ಭಗವಾನ್ ಗಣೇಶನನ್ನು(Lord Ganesh) ಸಮೃದ್ಧಿ, ಬುದ್ಧಿವಂತಿಕೆ ಮತ್ತು ಅದೃಷ್ಟದ ದೇವರು ಎಂದು ಪರಿಗಣಿಸಲಾಗುತ್ತೆ ಮತ್ತು ಅವನ ಕೃಪೆಯಿಂದ, ನಾವೆಲ್ಲರೂ ನಮ್ಮ ಜೀವನದಲ್ಲಿ ಶುಭ ಪ್ರಯೋಜನಗಳು ಮತ್ತು ಸಮೃದ್ಧಿ (Prosperity) ಪಡೆಯುತ್ತೇವೆ. ಭಗವಾನ್ ಗಣೇಶನನ್ನು ಸರ್ವಶಕ್ತ ದೇವತೆ ಎಂದು ಪರಿಗಣಿಸಲಾಗಿದೆ. ಗಣೇಶನು ಮಾನವರ ಕಷ್ಟಗಳನ್ನು ತೆಗೆದುಹಾಕುತ್ತಾನೆ ಮತ್ತು ಅವನನ್ನು ಪೂಜಿಸೋದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತೆ.
ಸಂಪ್ರದಾಯದ ಪ್ರಕಾರ, ಪ್ರತಿಯೊಂದು ಧಾರ್ಮಿಕ ಹಬ್ಬ (Festival)ಮತ್ತು ಆಚರಣೆಯು ಗಣೇಶನ ಆರಾಧನೆಯೊಂದಿಗೆ ಪ್ರಾರಂಭವಾಗುತ್ತೆ. ಗಣೇಶ ದೇವರ ಒಂದು ರೂಪವಾಗಿದ್ದು, ಮಾನವ ಮತ್ತು ಪ್ರಾಣಿಗಳ ಭಾಗಗಳಿಂದ ಮಾಡಲ್ಪಟ್ಟಿದೆ. ಇದು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ತೋರಿಸುತ್ತೆ. ಆದರೆ ಗಣೇಶನಿಗೆ ಮೊದಲ ಪೂಜೆ ಯಾಕೆ ಮಾಡಲಾಗುತ್ತೆ ನೋಡೋಣ.
ಗಣೇಶನನ್ನು ಎಲ್ಲಾ ಉತ್ತಮ ಗುಣಗಳು ಮತ್ತು ಯಶಸ್ಸಿನ ದೇವರು ಎಂದು ಪರಿಗಣಿಸಲಾಗುತ್ತೆ, ಅದಕ್ಕಾಗಿಯೇ ಜನರು ಪ್ರತಿಯೊಂದು ಒಳ್ಳೆಯ ಕೆಲಸವನ್ನು ಮಾಡುವ ಮೊದಲು ಗಣೇಶನನ್ನು ಪೂಜಿಸೋದು ಶುಭವೆಂದು ಪರಿಗಣಿಸುತ್ತಾರೆ. ಗಣೇಶ ಚತುರ್ಥಿಯನ್ನು ಗಣೇಶನ ಜನ್ಮದಿನದಂದು(Birthday) ಆಚರಿಸಲಾಗುತ್ತೆ.
ಹಿಂದೂ ಧರ್ಮದ ಜನರು ಆಧ್ಯಾತ್ಮಿಕ ಶಕ್ತಿಗಾಗಿ, ಕೆಲಸದ ಸಾಧನೆಗಾಗಿ ಮತ್ತು ಪ್ರಯೋಜನಗಳನ್ನು ಪಡೆಯಲು ಗಣೇಶನನ್ನು ಆಡಂಬರದಿಂದ ಪೂಜಿಸುತ್ತಾರೆ. ಗಣೇಶನನ್ನು ಎಲ್ಲಾ ದುಃಖಗಳನ್ನು(Sadness) ನಾಶಮಾಡುವವನು, ದುಃಖವನ್ನು ನಿವಾರಿಸುವವನು, ಸದ್ಭಾವನೆಯನ್ನು ನೀಡುವವನು ಎಂದು ಪರಿಗಣಿಸಲಾಗುತ್ತೆ.
ಇಂದು ನಾವು ನಿಮಗೆ ಕೆಲವು ಪ್ರಮುಖ ಮತ್ತು ಆಸಕ್ತಿದಾಯಕ ಸಂಗತಿಗಳನ್ನು ಹೇಳುತ್ತಿದ್ದೇವೆ, ಯಾವುದೇ ಸಮಾರಂಭ, ಹಬ್ಬ ಅಥವಾ ಆಚರಣೆಯಲ್ಲಿ ಗಣೇಶನನ್ನು ಮೊದಲು ಏಕೆ ಪೂಜಿಸಲಾಗುತ್ತೆ. ಹಿಂದೂ ಧರ್ಮದ ಎಲ್ಲಾ ಅನುಯಾಯಿಗಳು ಯಾವುದೇ ಹೊಸ ಕೆಲಸವನ್ನು(Work) ಪ್ರಾರಂಭಿಸುವಾಗ ಗಣೇಶನನ್ನು ಪೂಜಿಸುವುದರಿಂದ ಅದಕ್ಕೆ ಅಡ್ಡಿಯಾಗೋದಿಲ್ಲ ಎಂದು ನಂಬುತ್ತಾರೆ. ಈ ನಂಬಿಕೆಗೆ ಕಾರಣ ಏನು?
ನಿಮ್ಮ ಯಶಸ್ಸಿನ(Success) ಹಾದಿಯಲ್ಲಿ ಯಾವುದೇ ಅಡೆತಡೆಗಳಿದ್ದರೆ, ಗಣೇಶನನ್ನು ಪೂಜಿಸೋದರಿಂದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತೆ ಎಂದು ನಂಬಲಾಗಿದೆ. ಆದ್ದರಿಂದ, ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣಪತಿಯನ್ನು ಪೂಜಿಸಲಾಗುತ್ತೆ.
ಗಣೇಶನ ಹೆಂಡತಿಯರು
ಗಣೇಶನ ಒಂದು ಪತ್ನಿ ಸಿದ್ಧಿ. ಸಿದ್ಧಿ ಆಧ್ಯಾತ್ಮಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತೆ. ಆದ್ದರಿಂದ, ಗಣೇಶನನ್ನು ಪೂಜಿಸೋದು ಆಧ್ಯಾತ್ಮಿಕ ಒಳನೋಟವನ್ನು ಪಡೆಯಲು ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಸಾಂಪ್ರದಾಯಿಕವಾಗಿ, ಗಣೇಶನ ಸೊಂಡಿಲನ್ನು ನೇರವಾಗಿ ತಿರುಗಿಸಲಾಗುತ್ತೆ, ಅದಕ್ಕಾಗಿಯೇ ಅವನನ್ನು ಸಿದ್ಧಿ ವಿನಾಯಕ(Siddi Vinayaka) ಎಂದೂ ಕರೆಯಲಾಗುತ್ತೆ. ಗಣೇಶನ ಹೆಂಡತಿಯರಲ್ಲಿ ಇನ್ನೊಬ್ಬರ ಹೆಸರು ಬುದ್ಧಿ. ಅದಕ್ಕಾಗಿಯೇ, ಭಗವಾನ್ ಗಣೇಶನನ್ನು ಬುದ್ಧಿವಂತಿಕೆ ಮತ್ತು ಜ್ಞಾನದ ಪೂರೈಕೆದಾರ ಎಂದು ಪರಿಗಣಿಸಲಾಗುತ್ತೆ. ಆನೆಯ ಮೆದುಳನ್ನು ಬುದ್ಧಿವಂತಿಕೆಯ ಸಂಕೇತವೆಂದು ಕರೆಯಲಾಗುತ್ತೆ .
ಗಣೇಶನ ಎಡಗೈಯಲ್ಲಿ ಕೊಡಲಿ
ಭಗವಾನ್ ಗಣೇಶ ತನ್ನ ಮೇಲಿನ ಎಡಗೈಯಲ್ಲಿ ಕೊಡಲಿಯನ್ನು ಹಿಡಿದಿದ್ದಾನೆ, ಅದು ನ್ಯಾಯ ಮತ್ತು ವ್ಯಾಮೋಹದಿಂದ ಮುಕ್ತಿಯನ್ನು ತೋರಿಸುತ್ತೆ ಮತ್ತು ಅವನ ಮೇಲಿನ ಬಲಗೈಯಲ್ಲಿ ಕಮಲವನ್ನು(Lotus) ಹೊಂದಿದ್ದಾನೆ, ಅದು ಅವನಲ್ಲಿರುವ ಪ್ರತಿಯೊಂದು ಭಾವನೆಯನ್ನು ತೋರಿಸುತ್ತೆ. ಆದ್ದರಿಂದ, ಗಣೇಶನು ಭಾವನೆಗಳನ್ನು ಜಯಿಸಿದ್ದಾನೆ ಮತ್ತು ಮಾನವಕುಲವನ್ನು ಉದ್ದಾರ ಮಾಡುತ್ತಾನೆ ಎಂಬುದು ಸ್ಪಷ್ಟವಾಗಿದೆ.
ಗಣೇಶನು ಇಲಿ(Rat) ಸವಾರಿ ಮಾಡುತ್ತಾನೆ
ಗಣೇಶನನ್ನು ಪೂಜಿಸುವ ಮೂಲಕ, ಮನುಷ್ಯನ ಮನಸ್ಸಿನಲ್ಲಿ ತುಂಬಿದ ಅಹಂ ಅಳಿಸಿಹೋಗುತ್ತೆ. ಅವನ ಪಕ್ಕದಲ್ಲಿ ಕುಳಿತಿರುವ ಭಗವಾನ್ ಗಣೇಶನ ಸಾರಥಿಯು, ಅಹಂಕಾರವನ್ನು ಹೊರತುಪಡಿಸಿದರೆ ಯಾವುದೇ ವ್ಯಕ್ತಿಯು ಉತ್ತಮನಾಗಬಲ್ಲನು ಎಂದು ತೋರಿಸುತ್ತೆ. ಇಲಿಯು ಚಿಕ್ಕದಾಗಿರಬಹುದು ಆದರೆ ಗಣೇಶನ ಸಾರಥಿಯಾಗಲು ಸಮರ್ಥವಾಗಿದೆ.
ಗಣೇಶನ ಕುಳಿತುಕೊಳ್ಳುವ ವಿಧಾನ
ಭಗವಾನ್ ಗಣೇಶ ಯಾವಾಗಲೂ ತನ್ನ ಎಡಗಾಲನ್ನು ಬಲಗಾಲಿನ ಮೇಲೆ ಇಟ್ಟುಕೊಂಡು ಕುಳಿತುಕೊಳ್ಳುತ್ತಾನೆ, ಇದು ಅವನು ಎಲ್ಲವನ್ನೂ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾನೆ ಎಂಬುದನ್ನು ತೋರಿಸುತ್ತೆ. ಯಶಸ್ವಿ ಜೀವನವನ್ನು ನಡೆಸಲು ಒಬ್ಬರು ಜ್ಞಾನ(Knowledge) ಮತ್ತು ಭಾವನೆಗಳನ್ನು ಸರಿಯಾಗಿ ಬಳಸಬೇಕು ಎಂದು ಇದು ತೋರಿಸುತ್ತೆ .