ಧನತ್ರಯೋದಶಿ ದಿನ ಈ ವಸ್ತುಗಳ ಖರೀದಿಸಿದ್ರೆ ಖುಷಿ ಅದೃಷ್ಟ ನಿಮ್ಮ ಬೆನ್ನಹಿಂದೆ ಬರುತ್ತೆ!

First Published | Oct 26, 2024, 7:30 PM IST

ಆಕ್ಟೋಬರ್ 29 ರಂದು ಮಂಗಳವಾರ ಈ ಬಾರಿಯ ಧನ ತ್ರಯೋದಶಿ ಬರುತ್ತದೆ. ಈ ದಿನ ಮೂರು ವಸ್ತುಗಳನ್ನು ಖರೀದಿಸಿ ಮನೆಗೆ ತರುವುದರಿಂದ ಲಕ್ಷ್ಮಿದೇವಿ ಕೃಪೆಯ ಜೊತೆಗೆ ಅದೃಷ್ಟವೂ ನಿಮ್ಮ ಬೆನ್ನ ಹಿಂದೆ ಬರುತ್ತದೆ. 

ದೀಪಾವಳಿ ಹಬ್ಬವನ್ನು ಐದು ದಿನಗಳ ಕಾಲ ಆಚರಿಸುತ್ತಾರೆ. ಈ ಹಬ್ಬ ಧನ ತ್ರಯೋದಶಿಯಿಂದ ಶುರುವಾಗುತ್ತದೆ. ಈ ದಿನ ಬಹಳಷ್ಟು ಜನ ಲಕ್ಷ್ಮೀ ಪೂಜೆ ಮಾಡ್ತಾರೆ. ಬಂಗಾರ, ಬೆಳ್ಳಿ ಈ ದಿನ ಕೊಂಡ್ರೆ ಲಕ್ಷ್ಮೀದೇವಿ ಮನೆಗೆ ಬರ್ತಾಳೆ ಎನ್ನುವ ನಂಬಿಕೆ ಅನೇಕರದ್ದುಈ ಬೆಳ್ಳಿ, ಬಂಗಾರ ಆಭರಣವನ್ನು ಕೊಳ್ಳದೇ ಇದ್ದರೂ ಈ ಮೂರು ವಸ್ತುಗಳನ್ನು ಕೊಂಡ್ರೆ ಲಕ್ಷ್ಮೀದೇವಿ ಕೃಪೆ ಸಿಗುವುದಲ್ಲದೆ, ಅದೃಷ್ಟ ಕೂಡ ಕೈ ಹಿಡಿಯುತ್ತದೆ ಎನ್ನುವ ಅಭಿಪ್ರಾಯವಿದೆ. ಆ ವಸ್ತುಗಳು ಯಾವುದು ಎಂಬುದು ಇಲ್ಲಿದೆ.

ಧನತ್ರಯೋದಶಿಯಂದು ಬಂಗಾರ, ಬೆಳ್ಳಿ ಬಿಟ್ಟು ಹೊಸ ಪೊರಕೆ(ಹಿಡಿಸೂಡಿ) ಕೊಳ್ಳಲೇಬೇಕಂತೆ. ಹಿಂದೂ ಶಾಸ್ತ್ರದ ಪ್ರಕಾರ ಹೊಸ ಪೊರಕೆ ಲಕ್ಷ್ಮೀದೇವಿಯ ಸಂಕೇತ. ಈ ದಿನ ಹೊಸ ಪೊರಕೆ ಕೊಂಡ್ರೆ ಅದೃಷ್ಟ ಬರುವುದರ ಜೊತೆಗೆ ಆರ್ಥಿಕ ಸಮಸ್ಯೆಗಳು ದೂರ ಆಗುತ್ತವೆ ಎಂಬ ನಂಬಿಕೆ ಇದೆ.

Tap to resize

ಪೊರಕೆ ಮಾತ್ರವಲ್ಲದೇ ಉಪ್ಪು, ಧನಿಯಾ(ಕೊತ್ತಂಬರಿ ಬೀಜ) ಮುಂತಾದ ವಸ್ತುಗಳನ್ನು ಕೊಂಡರೆ ಮನೆಯಲ್ಲಿ ಯಾವುದೇ ಆರ್ಥಿಕ ಸಮಸ್ಯೆಗಳು ಇರುವುದಿಲ್ಲ,  ದುಡ್ಡು, ಧಾನ್ಯ ಸಾಮಗ್ರಿಗಳ ಕೊರತೆ ಯಾವಾಗಲೂ ಇರುವುದಿಲ್ಲ, ಮನೆಯಲ್ಲಿ ಸದಾ ಐಶ್ವರ್ಯ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. 

ಈ ದಿನ ಉಪ್ಪು ಕೊತ್ತಂಬರಿ ಮುಂತಾದವುಗಳನ್ನು ಕೊಳ್ಳುವುದರಿಂದ ಕುಬೇರನ ಆಶೀರ್ವಾದ ಸಿಗುವುದು, ಕುಬೇರನ ಅಶೀರ್ವಾದ ಇದ್ದರೆ ಯಾವಾಗಲೂ ಸಂಪತ್ತಿಗೆ ಕೊರತೆ ಇರುವುದಿಲ್ಲ, 

ಧನ ತ್ರಯೋದಶೀ ದಿನ ಹಿತ್ತಾಳೆ ವಸ್ತುಗಳು, ಪಾತ್ರೆಗಳನ್ನು ಕೊಂಡ್ರೂ ಅದೃಷ್ಟ ನಿಮ್ಮದಾಗುತ್ತದೆ. ಹಿತ್ತಾಳೆ ವಸ್ತುಗಳು ಕೊಳ್ಳುವುದರಿಂದ 3 ಪಟ್ಟು ಒಳ್ಳೆಯದಾಗುತ್ತದೆ. ಬಯಸಿದ ಸಂತೋಷ ಕೂಡ ಸಿಗುತ್ತದೆ.

Latest Videos

click me!