊಟ್ಟೆಯನ್ನು ಒಡೆದು ಬೌಲ್‌ಗೆ ಹಾಕಿಕೊಳ್ಳಬೇಕು. ಇದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ, ಪಾಲಕ್ ಸೊಪ್ಪು, ಕೋತಂಬರಿ ಸೊಪ್ಪು, ಕಾಳು ಮೆಣಸಿನಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.
59
*ಒಣಮೆಣಸಿನಕಾಯಿಯನ್ನು ಫ್ರೈ ಮಾಡಿಕೊಂಡು ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೋ, ಜೀರಿಗೆ ಮತ್ತು ಚಿಟಿಕೆಯಷ್ಟು ಉಪ್ಪು ಸೇರಿಸಿ ತರಿತರಿಯಯಾಗಿ ರುಬ್ಬಿಕೊಳ್ಳಬೇಕು.
69
*ಈಗ ಒಲೆ ಆನ್ ಮಾಡ್ಕೊಂಡು ಕಾವಲಿ ಇರಿಸಿಕೊಳ್ಳಿ. ಕಾವಲಿ ಬಿಸಿಯಾಗುತ್ತಿದ್ದಂತೆ ಹಿಟ್ಟು ಹಾಕಿ ಹರಡಿಕೊಳ್ಳಬೇಕು. ಹಿಟ್ಟು ಬೇಯುತ್ತಿದ್ದಂತೆ ಮಿಕ್ಸ್ ಮಾಡಿಕೊಂಡಿರುವ ಮಿಶ್ರಣವನ್ನು ತೆಳುವಾಗಿ ಹರಡಿಕೊಳ್ಳಿ. ನಂತರ ದೋಸೆ ಮೇಲೆ ಪ್ಲೇಟ್ ಮುಚ್ಚಿ ಎರಡು ನಿಮಿಷ ಬೇಯಿಸಿಕೊಳ್ಳಿ.
79
*ಎರಡು ನಿಮಿಷದ ಬಳಿ ಮುಚ್ಚಳ ತೆಗೆದು ರುಬ್ಬಿಕೊಂಡಿರುವ ಕೆಂಪುಮೆಣಸಿನಕಾಯಿ ಚಟ್ನಿಯನ್ನು ದೋಸೆ ಮೇಲೆ ತೆಳುವಾಗಿ ಹರಡಿಕೊಳ್ಳಿ. ನಂತರ ಮೇಲೆ ಎಣ್ಣೆ ಸವರಬೇಕು. ಇದರಿಂದ ದೋಸೆ ಕ್ರಿಸ್ಪಿಯಾಗುತ್ತದೆ. ನಂತರ ಎರಡು ಬದಿಯಲ್ಲಿಯೂ ಬೇಯಿಸಿಕೊಂಡರೆ ರುಚಿಯಾದ ಕ್ರಿಸ್ಪೆ ಎಗ್ ದೋಸೆ ಸವಿಯಲು ಸಿದ್ಧವಾಗುತ್ತದೆ.
89
*ಎರಡು ನಿಮಿಷದ ಬಳಿ ಮುಚ್ಚಳ ತೆಗೆದು ರುಬ್ಬಿಕೊಂಡಿರುವ ಕೆಂಪುಮೆಣಸಿನಕಾಯಿ ಚಟ್ನಿಯನ್ನು ದೋಸೆ ಮೇಲೆ ತೆಳುವಾಗಿ ಹರಡಿಕೊಳ್ಳಿ. ನಂತರ ಮೇಲೆ ಎಣ್ಣೆ ಸವರಬೇಕು. ಇದರಿಂದ ದೋಸೆ ಕ್ರಿಸ್ಪಿಯಾಗುತ್ತದೆ. ನಂತರ ಎರಡು ಬದಿಯಲ್ಲಿಯೂ ಬೇಯಿಸಿಕೊಂಡರೆ ರುಚಿಯಾದ ಕ್ರಿಸ್ಪೆ ಎಗ್ ದೋಸೆ ಸವಿಯಲು ಸಿದ್ಧವಾಗುತ್ತದೆ.
99
*ಈ ದೋಸೆಯನ್ನು ಹಾಗೆ ಅಥವಾ ಕೆಂಪು ಚಟ್ನಿಯೊಂದಿಗೆ ಸವಿಯಬಹುದು. ಕೆಂಪು ಮೆಣಸಿನಕಾಯಿ ಚಟ್ನಿ ಬದಲು ಅಚ್ಚ ಖಾರದ ಪುಡಿಯನ್ನು ಬಳಸಬಹುದು. ಮೊಟ್ಟೆ ಮಿಶ್ರಣ ಮಾಡುವಾಗಲೇ ಅಚ್ಚ ಖಾರದ ಪುಡಿ ಸೇರಿಸಿಕೊಳ್ಳಬಹುದು. ಹಸಿಮೆಣಸಿನಕಾಯಿ ಬಳಸಿ ಗ್ರೀನ್ ಎಗ್ ದೋಸೆ ಮಾಡಿಕೊಳ್ಳಬಹುದು.