ಮುಟ್ಟಿನ ಸಮಯದಲ್ಲಿ ಕೂದಲು ತೊಳೆಯಬಾರದ? ಧರ್ಮಗ್ರಂಥಗಳು ಏನು ಹೇಳುತ್ತವೆ?

Published : May 24, 2023, 05:35 PM IST

ಧರ್ಮಗ್ರಂಥಗಳಲ್ಲಿ ಮುಟ್ಟಿನ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ, ಅವುಗಳಲ್ಲಿ ಒಂದು ಮುಟ್ಟಿನ ಸಮಯದಲ್ಲಿ ಕೂದಲನ್ನು ತೊಳೆಯದಿರೋದು. ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಈ ವಿಷಯದ ಹಿಂದಿನ ಕಾರಣಗಳು ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. 

PREV
110
ಮುಟ್ಟಿನ ಸಮಯದಲ್ಲಿ ಕೂದಲು ತೊಳೆಯಬಾರದ? ಧರ್ಮಗ್ರಂಥಗಳು ಏನು ಹೇಳುತ್ತವೆ?

ನಮ್ಮ ಧರ್ಮಗ್ರಂಥಗಳಲ್ಲಿ ಅನೇಕ ವಿಷಯಗಳಿವೆ, ಅವುಗಳ ಬಗ್ಗೆ ನಿಖರವಾದ ಕಾರಣಗಳು ಇನ್ನೂ ತಿಳಿದಿಲ್ಲ. ಹಾಗೆಯೇ, ಧರ್ಮಗ್ರಂಥಗಳಲ್ಲಿ ಮುಟ್ಟಿನ(Periods) ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ ಮತ್ತು ನಾವು ಶತಮಾನಗಳಿಂದ ಅವುಗಳನ್ನು ಅನುಸರಿಸುತ್ತಿದ್ದೇವೆ.

210

ಮುಟ್ಟಿನ ಸಮಯದಲ್ಲಿ ಹೆಚ್ಚು ಹೊರಗೆ ಹೋಗಬೇಡಿ, ದೇವಾಲಯ ಮತ್ತು ಅಡುಗೆಮನೆಗೆ ಪ್ರವೇಶಿಸಬೇಡಿ, ಉಪ್ಪಿನಕಾಯಿಯನ್ನು ಮುಟ್ಟಬೇಡಿ ಮತ್ತು ದೊಡ್ಡ ವಿಷಯವೆಂದರೆ ಮುಟ್ಟಿನ ಸಮಯದಲ್ಲಿ ಸ್ನಾನ ಮತ್ತು ಕೂದಲನ್ನು ತೊಳೆಯುವ(Hair wash) ನಿಯಮಗಳಿಗೆ ಸಂಬಂಧಿಸಿದೆ ಎಂದು ಮನೆಯ ಹಿರಿಯರು ಹೇಳುವುದನ್ನು ನೀವು ಆಗಾಗ್ಗೆ ಕೇಳಿರಬಹುದು.

310

ಧರ್ಮಗ್ರಂಥಗಳಲ್ಲಿ, ಈ ಸಮಯದಲ್ಲಿ ಕೂದಲನ್ನು ತೊಳೆಯಲು ವಿಶೇಷ ನಿಯಮಗಳನ್ನು ಮಾಡಲಾಗಿದೆ ಮತ್ತು ಈ ಸಮಯದಲ್ಲಿ ಕೂದಲನ್ನು(Hair) ತೊಳೆಯದಿರುವುದು ಉತ್ತಮ ಎಂದು ಹೇಳಲಾಗುತ್ತೆ. ನಮ್ಮಲ್ಲಿ ಅನೇಕರು ಹಿರಿಯರ ಮಾತುಗಳ ಪ್ರಕಾರ ಈ ನಿಯಮವನ್ನು ಅನುಸರಿಸುತ್ತಾರೆ, ಆದರೆ ಇದಕ್ಕೆ ನಿಖರವಾದ ಕಾರಣವನ್ನು ತಿಳಿದಿರುವವರು ಯಾರೂ ಇಲ್ಲ. ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಈ ವಿಷಯದ ಬಗ್ಗೆ ಇಲ್ಲಿ ತಿಳಿಯೋಣ.

410

ಧರ್ಮಗ್ರಂಥಗಳ ಪ್ರಕಾರ, ಮುಟ್ಟಿನ ಸಮಯದಲ್ಲಿ ಕೂದಲನ್ನು ತೊಳೆಯುವುದನ್ನು ಏಕೆ ನಿಷೇಧಿಸಲಾಗಿದೆ ಗೊತ್ತಾ?
ಮುಟ್ಟಿನ ಸಮಯದಲ್ಲಿ, ಮಹಿಳೆಯರ ದೇಹದಿಂದ ಅಶುದ್ಧ ರಕ್ತವು ಸ್ರವಿಸಲ್ಪಡುತ್ತೆ ಮತ್ತು ಈ ಪ್ರಕ್ರಿಯೆಯು ತಿಂಗಳಿಗೆ ನಿರ್ದಿಷ್ಟ ದಿನಗಳವರೆಗೆ ಇರುತ್ತೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಮಹಿಳೆಯರು ಸ್ನಾನ(Bath) ಮಾಡುವುದನ್ನು ಮತ್ತು ಕೂದಲು ತೊಳೆಯುವುದನ್ನು ತಪ್ಪಿಸಬೇಕು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

510

ವಾಸ್ತವವಾಗಿ, ಪ್ರಾಚೀನ ಕಾಲದಲ್ಲಿ, ಮನೆಯಲ್ಲಿ ಸ್ನಾನ ಮತ್ತು ನೀರಿನ ಸರಿಯಾದ ವ್ಯವಸ್ಥೆ ಇಲ್ಲದಿದ್ದಾಗ, ಮಹಿಳೆಯರು ಸ್ನಾನ ಮಾಡಲು ನದಿ ಅಥವಾ ಕೊಳಕ್ಕೆ ಹೋಗುತ್ತಿದ್ದರು. ಹಾಗಾಗಿ, ಅವರಿಗೆ ಋತುಚಕ್ರವಿದ್ದಾಗ, ನದಿಯ ಶುದ್ಧ ನೀರು ಅಶುದ್ಧವಾಗುತ್ತೆ ಎಂದು ಅವರು ಹೆದರುತ್ತಿದ್ದರು, ಈ ಕಾರಣದಿಂದಾಗಿ ಹೆಚ್ಚಿನ ರಕ್ತಸ್ರಾವವನ್ನು(Bleeding) ಹೊಂದಿರುವ ಋತುಚಕ್ರದ ಅವಧಿಯಲ್ಲಿ ಸ್ನಾನ ಮಾಡೋದನ್ನು ಮತ್ತು ಕೂದಲು ತೊಳೆಯೋದನ್ನು ತಪ್ಪಿಸುವುದು ವಾಡಿಕೆಯಾಗಿತ್ತು. ಇಂದಿಗೂ, ಧರ್ಮಗ್ರಂಥಗಳಲ್ಲಿ ಬರೆಯಲಾದ ಈ ವಿಷಯಕ್ಕೆ ನಿಖರವಾದ ಕಾರಣವನ್ನು ತಿಳಿಯದೆ, ಅದನ್ನು ಇಂದಿಗೂ ಅನುಸರಿಸಲಾಗುತ್ತೆ .

610

ಮುಟ್ಟಿನ ಸಮಯದಲ್ಲಿ ಕೂದಲನ್ನು ಯಾವಾಗ ತೊಳೆಯಬೇಕು?: ಕೂದಲನ್ನು ತೊಳೆಯುವ ನಿಯಮಗಳ ಬಗ್ಗೆ ಹೇಳೋದಾದ್ರೆ, ಮೂರನೇ ಅಥವಾ ಐದನೇ ದಿನದಂದು ಕೂದಲನ್ನು ತೊಳೆಯಬೇಕು. ವಾಸ್ತವವಾಗಿ, ಋತುಚಕ್ರದ ಪ್ರಾರಂಭದ ಮೂರನೇ ದಿನದಂದು, ದೇಹವನ್ನು ಶುದ್ಧವೆಂದು ಪರಿಗಣಿಸಲಾಗುತ್ತೆ, ಆದರೆ ಐದನೇ ದಿನದಂದು ಸಂಪೂರ್ಣ ಶುದ್ಧೀಕರಣವಿರುತ್ತೆ ಎಂದು ಹೇಳಲಾಗುತ್ತೆ. ಈ ಕಾರಣಕ್ಕಾಗಿ, ಐದನೇ ದಿನ ಕೂದಲನ್ನು ತೊಳೆದ ನಂತರವೇ  ದೇವಾಲಯ(Temple) ಅಥವಾ ಪೂಜಾ ಸ್ಥಳವನ್ನು ಪ್ರವೇಶಿಸಬೇಕು ಎಂದು ಜ್ಯೋತಿಷ್ಯದಲ್ಲಿ ಸೂಚಿಸಲಾಗಿದೆ.

710

ಋತುಚಕ್ರದ ಸಮಯದಲ್ಲಿ ಕೂದಲನ್ನು ತೊಳೆಯುವುದು ವಿಜ್ಞಾನದಲ್ಲಿ ನಿಷಿದ್ಧವಾಗಿದ್ಯಾ?: ಮುಟ್ಟಿನ ಸಮಯದಲ್ಲಿ ಕೂದಲನ್ನು ತೊಳೆಯುವ ಬಗ್ಗೆ ಹೇಳೋದಾದ್ರೆ, ವಿಜ್ಞಾನವು ಅಂತಹ ಯಾವುದೇ ವಿಷಯವನ್ನು ದೃಢಪಡಿಸೋದಿಲ್ಲ. ಆದರೆ, ಋತುಚಕ್ರದ ಸಮಯದಲ್ಲಿ ನಾವು ಕೂದಲನ್ನು ತೊಳೆದರೆ, ಅದು ಫಲವತ್ತತೆಯ(Fertility) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ ಎಂಬ ಮಿಥ್ಯೆ ಇದೆ.

810

ವಾಸ್ತವವಾಗಿ, ಇದು ಪ್ರಾಚೀನ ಕಾಲದಲ್ಲಿ ಸ್ನಾನ ಮಾಡುವ ವಿಧಾನಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಯಾಗಿದೆ. ಪ್ರಾಚೀನ ಕಾಲದಲ್ಲಿ, ಮಹಿಳೆಯರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ನದಿಯ ನೀರು ತುಂಬಾ ತಂಪಾಗಿತ್ತು (Cold)ಮತ್ತು ಆಯುರ್ವೇದ ಮತ್ತು ವಿಜ್ಞಾನದಲ್ಲಿ, ಮುಟ್ಟಿನ ಸಮಯದಲ್ಲಿ ದೇಹದ ತಾಪಮಾನವು ತುಂಬಾ ಹೆಚ್ಚಾಗಿರುತ್ತೆ ಎಂದು ಹೇಳಲಾಗುತ್ತೆ, ಹಾಗಾಗಿ ತಣ್ಣೀರಿನಿಂದ ಸ್ನಾನ ಮಾಡೋದರಿಂದ ದೇಹದ ರಕ್ತದ ಹರಿವು ಕಡಿಮೆಯಾಗುತ್ತೆ ಎಂದು ನಂಬಲಾಗಿತ್ತು.

910

ಹೀಗೆ ತಣ್ಣೀರಿನಿಂದ (Cold water) ಸ್ನಾನ ಮಾಡೋದರಿಂದ ದೇಹದಲ್ಲಿ ಉಬ್ಬರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ಈ ಸಮಯದಲ್ಲಿ  ಸ್ನಾನ ಮಾಡಬಹುದು ಅಥವಾ ಸಾಮಾನ್ಯ ತಾಪಮಾನದ ನೀರಿನಿಂದ ಕೂದಲನ್ನು ತೊಳೆಯಬಹುದು.

1010

ಮುಟ್ಟಿನ ಸಮಯದಲ್ಲಿ ಕೂದಲನ್ನು ತೊಳೆಯುವ ಬಗ್ಗೆ ಆಯುರ್ವೇದ ಏನು ಹೇಳುತ್ತೆ?: ಋತುಚಕ್ರದ ಸಮಯದಲ್ಲಿ ಕೂದಲನ್ನು ತೊಳೆಯುವ ಬಗ್ಗೆ ಆಯುರ್ವೇದ ಏನ್ ಹೇಳುತ್ತಂದ್ರೆ, ಮುಟ್ಟಿನ ಸಮಯದಲ್ಲಿ  ತುಂಬಾ ತಣ್ಣೀರಿನಿಂದ ಸ್ನಾನ ಮಾಡಬಾರದು ಅಥವಾ ಕೂದಲನ್ನು ತೊಳೆಯಬಾರದು ಎಂದು ಯಾವಾಗಲೂ ಸಲಹೆ ನೀಡಲಾಗುತ್ತೆ, ಏಕೆಂದರೆ ಇದು ದೇಹದಲ್ಲಿ ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ(Health problems) ಕಾರಣವಾಗಬಹುದು. ಹಾಗೆಯೇ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡೋದರಿಂದ ಋತುಚಕ್ರದ ಸೆಳೆತ ಮುಂತಾದ ದೇಹದ ಅನೇಕ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತೆ.
 

Read more Photos on
click me!

Recommended Stories