ನಿತ್ಯಾನಂದನ 'ಕೈಲಾಸ'ದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

First Published Mar 1, 2023, 4:30 PM IST

ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ 19ನೇ ಸಮಾವೇಶದಲ್ಲಿ ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿ ಸುದ್ದಿಯಾದ ಈ ಮಹಿಳೆ ಯಾರು? ಇಷ್ಟಕ್ಕೂ ಇವಳ ಸ್ಟೈಲ್ ನೋಡಿದ್ರೆ ಬೆರಗಾಗ್ತೀರಿ..

ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ 19ನೇ ಸಮಾವೇಶದಲ್ಲಿ ಭಾಗಿಯಾದ ಈಕೆಯ ಹೆಸರು ವಿಜಯಪ್ರಿಯಾ ನಿತ್ಯಾನಂದ.

ಅತ್ಯಾಚಾರದ ಗಂಭೀರ ಆರೋಪ ಎದುರಿಸಿ, ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ ಹುಟ್ಟು ಹಾಕಿದ ಹೊಸ ದೇಶ ಕೈಲಾಸವಾಗಿದೆ. ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಪ್ರತಿನಿಧಿಯಾಗಿ ಭಾಗವಹಿಸಿದ್ದಳು. 

'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ'ವನ್ನು ಪ್ರತಿನಿಧಿಸಿದ ವಿಜಯಪ್ರಿಯಾ ನಿತ್ಯಾನಂದ 'ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರಿಗೆ' ರಕ್ಷಣೆ ನೀಡಬೇಕು ಎಂದು ಈ ಸಭೆಯಲ್ಲಿ ಹೇಳಿದಳು.

'ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರಾದ ನಿತ್ಯಾನಂದ ಅವರು ಹಿಂದೂ ಧರ್ಮದ ಸ್ಥಳೀಯ ಸಂಪ್ರದಾಯಗಳು ಮತ್ತು ಜೀವನಶೈಲಿಯನ್ನು ಪುನರುಜ್ಜೀವನಗೊಳಿಸಿದ್ದಕ್ಕಾಗಿ ತೀವ್ರವಾದ ಕಿರುಕುಳ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಮೂಲಕ ಹೋಗಿದ್ದಾರೆ. ಅವರು ಬೋಧನೆಯಿಂದ ನಿಷೇಧಿಸಲ್ಪಟ್ಟರು ಮತ್ತು ಅವರನ್ನು ಜನ್ಮ ದೇಶದಿಂದ ಗಡಿಪಾರು ಮಾಡಿಲಾಯಿತು' ಎಂದೀಕೆ ಸಭೆಯಲ್ಲಿ ದೂರಿದ್ದಾಳೆ.

ವಿಜಯಪ್ರಿಯಾ ನಿತ್ಯಾನಂದ ಹೇಳುವ ಪ್ರಕಾರ ಆಕೆ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿದ್ದಾಳೆ. ಆಕೆಯ ಫೇಸ್ಬುಕ್ ಅಕೌಂಟ್‌ನಲ್ಲಿ ಅವಳ  ಬಗ್ಗೆ ಇದಕ್ಕಿಂತ ಹೆಚ್ಚಿನ ಮಾಹಿತಿ ಇಲ್ಲ.

ಸ್ವಿಡ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಫೆಬ್ರವರಿ 22ರಂದು ನಡೆದ ಸಂಯುಕ್ತ ರಾಷ್ಟ್ರಗಳ ಕಾರ್ಯಕ್ರಮದಲ್ಲಿ ಈಕೆ ಕೈಲಾಸದ ಪ್ರತಿನಿಧಿಯಾಗಿದ್ದಳು.

ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಪ್ರತಿನಿಧಿಯು ಪ್ರತಿ ದೇಶದಲ್ಲೂ ಇದ್ದು, ಅವರೆಲ್ಲರೂ ವಿಶ್ವಸಂಸ್ಥೆಯ ಈ ಸಭೆಯಲ್ಲಿ ಭಾಗಿಯಾಗಿದ್ದರು. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಪರವಾಗಿ ಈಕೆ ವಿದೇಶಾಂಗ ಸಚಿವೆಯಂತೆ ಕೆಲಸ ಮಾಡುತ್ತಾಳೆ.

ಈಕೆ ತನ್ನ ಫೇಸ್ಬುಕ್ ಖಾತೆಯಲ್ಲಿ ನಿತ್ಯಾನಂದನ ಫೋಟೋವನ್ನು ಹಾಕಿಕೊಂಡು '𝙏𝙤 𝙢𝙮 𝘽𝙚𝙡𝙤𝙫𝙚𝙙 𝙉𝙞𝙩𝙝𝙮𝙖𝙣𝙖𝙣𝙙𝙖 𝙋𝙖𝙧𝙖𝙢𝙖𝙨𝙝𝙞𝙫𝙖𝙢' ಎಂದು ಹೇಳುತ್ತಾ ಅವನ ಬಗ್ಗೆ ಕವಿತೆಯನ್ನೇ ಬರೆದಿದ್ದಾಳೆ.

ನಿತ್ಯಾನಂದ ನಗುತ್ತಾ ಕುಳಿತಿರುವಲ್ಲಿ ನಿಂತು ಸ್ಲೀವ್‌ಲೆಸ್ ಬ್ಲೌಸ್ ಹಾಕಿಕೊಂಡು ಸೆಲ್ಫಿ ತೆಗೆದುಕೊಂಡಿರುವ ಈಕೆ 'ಹ್ಯಾಪಿ ವೈಕುಂಠ ಏಕಾದಶಿ' ಎಂದು ಹಾಕಿ ಹ್ಯಾಶ್‌ಟ್ಯಾಗ್‌ನಲ್ಲಿ ಐ ಲವ್ಯೂ ಸ್ವಾಮೀಜಿ, ಪರಂಧಾಮ ಎಂದು ಹಾಕಿದ್ದಾಳೆ. ಈಕೆ ಕೈನಲ್ಲಿರುವ ನಿತ್ಯಾನಂದನ ಹಚ್ಚೆ ಎದ್ದು ಕಾಣುತ್ತಿದೆ.

ಈಕೆ ಕೈಲಾಸವಾಸಿಯಾಗಿ ಸೀರೆ, ಜಟೆ, ರುದ್ರಾಕ್ಷಿ, ಚಿನ್ನಾಭರಣಗಳಲ್ಲಿ ಕಂಗೊಳಿಸಿದರೆ, ವಾಷಿಂಗ್ಟನ್ ನಿವಾಸಿಯಾಗಿ ವೆಸ್ಟರ್ನ್ ಉಡುಗೆಯಲ್ಲಿ ಮಿಂಚುತ್ತಿರುವ ಫೋಟೋಗಳನ್ನು ಫೇಸ್ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

ನಿತ್ಯಾನಂದನನ್ನು ಸುಬ್ರಹ್ಮಣ್ಯ, ಶಿವ, ಗಣೇಶ ಮುಂತಾದ ಅವತಾರಗಳೆಂಬಂತೆ ಬಿಂಬಿಸಿ ಅವನ ಫೋಟೋವನ್ನು ಫೇಸ್ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಾಳೆ ಈಕೆ. 

ಈಕೆಯ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ವಿಜಯಪ್ರಿಯಾ  2014ರಲ್ಲಿ ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಪೂರ್ಣಗೊಳಿಸಿದ್ದಾಳೆ. ಆಕೆ ಇಂಗ್ಲಿಷ್, ಫ್ರೆಂಚ್, ಕ್ರಿಯೋಲ್ ಮತ್ತು ಪಿಡ್ಜಿನ್ಸ್‌ಗಳಲ್ಲಿ ಪ್ರವೀಣಳಾಗಿದ್ದಾಳೆ.
 

click me!