ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ 7 ಚಟಪಟ ತಿಂಡಿಗಳು

Published : Jan 20, 2025, 02:41 PM IST

30 ರೂಪಾಯಿ ಒಳಗೆ ಕಡಲೆ ಹಿಟ್ಟಿನಿಂದ ಮಾಡಿದ 7 ರುಚಿಯಾದ ತಿಂಡಿಗಳು: ಬೆಳಗಿನ ತಿಂಡಿಗೆ ಕಡಲೆಹಿಟ್ಟು ಬಳಸಿ ಮಾಡಬಹುದಾದ 7 ಖಾದ್ಯಗಳ ಮಾಹಿತಿ ಇಲ್ಲಿದೆ. ಈ ತಿಂಡಿಗಳು ಎಲ್ಲಾ ವರ್ಗದವರಿಗೆ ಇಷ್ಟವಾಗುತ್ತವೆ.

PREV
17
ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ 7 ಚಟಪಟ ತಿಂಡಿಗಳು
ಕಡಲೆ ಹಿಟ್ಟಿನ ದೋಸೆ

ಬೆಳಗಿನ ತಿಂಡಿಗೆ ಆರೋಗ್ಯಕರ ಮತ್ತು ರುಚಿಕರವಾದದ್ದನ್ನು ಬಯಸಿದರೆ, ಕಡಲೆ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ನಿಮ್ಮಿಷ್ಟದ ತರಕಾರಿ ಮತ್ತು ಮಸಾಲೆಗಳನ್ನು ಸೇರಿಸಿ, ತವಾ ಮೇಲೆ ಹಾಕಿ ಎರಡೂ ಬದಿಗಳಲ್ಲಿ ಬೇಯಿಸಿದ್ರೆ ದೋಸೆ ರೆಡಿಯಾಗುತ್ತದೆ.

27
ಪಕೋಡ

250 ಗ್ರಾಂ ಕಡಲೆ ಹಿಟ್ಟಿನಿಂದ ನೀವು ರುಚಿಕರವಾದ ಪಕೋಡಗಳನ್ನು ಮಾಡಬಹುದು. ಕಡಲೆ ಹಿಟ್ಟಿನಲ್ಲಿ ಆಲೂಗಡ್ಡೆ, ಈರುಳ್ಳಿ, ಪಾಲಕ್ ಅಥವಾ ಬ್ರೆಡ್ ತುಂಡುಗಳನ್ನು ಸೇರಿಸಿ ಕರಿಯಿರಿ ಮತ್ತು ಬೆಳಗ್ಗೆ ಚಹಾದೊಂದಿಗೆ ಸವಿಯಿರಿ.

37
ಢೋಕ್ಲಾ

ಹಗುರವಾದ ಮತ್ತು ರುಚಿಕರವಾದ ತಿಂಡಿಯನ್ನು ಪ್ರಯತ್ನಿಸಲು ಬಯಸಿದರೆ, ನೀವು ಗುಜರಾತಿ ಢೋಕ್ಲಾವನ್ನು ಸಹ ಮಾಡಬಹುದು. ಇದು ಹಗುರ, ಮೃದು ಮತ್ತು ಸ್ಪಂಜಿನಂತೆ ಇರುತ್ತದೆ, ಇದನ್ನು ಆವಿಯಲ್ಲಿ ಬೇಯಿಸಿ ಮೇಲೆ ಒಗ್ಗರಣೆ ಹಾಕಲಾಗುತ್ತದೆ.

47
ಖಮಣ

ಖಮಣ ಕೂಡ ಢೋಕ್ಲಾ ತರಹ ಇರುತ್ತದೆ ಆದರೆ ಇದು ಹೆಚ್ಚು ಮೃದುವಾಗಿರುತ್ತದೆ ಮತ್ತು ಇದರ ಮೇಲೆ ಸಕ್ಕರೆ ನೀರನ್ನು ಹಾಕಲಾಗುತ್ತದೆ, ಇದರಿಂದ ಇದು ಹೆಚ್ಚು ರುಚಿಕರವಾಗಿರುತ್ತದೆ. ಇದಕ್ಕೆ ನಿಂಬೆ ಮತ್ತು ಹಸಿಮೆಣಸಿನಕಾಯಿ ಒಗ್ಗರಣೆ ಹಾಕಲಾಗುತ್ತದೆ.

 

57
ಖಾಂಡ್ವಿ

ಖಾಂಡ್ವಿ ಕೂಡ ಒಂದು ಗುಜರಾತಿ ಖಾದ್ಯ, ಇದನ್ನು ಕಡಲೆ ಹಿಟ್ಟು ಮತ್ತು ಮೊಸರಿನ ಹಿಟ್ಟನ್ನು ಬೇಯಿಸಿ ತಟ್ಟೆಯಲ್ಲಿ ಹರಡಿ ಸುತ್ತಿಕೊಂಡು ಮಾಡಲಾಗುತ್ತದೆ ಮತ್ತು ಮೇಲೆ ಒಣಕೊಬ್ಬರಿ, ಸಾಸಿವೆ ಒಗ್ಗರಣೆ ಹಾಕಲಾಗುತ್ತದೆ.

67
ಸೇವ್ ಅಥವಾ ಭೂಜಿಯಾ

ಕಡಲೆ ಹಿಟ್ಟಿನಲ್ಲಿ  ಉಪ್ಪು ಮತ್ತು ಎಣ್ಣೆ ಮತ್ತು ಕೆಲವು ಮಸಾಲೆಗಳನ್ನು ಸೇರಿಸಿ ಹಿಟ್ಟು ಕಲಸಿ, ಸಣ್ಣ ರಂಧ್ರಗಳಿರುವ ಯಂತ್ರದಿಂದ ಸೇವ್ ಅಥವಾ ಭೂಜಿಯಾ ಮಾಡಿ. ಇದು ಚಹಾದೊಂದಿಗೆ ಉತ್ತಮ ತಿಂಡಿ ಮತ್ತು ಇದನ್ನು ನೀವು ಹಲವು ದಿನಗಳವರೆಗೆ ಸಂಗ್ರಹಿಸಿಡಬಹುದು.

77
ಬಜ್ಜಿ

ದಪ್ಪ ಮೆಣಸಿನಕಾಯಿ ಇದ್ದರೆ, ಅದರಲ್ಲಿ ಸೀಳು ಮಾಡಿ ಒಳಗೆ ಆಲೂಗಡ್ಡೆ ತುಂಬಿಸಿ, ಕಡಲೆ ಹಿಟ್ಟಿನಲ್ಲಿ ಅದ್ದಿ ಕರಿಯಿರಿ. ಬಿಸಿಯಾದ ಬಜ್ಜಿ ಎಲ್ಲರಿಗೂ ಇಷ್ಟವಾಗುತ್ತದೆ.

Read more Photos on
click me!

Recommended Stories