Sabudana vada recipe tips Kannada: ಸಾಬೂದಾನ ವಡೆ ಹೊರಗಡೆ ಗರಿಗರಿಯಾಗಿ, ಒಳಗಡೆ ಮೃದುವಾಗಿ ಬಂದರೆ ತಿನ್ನಲು ಮಜಾ ಇರುತ್ತದೆ. ಆದರೆ ಅನೇಕ ಬಾರಿ ವಡೆಗಳು ಎಣ್ಣೆ ಕುಡಿಯುತ್ತವೆ ಅಥವಾ ಮೆತ್ತಗಾಗುತ್ತವೆ. ಆದರೆ ಹೋಟೆಲ್ ಶೈಲಿಯ ಪರ್ಫೆಕ್ಟ್ ವಡೆ ಮಾಡಲು ಸಣ್ಣ ಪುಟ್ಟ ತಪ್ಪುಗಳನ್ನ ತಿದ್ದಿಕೊಂಡರೆ ಸಾಕು.
ಸಾಬೂದಾನ ವಡೆ ಮಾಡುವುದು ಒಂದು ಕಲೆ. ನೆನೆಸುವ ವಿಧಾನದಿಂದ ಹಿಡಿದು ಎಣ್ಣೆಯಲ್ಲಿ ಕರಿಯುವವರೆಗೆ ಪ್ರತಿಯೊಂದು ಹಂತವೂ ಮುಖ್ಯ. ಸರಿಯಾದ ಹದ ಇಲ್ಲದಿದ್ದರೆ ವಡೆಗಳು ಒಡೆದು ಹೋಗಬಹುದು ಅಥವಾ ಸರಿಯಾಗಿ ಬೇಯದೆ ಇರಬಹುದು. ಆದರೆ ಈ ಕೆಳಗಿನ 8 ಅಂಶಗಳ ಬಗ್ಗೆ ಗಮನ ಹರಿಸಿದರೆ ನೀವು ಕೂಡ ಹೊರಗಡೆ ಸಿಗುವಷ್ಟೇ ರುಚಿಯಾದ ವಡೆಗಳನ್ನು ಮನೆಯಲ್ಲೇ ತಯಾರಿಸಬಹುದು.
29
ಅತಿಯಾಗಿ ಅಥವಾ ಕಡಿಮೆ ನೆನೆಸುವುದು
ಸಾಬೂದಾನ ಸರಿಯಾಗಿ ನೆನೆಯದಿದ್ದರೆ ವಡೆ ಗಟ್ಟಿಯಾಗುತ್ತದೆ. ಅತಿಯಾಗಿ ನೆನೆದರೆ ಅದು ಮುದ್ದೆಯಾಗಿ ಎಣ್ಣೆ ಜಾಸ್ತಿ ಕುಡಿಯುತ್ತದೆ. ಸಾಬೂದಾನವನ್ನು ಕೈಯಿಂದ ಒತ್ತಿದಾಗ ಅದು ಮೆತ್ತಗಿರಬೇಕು ಆದರೆ ತನ್ನ ಆಕಾರವನ್ನು ಕಳೆದುಕೊಳ್ಳಬಾರದು.
39
ಹೆಚ್ಚಿನ ನೀರನ್ನು ಸರಿಯಾಗಿ ಬಸಿಯದೇ ಇರುವುದು
ನೆನೆಸಿದ ನಂತರ ಸಾಬೂದಾನದಲ್ಲಿ ನೀರು ಉಳಿದುಕೊಂಡರೆ ಹಿಟ್ಟು ತೆಳುವಾಗಿ ಕರಿಯುವಾಗ ವಡೆಗಳು ಒಡೆದು ಹೋಗುತ್ತವೆ. ನೀರನ್ನು ಪೂರ್ತಿಯಾಗಿ ಬಸಿದು, ಸಾಬೂದಾನ ಸ್ವಲ್ಪ ಹೊತ್ತು ಒಣಗಲು ಬಿಟ್ಟರೆ ವಡೆಗಳು ಫರ್ಮ್ ಆಗಿ ಬರುತ್ತವೆ.
ವಡೆಗೆ ಆಲೂಗಡ್ಡೆ ಮುಖ್ಯವಾದ ಬೈಂಡಿಂಗ್ ಪದಾರ್ಥ. ಆಲೂಗಡ್ಡೆ ಜಾಸ್ತಿ ಆದರೆ ವಡೆ ಭಾರವೆನಿಸುತ್ತದೆ (Dense), ಕಡಿಮೆ ಆದರೆ ಕರಿಯುವಾಗ ಹಿಟ್ಟು ಬಿಟ್ಟುಕೊಳ್ಳುತ್ತದೆ. ಆಲೂಗಡ್ಡೆ ಮತ್ತು ಸಾಬೂದಾನದ ಮಿಶ್ರಣ ಮೃದುವಾಗಿ ಹಾಗೂ ಆಕಾರ ನೀಡಲು ಸುಲಭವಾಗಿರಬೇಕು.
59
ಕಡಲೆಕಾಯಿಯನ್ನು ಸರಿಯಾಗಿ ಹುರಿಯದೆ ಇರುವುದು
ಹಸಿ ಕಡಲೆಕಾಯಿ ಬಳಸಿದರೆ ವಡೆ ರುಚಿಸುವುದಿಲ್ಲ. ಕಡಲೆಕಾಯಿಯನ್ನು ಚೆನ್ನಾಗಿ ಹುರಿದು, ತರಿತರಿಯಾಗಿ ಕುಟ್ಟಿ ಹಾಕಬೇಕು. ಇದು ವಡೆಗೆ ಒಳ್ಳೆ ಕ್ರಂಚ್ ನೀಡುತ್ತದೆ.
69
ಸರಿಯಾದ ತಾಪಮಾನದಲ್ಲಿ ಕರಿಯದಿರುವುದು
ಎಣ್ಣೆ ಅತಿಯಾಗಿ ಕಾದಿದ್ದರೆ ವಡೆ ಮೇಲ್ಭಾಗದಲ್ಲಿ ಬೇಗ ಕೆಂಪಾಗಿ ಒಳಗಡೆ ಹಸಿಯಾಗಿರುತ್ತದೆ. ಎಣ್ಣೆ ಕಡಿಮೆ ಕಾದಿದ್ದರೆ ವಡೆಗಳು ಎಣ್ಣೆ ಕುಡಿದು ಜಿಡ್ಡು ಜಿಡ್ಡಾಗುತ್ತವೆ. ಮೀಡಿಯಂ ಉರಿಯಲ್ಲಿ ನಿಧಾನವಾಗಿ ಕರಿಯುವುದು ಉತ್ತಮ.
79
ಹಿಟ್ಟನ್ನು ಅತಿಯಾಗಿ ಬೆರೆಸುವುದು
ಹಿಟ್ಟನ್ನು ಅತಿಯಾಗಿ ಕಿವುಚಿದರೆ ಸಾಬೂದಾನದ ಕಾಳುಗಳು ಒಡೆದು ಹಿಟ್ಟು ಜಿಗುಟಾಗುತ್ತದೆ. ಎಲ್ಲಾ ಪದಾರ್ಥಗಳನ್ನು ಹಗುರವಾಗಿ ಬೆರೆಸಬೇಕು, ಇದರಿಂದ ಸಾಬೂದಾನದ ಕಾಳುಗಳು ಹಾಗೆಯೇ ಉಳಿದು ವಡೆ ಹಗುರವಾಗಿ ಬರುತ್ತದೆ.
89
ಏರುಪೇರಾದ ಗಾತ್ರದ ವಡೆಗಳು
ಒಂದು ವಡೆ ದೊಡ್ಡದು, ಇನ್ನೊಂದು ಚಿಕ್ಕದಿದ್ದರೆ ಅವು ಒಂದೇ ಸಮನಾಗಿ ಬೇಯುವುದಿಲ್ಲ. ಆದ್ದರಿಂದ ಎಲ್ಲಾ ವಡೆಗಳು ಒಂದೇ ಗಾತ್ರ ಮತ್ತು ದಪ್ಪವಿರುವಂತೆ ತಟ್ಟಿ ಮಾಡಿಕೊಳ್ಳಿ.
99
ಕರಿಯುವ ಮೊದಲು ಸ್ವಲ್ಪ ಸಮಯ ನೀಡದಿರುವುದು
ವಡೆಗಳನ್ನು ತಟ್ಟಿದ ನಂತರ ಕನಿಷ್ಠ 5-10 ನಿಮಿಷ ಹಾಗೆಯೇ ಬಿಟ್ಟರೆ ಹಿಟ್ಟು ಚೆನ್ನಾಗಿ ಸೆಟ್ ಆಗುತ್ತದೆ. ಇದರಿಂದ ಕರಿಯುವಾಗ ವಡೆ ಒಡೆಯುವ ಸಾಧ್ಯತೆ ಕಡಿಮೆ ಇರುತ್ತದೆ.
ಕೊನೆಯ ಮಾತು ವಡೆಗಳಿಗೆ ಹಿಟ್ಟು ತಯಾರಿಸುವಾಗ ಸ್ವಲ್ಪ 'ನಿಂಬೆ ರಸ' ಅಥವಾ 'ಆಮ್‌ಚೂರ್ ಪೌಡರ್' ಸೇರಿಸಿದರೆ ಅದರ ರುಚಿ ಇನ್ನು ಹೆಚ್ಚಾಗುತ್ತದೆ ಮತ್ತು ಜಿಡ್ಡಿನಂಶ ಕಡಿಮೆ ಎನಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.