ಜನರ ಮಧ್ಯೆ ಬೆತ್ತಲಾಗಿ ನಿಂತಂತೆ ವಿಚಿತ್ರ ಕನಸು ಬೀಳೋದರ ಅರ್ಥವೇನು?

First Published Oct 12, 2021, 12:07 PM IST

ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಒಂದಲ್ಲ ಒಂದು ಬಾರಿ ಅನುಭವಿಸುವ ಅನೇಕ ಸಾಮಾನ್ಯ ಕನಸುಗಳ ಅರ್ಥವನ್ನು ಹಿರಿಯ ಬರಹಗಾರ ಥೆರೆಸಾ ಚಿಯುಂಗ್ ವಿವರಿಸಿದ್ದಾರೆ. ಈ ಕನಸುಗಳು ವ್ಯಕ್ತಿಯ ವೈಯಕ್ತಿಕ ಬೆಳವಣಿಗೆ ಅಥವಾ ಸೃಜನಶೀಲತೆಯ ಸಂಕೇತವಾಗಿರಬಹುದು ಎಂದು ಅವರು ಹೇಳುತ್ತಾರೆ.

ಎತ್ತರದಿಂದ ಬೀಳುವುದು (Fall from high) : ಅಂತಹ ಕನಸು ತುಂಬಾ ಸಾಮಾನ್ಯವಾಗಿದೆ. ನೀವು ಎತ್ತರದಿಂದ ಬೀಳುವ ಕನಸು ಕಾಣುತ್ತಿದ್ದರೆ, ನಿಮ್ಮ ಜೀವನದ ಕೆಲವು ವಿಷಯಗಳು ನಿಮ್ಮ ನಿಯಂತ್ರಣದಿಂದ ಹೊರಬರುತ್ತಿವೆ ಎಂದರ್ಥ. ಈ ಸಂದರ್ಭದಲ್ಲಿ, ನೀವು ಮುಂಚಿತವಾಗಿ ಜಾಗರೂಕರಾಗಿರಬೇಕು. ನಿಮ್ಮ ಪತನವನ್ನು ಎತ್ತರಕ್ಕೆ ಹಾರಾಡುವಂತೆ ಪರಿವರ್ತಿಸಲು ಪ್ರಯತ್ನಿಸಿ

ಇಷ್ಟವಿಲ್ಲದೆ ಯಾರೊಂದಿಗೋ ಮಲಗಿದಂತೆ ಕನಸು (forcibly sleeping with other person)
ಕನಸಿನಲ್ಲಿ ಬೇರೊಬ್ಬರೊಂದಿಗೆ ಮಲಗುವುದು ಎಂದರೆ ಅವರ ವ್ಯಕ್ತಿತ್ವದ ಕೆಲವು ಅಂಶಗಳಾದ ಹಾಸ್ಯ ಪ್ರಜ್ಞೆಯನ್ನು ಸ್ವತಃ ಅಳವಡಿಸಿಕೊಳ್ಳಬೇಕಾಗಿದೆ. ಅಂತಹ ಕನಸುಗಳು ನಿಜ ಜೀವನ ಅಥವಾ ಸಂಬಂಧದಲ್ಲಿ ಏನನ್ನಾದರೂ ಕಳೆದುಕೊಳ್ಳುವ ಸಂಕೇತವೂ ಆಗಿರಬಹುದು. 

ಗರ್ಭಿಣಿ ಕನಸು (pregnancy dream): ನೀವು ಕನಸಿನಲ್ಲಿ ಗರ್ಭಿಣಿಯಾಗಿ ನಿಮ್ಮನ್ನು ನೋಡುತ್ತಿದ್ದರೆ ಅದು ತಾಳ್ಮೆಯ ಸಂಕೇತವಾಗಿರಬಹುದು ಮತ್ತು ಪ್ರಸ್ತುತ ಯೋಜನೆಗಳು ಯಶಸ್ವಿಯಾಗಲು ಕಾಯುತ್ತಿರಬಹುದು. ಇದು ಹೊಸ ಆರಂಭ ಅಥವಾ ಸಂಬಂಧದ ಸಂಕೇತವಾಗಿರಬಹುದು.. ತಾಳ್ಮೆಯಿಂದ ಹೆಜ್ಜೆ ಇಡುವುದು  ಮುಖ್ಯ,

ಯಾರಾದರೂ ನಿಮ್ಮನ್ನು ಹಿಂಬಾಲಿಸುತ್ತಿದ್ದರೆ (someone following you): ಇಂತಹ ಕನಸು ನಿಜ ಜೀವನದಲ್ಲಿ ಓರ್ವ ವ್ಯಕ್ತಿಯಿಂದ ಓಡಿಹೋಗುತ್ತಿರುವ ಸೂಚನೆಯಾಗಿದೆ. ಅಥವಾ ನೀವು ಎದುರಿಸಬೇಕಾದ  ಸನ್ನಿವೇಶಗಳಿಂದ ತಪ್ಪಿಸಿಕೊಳ್ಳುವ ಯೋಜನೆ. ನೀವು ಭಾವನೆ ಅಥವಾ ಜವಾಬ್ದಾರಿಯಿಂದ ಓಡಿಹೋಗಬಹುದು. ಆದರೆ ಓಡಿಹೋಗುವ ಬದಲು  ಮನುಷ್ಯ ಅಥವಾ ಸನ್ನಿವೇಶವನ್ನು ಎದುರಿಸಬೇಕು.

ಸಾವಿನ ಕನಸು ಕಾಣುವುದು (Dream of death): ನೀವು ಕನಸಿನಲ್ಲಿ ಸಾವನ್ನು ನೋಡಿದ್ದರೆ, ಅದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯ ಅಗತ್ಯದ ಸಂಕೇತವಾಗಿದೆ. ಏಕೆಂದರೆ ನೀವು ಮನುಷ್ಯನಿಗೆ ಅಥವಾ ಯಾವುದಾದರೂ ವಿಷಯಕ್ಕೆ ವಿದಾಯ ಹೇಳಬೇಕು. ಇದು ಯೋಜನೆ, ಉದ್ಯೋಗ, ಮನೆ ಅಥವಾ ಸಂಬಂಧಕ್ಕೆ ಸಂಬಂಧಿಸಿರಬಹುದು. 

 ತುಂಬಾ ಜನರ ನಡುವೆ ಬೆತ್ತಲೆಯಾಗಿರುವುದು (naked in public)
ಕನಸಿನಲ್ಲಿ ಸಾರ್ವಜನಿಕವಾಗಿ ಬೆತ್ತಲೆಯಾಗಿ ಕಾಣುತ್ತೀರಿ ಎಂದಾದಲ್ಲಿ, ಅದು ನೀವು ಬಾಲ್ಯಕ್ಕೆ ಮರಳಲು ಸೂಚಿಸುತ್ತದೆ. ತೋರಿಕೆ ಅಥವಾ ಬೂಟಾಟಿಕೆಯಿಂದಾಗಿ ಕಣ್ಮರೆಯಾದ ಮುಗ್ಧತೆಯನ್ನು ಮತ್ತೆ ಬಯಸುತ್ತೀರಿ. ನೀವು ತೋರಿಕೆಗಳನ್ನು ನಿಲ್ಲಿಸಬೇಕು ಮತ್ತು  ನಿಜವಾದ ಪ್ರವೃತ್ತಿಯನ್ನು ಅಳವಡಿಸಿಕೊಳ್ಳಬೇಕು 

ಪರೀಕ್ಷೆಗೆ ಸಿದ್ಧರಾಗಿರದ ಕನಸು (Not prepared for exam)
ಅಂತಹ ಕನಸು ಎಂದರೆ ನೀವು ನಿಗದಿಪಡಿಸಿದ ಯೋಜನೆಯನ್ನು ಪೂರ್ತಿ ಮಾಡಲು ನಿಮಗೆ ಸಾಧ್ಯವಾಗಲಿಲ್ಲ. ಅಥವಾ ಬಹುಶಃ ನೀವು ಇತರರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ನೀವು ಅದರ ಬಗ್ಗೆ ಕನಸು ಕಂಡಿದ್ದರೆ, ನಿಮ್ಮನ್ನುನೀವು ಉತ್ತೇಜಿಸಬೇಕು ಮತ್ತು  ಸ್ವಂತ ನಿಯಮಗಳ ಮೇಲೆ ಜೀವನವನ್ನು ಸಾಗಿಸಬೇಕು. ನಿಮ್ಮ ದೌರ್ಬಲ್ಯಗಳಿಗಿಂತ ಸಾಮರ್ಥ್ಯಗಳ ಮೇಲೆ ಗಮನ ಕೇಂದ್ರೀಕರಿಸಿ.

click me!