ಎಣ್ಣೆ ಬದಲು ತುಪ್ಪ ಬಳಸಬಹುದೇ..?
ಎಲ್ಲಾ ಅಡುಗೆಗೂ ಎಣ್ಣೆ ಬದಲು ತುಪ್ಪ ಬಳಸೋದು ಒಳ್ಳೆಯದಲ್ಲ.ತುಪ್ಪ ಒಳ್ಳೆಯದಾದರೂ ಅದನ್ನೇ ಬಳಸೋದು ಸರಿಯಲ್ಲ. ಶೇಂಗಾ ಎಣ್ಣೆ, ಆಲಿವ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಎಲ್ಲದರಲ್ಲೂ ವಿಶೇಷ ಪೋಷಕಾಂಶಗಳಿವೆ. ತುಪ್ಪಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಇದೆ. ಇತರೆ ಎಣ್ಣೆಗಳಲ್ಲಿ ಮೋನೋಅನ್‌ಸ್ಯಾಚುರೇಟೆಡ್ (MUFA) ಪಾಲಿಅನ್‌ಸ್ಯಾಚುರೇಟೆಡ್ (PUFA) ಕೊಬ್ಬುಗಳಿವೆ. ಆದ್ದರಿಂದ ಎಲ್ಲಾ ಎಣ್ಣೆಗಳನ್ನು ಮಿತವಾಗಿ ಬಳಸಬೇಕು. ನಿಯಮಿತವಾಗಿ ಎಣ್ಣೆ ಬದಲಾಯಿಸಬೇಕು. ಒಂದೇ ಎಣ್ಣೆ ಬಳಸಬಾರದು.