ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಮೊದಲು, ಈ ವಿಷಯ ನೆನಪಿರಲಿ!

First Published Aug 26, 2022, 5:28 PM IST

ಗಣೇಶ ಚತುರ್ಥಿ ಹಬ್ಬ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ 10 ದಿನಗಳವರೆಗೆ ಇರುತ್ತೆ. ಈ ವರ್ಷ, ಗಣೇಶ ಚತುರ್ಥಿ ಹಬ್ಬವು ಆಗಸ್ಟ್ 31 ರಿಂದ ಪ್ರಾರಂಭವಾಗಲಿದೆ. ಗಣೇಶನ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭವಾಗುತ್ತೆ ಈ ಹಬ್ಬ. ಮೊದಲ ದಿನ, ಜನರು ತಮ್ಮ ಮನೆಗಳಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಈ ದಿನಗಳಲ್ಲಿ ಗಣೇಶನನ್ನು ವ್ಯವಸ್ಥಿತವಾಗಿ ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ಆಸೆಗಳು ಬೇಗ ಈಡೇರುತ್ತವೆ ಎಂದು ಹೇಳಲಾಗುತ್ತೆ. ಗಣೇಶ ಚತುರ್ಥಿಯ ಮೊದಲು, ಗಣೇಶನ ವಿಗ್ರಹವು ವಾಸ್ತು ಪ್ರಕಾರ ಹೇಗೆ ಇರಬೇಕು ಎಂದು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.
 

ಗಣೇಶ ಚತುರ್ಥಿಯಂದು(Ganesh Chathurthi) ಇಂತಹ ವಿಗ್ರಹವನ್ನು ಮನೆಗೆ ತನ್ನಿ

ಗಣೇಶನ ವಿಗ್ರಹವನ್ನು ಮನೆಗೆ ತರುವಾಗ, ಅವನ ಭಂಗಿಯ ಬಗ್ಗೆ ಗಮನ ಹರಿಸಲು ಮರೆಯಬೇಡಿ. ಗಣೇಶನ ಮೂರ್ತಿ ಲಲಿತಾಸನದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದನ್ನು ಕುಳಿತಿರುವ ಗಣೇಶ ಎಂದೂ ಕರೆಯಲಾಗುತ್ತೆ. ಅಂತಹ ಗಣೇಶನ ವಿಗ್ರಹವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತೆ.

ಕುಳಿತಿರುವ ಗಣೇಶ ವಿಗ್ರಹವು(Ganesh idol) ಕುಟುಂಬದಲ್ಲಿ ಶಾಂತಿಯನ್ನು ಕಾಪಾಡುತ್ತೆ. ಇದಲ್ಲದೆ, ಗಣಪತಿ ಭಾವಚಿತ್ರ ಅಥವಾ ಮಲಗಿರುವ ಸ್ಥಾನದಲ್ಲಿರುವ ಗಣೇಶನ ಚಿತ್ರವು ಸಹ ಐಷಾರಾಮಿ, ಆರಾಮ ಮತ್ತು ಸಂಪತ್ತನ್ನು ಪ್ರತಿನಿಧಿಸುವುದರಿಂದ ಅದನ್ನು ತುಂಬಾ ಅದೃಷ್ಟವೆಂದು ಪರಿಗಣಿಸಲಾಗುತ್ತೆ.
 

ಗಣೇಶನ ಸೊಂಡಿಲಿನ ದಿಕ್ಕು

ನಿಮ್ಮ ಮನೆಗೆ ಗಣಪತಿ (Ganapathi) ವಿಗ್ರಹವನ್ನು ಆಯ್ಕೆ ಮಾಡುವಾಗ, ಗಣೇಶನ ಸೊಂಡಿಲಿನ ಬಗ್ಗೆ ಗಮನ ಹರಿಸುವುದು ಅಗತ್ಯ. ವಾಸ್ತುವಿನ ಪ್ರಕಾರ, ಗಣೇಶನ ವಿಗ್ರಹದ ಸೊಂಡಿಲನ್ನು ಎಡಕ್ಕೆ ವಾಲಿಸಬೇಕು, ಏಕೆಂದರೆ ಇದನ್ನು ಯಶಸ್ಸು ಮತ್ತು ಸಮೃದ್ಧಿಯ ದಿಕ್ಕು ಎಂದು ಪರಿಗಣಿಸಲಾಗಿದೆ. ಬಲಗಡೆಗೆ ಸೊಂಡಿಲನ್ನು ಬಾಗಿಸಿದ ಗಣೇಶನನ್ನು ಮೆಚ್ಚಿಸೋದು ಸ್ವಲ್ಪ ಕಷ್ಟ ಎಂದು ನಂಬಲಾಗಿದೆ.

ಮೋದಕ ಮತ್ತು ಇಲಿ(Rat)

ಮನೆಗಾಗಿ ಗಣಪತಿ ವಿಗ್ರಹ ಖರೀದಿಸುವಾಗ, ಮೋದಕ ಮತ್ತು ಇಲಿ ಕೂಡ ವಿಗ್ರಹದ ಭಾಗವಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಇಲಿ ಗಣಪತಿಯ ವಾಹನ ಮತ್ತು ಮೋದಕ ಅವನ ನೆಚ್ಚಿನ ಸಿಹಿತಿಂಡಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಗಣೇಶ ವಿಗ್ರಹವನ್ನು ಆಯ್ಕೆ ಮಾಡುವಾಗ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ.
 

ಬಿಳಿ ಗಣೇಶ ವಿಗ್ರಹ(White Ganesh idol)

ವಾಸ್ತು ಶಾಸ್ತ್ರದ ಪ್ರಕಾರ, ಬಿಳಿ ಬಣ್ಣದ ಗಣೇಶ ವಿಗ್ರಹ ಶಾಂತಿ ಮತ್ತು ಸಮೃದ್ಧಿ ಬಯಸುವವರಿಗೆ ಪರಿಪೂರ್ಣ ಆಯ್ಕೆ. ನೀವು ಬಿಳಿ ಬಣ್ಣದ  ಗಣೇಶ ಚಿತ್ರಗಳನ್ನು ಸಹ ಆಯ್ಕೆ ಮಾಡಬಹುದು. ಸ್ವ-ಅಭಿವೃದ್ಧಿಯಲ್ಲಿ ಆಸಕ್ತಿ ಇರುವವರು ಮನೆಗೆ ಸಿಂಧೂರ ಬಣ್ಣದ ಗಣೇಶ ವಿಗ್ರಹವನ್ನು ಆಯ್ಕೆ ಮಾಡಬೇಕು. ಬಿಳಿ ಗಣೇಶನು ಸಂಪತ್ತು, ಸಂತೋಷ ಮತ್ತು ಸಮೃದ್ಧಿಯ ಸಂಕೇತ. ದೇವರ ಬೆನ್ನು ಮನೆಯ ಹೊರಭಾಗದಲ್ಲಿರಬೇಕು ಎಂಬುದನ್ನು ಯಾವಾಗಲೂ ನೆನಪಿಡಿ.

ಈ ದಿಕ್ಕಿನಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ

ವಾಸ್ತು ತಜ್ಞರ ಪ್ರಕಾರ, ಪಶ್ಚಿಮ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸೋದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನೆನಪಿಡಿ, ಮನೆಯಲ್ಲಿ ಇರಿಸಲಾದ ಗಣೇಶನ ಎಲ್ಲಾ ಚಿತ್ರಗಳು ಉತ್ತರ ದಿಕ್ಕಿನಲ್ಲಿರಬೇಕು(North), ಏಕೆಂದರೆ ಗಣೇಶನ ತಂದೆಯಾದ ಶಿವನು ಈ ದಿಕ್ಕಿನಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ನೀವು ಮನೆಯಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸುತ್ತಿದ್ದರೆ, ಅದರ ಮುಖವು ಮನೆಯ ಮುಖ್ಯ ಬಾಗಿಲಿನ ಕಡೆಗೆ ಇರಬೇಕು. ಗಣೇಶನ ವಿಗ್ರಹವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ.

ಇಂತಹ ಸ್ಥಳಗಳಲ್ಲಿ ಗಣೇಶನ ವಿಗ್ರಹ ಇಡಬೇಡಿ

ವಾಸ್ತು ತಜ್ಞರ ಪ್ರಕಾರ, ಗಣೇಶ ವಿಗ್ರಹವನ್ನು ಮಲಗುವ ಕೋಣೆ, ಗ್ಯಾರೇಜ್ ಅಥವಾ ಲಾಂಡ್ರಿ ಪ್ರದೇಶದಲ್ಲಿ ಇಡಬಾರದು. ಇದನ್ನು ಮೆಟ್ಟಿಲುಗಳ(Stairs) ಕೆಳಗೆ ಅಥವಾ ಸ್ನಾನಗೃಹದ ಬಳಿ ಇಡಬಾರದು. ಗ್ಯಾರೇಜ್ ಅಥವಾ ಕಾರ್ ಪಾರ್ಕಿಂಗ್ ಪ್ರದೇಶವನ್ನು ಖಾಲಿ ಪ್ರದೇಶವೆಂದು ಪರಿಗಣಿಸಲಾಗಿರೋದರಿಂದ, ಮನೆಯ ಈ ಭಾಗದಲ್ಲಿ ದೇವರನ್ನು ಇಡುವುದು ಅಶುಭ. ಅಲ್ಲದೆ, ಮೆಟ್ಟಿಲುಗಳ ಕೆಳಗೆ ಸಾಕಷ್ಟು ನಕಾರಾತ್ಮಕ ಶಕ್ತಿ ಇರುತ್ತೆ, ಆದುದರಿಂದ ಇಲ್ಲಿ ಗಣೇಶನ ವಿಗ್ರಹ ಸ್ಥಾಪಿಸಬಹುದು.
 

click me!