ಸುಲಭವಾಗಿ ಮನೆಯಲ್ಲಿಯೇ ಮಾಡಿ ಗರಿಗರಿಯಾದ ತೆಂಗಿನಕಾಯಿ ವಡೆ

ಉದ್ದಿನ ವಡೆ ತಿಂದು ಬೇಜಾರಾಗಿದೆಯೇ? ಹಾಗಾದರೆ ಗರಿಗರಿಯಾದ ತೆಂಗಿನಕಾಯಿ ವಡೆ ಟ್ರೈ ಮಾಡಿ. ಇದು ಅದ್ಭುತ ರುಚಿಯನ್ನು ಹೊಂದಿರುವುದರಿಂದ ನಿಮ್ಮ ಮನೆಯವರೆಲ್ಲರೂ ಇಷ್ಟಪಡುತ್ತಾರೆ. ನಿಮ್ಮನ್ನು ಹೊಗಳುತ್ತಾರೆ. ತೆಂಗಿನಕಾಯಿ ವಡೆ ಮಾಡುವುದು ಹೇಗೆ ಎಂದು ಈಗ ತಿಳಿಯೋಣ.

Crispy Coconut Vada Recipe Easy South Indian Snack mrq

ದಕ್ಷಿಣ ಭಾರತದಲ್ಲಿ ತಿನ್ನುವ ಆಹಾರಗಳಲ್ಲಿ ವಡೆಗೆ ಒಂದು ಮುಖ್ಯವಾದ ಸ್ಥಾನವಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ಟಿಫೆನ್ ಸೆಂಟರ್‌ಗಳಲ್ಲಿ ವಡೆ ತಯಾರಿಸುತ್ತಾರೆ. ಕೆಲವು ಹನುಮಾನ್ ದೇವಸ್ಥಾನಗಳಲ್ಲಿ ವಡೆಗಳನ್ನು ಪ್ರಸಾದವಾಗಿ ಕೂಡಾ ಕೊಡುತ್ತಾರೆ. ಸೌತ್ ಇಂಡಿಯಾದಲ್ಲಿ ಇದು ತುಂಬಾ ಫೇಮಸ್.

ಹೊರಗೆ ಕ್ರಿಸ್ಪಿಯಾಗಿ ಒಳಗೆ ಮೃದುವಾಗಿರುವ ಕೊಬ್ಬರಿ ವಡೆ ರುಚಿ, ವಾಸನೆ ಬಹಳ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ಈ ವಂಟಕವನ್ನು ಮನೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ತಯಾರಿಸುತ್ತಾರೆ.

ಕೊಬ್ಬರಿ ವಡಾ ತಯಾರಿಗೆ ಬೇಕಾಗುವ ಸಾಮಗ್ರಿಗಳು :

ಕಡಲೆ ಬೇಳೆ - 1 ಕಪ್ (2 ಗಂಟೆ ನೆನೆಸಿರಬೇಕು)
ಕೊಬ್ಬರಿ ತುರಿ - 1/2 ಕಪ್
ಹಸಿ ಮೆಣಸಿನಕಾಯಿ - 2 (ಸಣ್ಣಗೆ ಹೆಚ್ಚಿದ)
ಚಿಕ್ಕ ಈರುಳ್ಳಿ-    - 5 (ಹೆಚ್ಚಿದ)
ಇಂಗು - ಸ್ವಲ್ಪ
ಜೀರಿಗೆ - 1/2 ಟೀಸ್ಪೂನ್
ಕರಿಬೇವು -2 ರೆಂಬೆಗಳು
ಕೊತ್ತಂಬರಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಅಕ್ಕಿ ಹಿಟ್ಟು - 1 ಟೀಸ್ಪೂನ್ (ಕ್ರಿಸ್ಪಿನೆಸ್ ಗೋಸ್ಕರ)
ಎಣ್ಣೆ - ಕರಿಯಲು ಸರಿಪಡಾ


ಕೊಬ್ಬರಿ ವಡಾ ತಯಾರಿಸುವ ವಿಧಾನ :

*ಕಡಲೆ ಬೇಳೆಯನ್ನು 2 ಗಂಟೆ ನೆನೆಸಿ, ನೀರನ್ನು ತೆಗೆದು ಮಿಕ್ಸಿಯಲ್ಲಿ ಹಸಿಮೆಣಸಿನಕಾಯಿ, ಇಂಗು ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಬೇಕು. 
*ರುಬ್ಬಿದ ಈ ಮಿಶ್ರಣಕ್ಕೆ ಕೊಬ್ಬರಿ ತುರಿ, ಈರುಳ್ಳಿ, ಜೀರಿಗೆ, ಉಪ್ಪು, ಅಕ್ಕಿ ಹಿಂಡಿ, ಕೊತ್ತಂಬರಿ, ಕರಿಬೇವು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ.ವಡಾ ಮೃದುವಾಗಿ, ಕ್ರಿಸ್ಪಿಯಾಗಿ ಬರಬೇಕೆಂದರೆ ಮಿಶ್ರಣ ಜಾಸ್ತಿ ನೀರಿನಂಶ ಹೊಂದಿರಬಾರದು. .
*ಒಂದು ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ, ವಡಾಗಳನ್ನು ಹಾಕಿ, ಮಧ್ಯಮಧ್ಯದಲ್ಲಿ ತಿರುಗಿಸುತ್ತಾ, ಬಂಗಾರ ಬಣ್ಣ ಬರುವವರೆಗೆ ಬೇಯಿಸಬೇಕು.

ಬೆಚ್ಚಗಿರುವಾಗಲೇ ಕೊಬ್ಬರಿ ಚಟ್ನಿ, ಹಸಿಮೆಣಸಿನಕಾಯಿ ಚಟ್ನಿ, ಖಾರವಾಗಿರುವ ಪುದೀನಾ ಚಟ್ನಿ ಅಥವಾ ಕೊತ್ತಂಬರಿ ಚಟ್ನಿಯೊಂದಿಗೆ ವಡೆ ತಿಂದರೆ ಟೇಸ್ಟ್ ಬಹಳ ಚೆನ್ನಾಗಿರುತ್ತದೆ. ದಸಾಧಾರಣವಾಗಿ ಗ್ರಾಮಗಳಲ್ಲಿ ಹಬ್ಬದ ದಿನಗಳಲ್ಲಿ ಇದನ್ನು ವಿಶೇಷ ವಂಟಕವಾಗಿ ಮಾಡುವುದು ಆನವಾಯಿತಿ.

Latest Videos

click me!