Lucky zodiac signs December 2025: ಗುರು ಮನೆಯಲ್ಲಿ ಶುಕ್ರನ ಪ್ರವೇಶ ಮೂಟೆಗಟ್ಟಲೆ ಹಣ ಗಳಿಸಲಿವೆ ಅದೃಷ್ಟದ 3 ರಾಶಿಗಳು

Published : Oct 30, 2025, 02:33 PM IST

Lucky zodiac signs December 2025: ಡಿಸೆಂಬರ್ 2025 ರಲ್ಲಿ, ಶುಕ್ರನು ಧನು ರಾಶಿಯನ್ನು ಪ್ರವೇಶಿಸಲಿದ್ದು, ಇದು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಈ ಸಂಚಾರದಿಂದಾಗಿ, ವಿಶೇಷವಾಗಿ 3 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದ್ದು, ಅವರ ಜೀವನದಲ್ಲಿ ಸಂಪತ್ತು, ವೃತ್ತಿ ಪ್ರಗತಿ ಮತ್ತು ಸಂತೋಷ ಹೆಚ್ಚಾಗಲಿದೆ.

PREV
14
ಶುಕ್ರ

ಜ್ಯೋತಿಷ್ಯದಲ್ಲಿ ಶುಕ್ರನನ್ನು ಶುಭ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನ ಕೃಪೆಗೆ ಒಳಗಾದ್ರೆ ಜೀವನದಲ್ಲಿ ಐಷಾರಾಮಿ, ಸಂಪತ್ತು, ಸುಖ, ಪ್ರೀತಿ ಎಲ್ಲವೂ ಭರಪೂರವಾಗಿ ಸಿಗುತ್ತದೆ. ಶುಕ್ರನಲ್ಲಿ ಸಣ್ಣ ಚಲನೆಯಾದರೂಮ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. 2025 ಡಿಸೆಂಬರ್‌ನಲ್ಲಿ ಗುರುವಿನ ಧನು ರಾಶಿಯನ್ನು ಶುಕ್ರ ಪ್ರವೇಶಿಸಲಿದ್ದಾನೆ. ಇದರಿಂದ ಮೂರು ರಾಶಿ ಚಕ್ರದವರ ಅದೃಷ್ಟ ಖುಲಾಯಿಸಲಿದೆ. ಆ ಮೂರು ರಾಶಿಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

24
ಮೇಷ ರಾಶಿ

ಧನು ರಾಶಿಗೆ ಶುಕ್ರನ ಸಂಚಾರ ಮೇಷ ರಾಶಿಯವರಿಗೆ ಮಂಗಳಕರವನ್ನುಂಟು ಮಾಡಲಿದೆ. ಮೇಷ ರಾಶಿಯ ಭಾಗ್ಯದ 9ನೇ ಮನೆಯಲ್ಲಿ ಶುಕ್ರ ಸಂಚರಿಸಲಿದ್ದಾನೆ. ಹಾಗಾಗಿ ಮೇಷ ರಾಶಿಚಕ್ರದವರು ಹಲವು ಲಾಭಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಶುಕ್ರನಿಂದ ಈ ಕೆಳಗಿನ ಲಾಭಗಳು ಮೇಷ ರಾಶಿಯವರಿಗೆ ಲಭ್ಯವಾಗಲಿವೆ

* ಧರ್ಮಕಾರ್ಯಗಳಲ್ಲಿ ಭಾಗಿಯಾಗುವ ಸೌಭಾಗ್ಯ ಸಿಗಲಿದೆ

* ದೂರ ಪ್ರಯಾಣದ ಸಾಧ್ಯತೆ

* ಅದೃಷ್ಟ ನಿಮ್ಮ ಪರವಾಗಿರಲಿದ್ದು, ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.

* ಆದಾಯ ಹೆಚ್ಚಳವಾಗಲಿದ್ದು, ಹೂಡಿಕೆಗೆ ಉತ್ತಮ ಅವಕಾಶ

* ವ್ಯಾಪಾರಿಗಳಿಗೆ ಲಾಭದ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಮತ್ತು ವ್ಯವಹಾರದ ವಿಸ್ತರಣೆ

* ಧಾರ್ಮಿಕ ಕಾರ್ಯಗಳಿಗೆ ದಾನ

34
ಧನು ರಾಶಿ

ಶುಕ್ರನ ಸಂಚಾರದಿಂದ ಧನು ರಾಶಿಗೆ ಹೆಚ್ಚು ಅನುಕೂಲಕರವಾಗಿರಲಿದೆ. ಧನು ರಾಶಿಯ ಲಗ್ನ ಸ್ಥಾನವಾದ ಮೊದಲ ಮನೆಯಲ್ಲಿ ಶುಕ್ರನ ಸಂಚಾರವಿದೆ. ಇದರಿಂದಾಗಿ ಧನು ರಾಶಿಚಕ್ರದವರಲ್ಲಾಗುವ ಲಾಭಗಳು ಹೀಗಿರಲಿವೆ

* ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಂತೋಷ ನೆಲೆಸಲಿದೆ.

* ಎಲ್ಲಾ ಕೆಲಸಗಳಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗಲಿದೆ.

* ವ್ಯಕ್ತಿತ್ವದಲ್ಲಿ ಬದಲಾವಣೆ, ಮನೆ ಅಥವಾ ವಾಹನ ಖರೀದಿ ಭಾಗ್ಯ

* ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ಸಿಗಲಿದೆ, ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ

* ಅವಿವಾಹಿತರಿಗೆ ಮದುವೆ ಯೋಗ, ಶುಭ ಕಾರ್ಯದಲ್ಲಿ ಭಾಗಿ

* ಮಕ್ಕಳಿಂದು ಶುಭ ಸುದ್ದಿ ಕೇಳಲಿದ್ದೀರಿ.

ಇದನ್ನೂ ಓದಿ: ಡಿಸೆಂಬರ್‌ನಲ್ಲಿ 6 ಗ್ರಹದಿಂದ ಈ 6 ರಾಶಿಗೆ ಅದೃಷ್ಟ, ಈ ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ

44
ಮೀನ ರಾಶಿ

ಶುಕ್ರನು ಮೀನ ರಾಶಿಯಿಂದ ಹತ್ತನೇ ಮನೆಯಾದ ಕರ್ಮ ಸ್ಥಾನದಲ್ಲಿ ಸಂಚರಿಸೋದರಿಂದ ಅನೇಕ ಲಾಭಗಳು ಪಡೆದುಕೊಳ್ಳಲಿದ್ದಾರೆ.

* ಕೆಲಸ ಮಾಡುವ ಸ್ಥಳದಲ್ಲಿ ಗೌರವ ಹೆಚ್ಚಳವಾಗಲಿದೆ.

* ಉದ್ಯೋಗದಲ್ಲಿ ಬಡ್ತಿ

* ವ್ಯಾಪಾರದಲ್ಲಿ ಪ್ರಗತಿ, ಲಾಭದ ಪ್ರಮಾಣ ಏರಿಕೆ

* ಹಳೆಯ ಹೂಡಿಕೆಗಳಿಂದ ಉತ್ತಮ ಆದಾಯ

* ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು

* ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಬೆಂಬಲ

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: 2026ರಲ್ಲಿ ರಾಹು-ಕೇತು ಸಂಚಾರ, 18 ತಿಂಗಳು 3 ರಾಶಿಗೆ ಸುವರ್ಣಯುಗ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ!

Read more Photos on
click me!

Recommended Stories