ನಾವೆಲ್ಲರೂ ನಮ್ಮ ಭವಿಷ್ಯವನ್ನು(Future) ಉಜ್ವಲಗೊಳಿಸಲು ಮುಂಬರುವ ಸಮಯದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ. ಆದರೆ ಮುಂಬರುವ ಸಮಯವನ್ನು ನಿಜವಾಗಿಯೂ ತಿಳಿದುಕೊಳ್ಳುವ ಮೂಲಕ ಮುಂದುವರಿಯೋದು ಅಷ್ಟು ಸುಲಭವಲ್ಲ. ಜ್ಯೋತಿಷ್ಯವು ಭವಿಷ್ಯದ ಬಗ್ಗೆ ನಿಮಗೆ ತಿಳಿಸಬಹುದು, ಇದರಿಂದ ಮುಂದಿನ ಸಮಯವು ಅನುಕೂಲಕರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ತಿಳಿದುಕೊಳ್ಳಬಹುದು.
ಎಲ್ಲವೂ ಯಾವಾಗಲೂ ನಿಮ್ಮ ಪರವಾಗಿರಬೇಕು ಎಂದು ಹೇಳಲಾಗೋದಿಲ್ಲ, ಆದ್ದರಿಂದ ಜ್ಯೋತಿಷ್ಯ ಪರಿಹಾರಗಳು(Astro remedies) ನಿಮಗೆ ಪರಿಣಾಮಕಾರಿ ಎಂದು ಹೇಳಬಹುದು. ಹೆಚ್ಚಿನ ಯೋಜನೆಗಳನ್ನು ಮಾಡಲು, ನಾವು ಖಂಡಿತವಾಗಿಯೂ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಬಯಸುತ್ತೇವೆ ಮತ್ತು ಜ್ಯೋತಿಷ್ಯದ ಮುನ್ಸೂಚನೆಯಿಂದ ಮಾತ್ರ ನಾವು ಇದನ್ನು ತಿಳಿಯಬಹುದು.
ಆಗಾಗ್ಗೆ ಜನರು ಭವಿಷ್ಯವನ್ನು ತಿಳಿದುಕೊಳ್ಳುವ ಮೂಲಕ ತಮಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ನಿರ್ಧರಿಸುತ್ತಾರೆ. ಪ್ರತಿ ತಿಂಗಳು ಎಲ್ಲಾ ರಾಶಿಗಳಿಗೆ ವಿಭಿನ್ನ ಪರಿಣಾಮವನ್ನು ಬೀರುತ್ತೆ. ಜೂನ್ ತಿಂಗಳಲ್ಲಿ ಯಾವ ರಾಶಿಗಳು ಸಮಸ್ಯೆಗಳನ್ನು(Problems) ಎದುರಿಸುತ್ತವೆ ಮತ್ತು ಅವುಗಳಿಗೆ ಯಾವ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಬಹುದು ಎಂದು ತಿಳಿಯಲು ನೀವು ಬಯಸೋದಾದ್ರೆ, ಈ ಸ್ಟೋರಿ ಓದಿ.
ಮೇಷ(Aries) ರಾಶಿ: ಜೂನ್ ತಿಂಗಳು ಮೇಷ ರಾಶಿಯವರಿಗೆ ಕೆಲವು ತೊಂದರೆಗಳಿಂದ ತುಂಬಿರಬಹುದು. ಈ ತಿಂಗಳಲ್ಲಿ, ಮೇಷ ರಾಶಿಯ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜೊತೆಗೆ ಈ ತಿಂಗಳು ವೃತ್ತಿಜೀವನಕ್ಕೆ ಒಳ್ಳೆಯದಲ್ಲ. ಕೆಲಸದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಹಿರಿಯರ ಕೋಪವನ್ನು ಎದುರಿಸಬಹುದು. ಪ್ರೀತಿಯ ದೃಷ್ಟಿಯಿಂದ ಸಮಯವು ನಿಮಗೆ ಒಳ್ಳೆಯದಲ್ಲ, ಆದ್ದರಿಂದ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸುವುದು ಉತ್ತಮ.
ಪರಿಹಾರ - ಮಂಗಳವಾರ, ರಾಹು ಮತ್ತು ಕೇತುವಿಗೆ ಹವನವನ್ನು ಮಾಡಿ ಮತ್ತು ಸುಂದರಕಾಂಡವನ್ನು ಪಠಿಸಿ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಜೂನ್ ತಿಂಗಳಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ವ್ಯಾಪಾರಿಗಳು(Bussinessman) ನಷ್ಟವನ್ನು ಅನುಭವಿಸಬಹುದು. ಕೆಲವು ಆರ್ಥಿಕ ಸವಾಲುಗಳನ್ನು ಸಹ ಎದುರಿಸಬಹುದು.ಈ ತಿಂಗಳು ವ್ಯವಹಾರ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ನಷ್ಟದ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ.
ಪರಿಹಾರ - ಸೋಮವಾರ, ಶಿವನಿಗೆ ಹಾಲಿನ ಅಭಿಷೇಕ ಮಾಡಿ ಮತ್ತು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ.
ಕನ್ಯಾರಾಶಿ (Virgo): ಕನ್ಯಾರಾಶಿ ಜನರಿಗೆ ಜೂನ್ ತಿಂಗಳು ಅನುಕೂಲಕರವಲ್ಲ. ಇವರು ಕೆಲಸದಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಈ ತಿಂಗಳು ಖರ್ಚುಗಳು ಹೆಚ್ಚಾಗಬಹುದು ಮತ್ತು ಪ್ರೀತಿಯ ದೃಷ್ಟಿಯಿಂದ ಸಮಯವು ಅನುಕೂಲಕರವಾಗಿಲ್ಲ. ಕನ್ಯಾರಾಶಿಯವರು ಮದುವೆಯಾಗಲು ಬಯಸಿದ್ರೆ, ಹೆಚ್ಚು ಸಮಯ ಕಾಯಬೇಕಾಗುತ್ತೆ.
ಪರಿಹಾರ - ದುರ್ಗಾ ಮಾತೆಯನ್ನು ನಿಯಮಿತವಾಗಿ ಪೂಜಿಸಿ ಮತ್ತು ದುರ್ಗಾ ಸಪ್ತಶತಿಯನ್ನು ಪಠಿಸಿ.
ವೃಶ್ಚಿಕ (Scorpio) ರಾಶಿ: ಈ ತಿಂಗಳು ವೃಶ್ಚಿಕ ರಾಶಿಯವರ ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಹದಗೆಡಬಹುದು. ಹಣವನ್ನು ಯಾವುದೇ ತಪ್ಪು ಸ್ಥಳದಲ್ಲಿ ಖರ್ಚು ಮಾಡದಂತೆ ಕಾಳಜಿ ವಹಿಸಬೇಕು. ನೀವು ವ್ಯವಹಾರದಲ್ಲಿದ್ದರೆ, ನಷ್ಟವನ್ನು ಅನುಭವಿಸಬಹುದು. ಈ ತಿಂಗಳು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಂಬಂಧದಲ್ಲಿರುವವರಿಗೆ ಸಮಯವೂ ಒಳ್ಳೆಯದಲ್ಲ. ಪ್ರೀತಿಯಲ್ಲಿ ಮೋಸ ಹೋಗಬಹುದು.
ಪರಿಹಾರ- ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಿ.
ಮಕರ ರಾಶಿ: ಮಕರ ರಾಶಿಯವರು ಜೂನ್ ತಿಂಗಳಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ಈ ತಿಂಗಳು ಖರ್ಚುಗಳು ಹೆಚ್ಚಾಗುತ್ತವೆ, ಆದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಉದ್ಯೋಗ(Job) ಮತ್ತು ವ್ಯವಹಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಸಣ್ಣ ವಿಷಯದ ಬಗ್ಗೆ ಸಂಗಾತಿಯೊಂದಿಗೆ ವಿವಾದವನ್ನು ಹೊಂದಬಹುದು.
ಪರಿಹಾರ: 'ಓಂ ನಮಃ ಶಿವಾಯ' ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಿ.
ಕೆಲವು ರಾಶಿಗಳಿಗೆ ಈ ಸಮಯವು ಅನುಕೂಲಕರವಾಗಿಲ್ಲ, ಆದರೆ ಇಲ್ಲಿ ಹೇಳಿರುವ ಸುಲಭ ಜ್ಯೋತಿಷ್ಯ ಪರಿಹಾರಗಳೊಂದಿಗೆ ಮುಂಬರುವ ಸಮಯವನ್ನು ನಿಮ್ಮ ಪರವಾಗಿ ತಿರುಗಿಸಬಹುದು.
ಕೆಲವು ರಾಶಿಗಳಿಗೆ ಈ ಸಮಯವು ಅನುಕೂಲಕರವಾಗಿಲ್ಲ, ಆದರೆ ಇಲ್ಲಿ ಹೇಳಿರುವ ಸುಲಭ ಜ್ಯೋತಿಷ್ಯ ಪರಿಹಾರಗಳೊಂದಿಗೆ ಮುಂಬರುವ ಸಮಯವನ್ನು ನಿಮ್ಮ ಪರವಾಗಿ ತಿರುಗಿಸಬಹುದು.