ಶುಕ್ರನು ಅಕ್ಟೋಬರ್ 18ರಂದು ತುಲಾ ರಾಶಿಗೆ ಬರಲಿದ್ದಾನೆ ಮತ್ತು ಸೂರ್ಯ ಹಾಗು ಕೇತುವನ್ನು ಭೇಟಿಯಾಗಲಿದ್ದಾನೆ. ಅಲ್ಲದೆ, ಶುಕ್ರ ತುಲಾ ರಾಶಿಗೆ ಬರುತ್ತಾನೆ. ತನ್ನ ರಾಶಿಯಲ್ಲಿ ಸಂಚರಿಸುತ್ತಾನೆ, ಇದರಿಂದ ಅದು ತುಂಬಾ ಬಲವಾದ ಸ್ಥಾನದಲ್ಲಿರುತ್ತೆ. ತುಲಾ ರಾಶಿಯಲ್ಲಿ ಶುಕ್ರನ ಸಂಚಾರದ ಸಮಯದಲ್ಲಿ ಧನ್ ತೇರಸ್ ಮತ್ತು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತೆ. ಹಾಗಾಗಿ ತುಲಾರಾಶಿಯಲ್ಲಿ ಶುಕ್ರನ ತ್ರಿಗ್ರಹಿ ಯೋಗ ಮಾಡೋದರಿಂದ ಅನೇಕ ರಾಶಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಆದರೆ ಮೇಷ ವೃಷಭ ಸೇರಿದಂತೆ 5 ರಾಶಿಗಳಿಗೆ, ತುಲಾರಾಶಿಯಲ್ಲಿ ಶುಕ್ರನ ಸಂಚಾರವು ತುಂಬಾ ಪ್ರಯೋಜನಕಾರಿಯಾಗಲಿದೆ.
ಶುಕ್ರನ ಸಂಚಾರದ ಶುಭ ಪರಿಣಾಮದಿಂದ, ಮೇಷ ರಾಶಿಯ ಜನರು ವೃತ್ತಿ ಜೀವನದಲ್ಲಿ(Professional life) ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ಈ ಸಮಯದಲ್ಲಿ, ಬಾಸ್ ಮತ್ತು ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತೆ. ವ್ಯವಹಾರ ಹೊಂದಿರುವವರಿಗೆ, ವಿಶೇಷ ಪ್ರಯೋಜನಗಲಾಗಲಿದೆ. ಈ ಅವಧಿಯಲ್ಲಿ, ನೀವು ಒಂದು ದೊಡ್ಡ ವ್ಯಾಪಾರ ಒಪ್ಪಂದ ಮಾಡಬಹುದು, ಅದು ಭವಿಷ್ಯದಲ್ಲಿ ದೊಡ್ಡ ಲಾಭ ನೀಡಲಿದೆ.
210
ಇದಲ್ಲದೆ, ಪಿತ್ರಾರ್ಜಿತ ಆಸ್ತಿಯಿಂದ ಪ್ರಯೋಜನ ಪಡೆಯಬಹುದು. ವೈವಾಹಿಕ ಜೀವನದ (Married life) ಬಗ್ಗೆ ಹೇಳೋದಾದ್ರೆ, ಅದು ಶುಕ್ರನ ಶುಭ ಪರಿಣಾಮದಿಂದ ಸಂತೋಷವಾಗಿರುತ್ತೆ. ನಿಮ್ಮ ಸಂಗಾತಿಯೊಂದಿಗೆ ನೀವು ರೊಮ್ಯಾಂಟಿಕ್ ಡಿನ್ನರ್‌ಗೆ ಹೋಗಬಹುದು. ಪರಿಹಾರವಾಗಿ, ಶುಕ್ರವಾರ 7 ರೀತಿಯ ಧಾನ್ಯಗಳನ್ನು ದಾನ ಮಾಡಿ.
310
ವೃಷಭ ರಾಶಿಯ ಮೇಲೆ ಶುಕ್ರನ ಪರಿಣಾಮ
ಶುಕ್ರನ ಈ ಸಂಚಾರ ಜೀವನದಲ್ಲಿ ಹಣ ಗಳಿಸಲು(Money) ಹೊಸ ಅವಕಾಶಗಳನ್ನು ತರುತ್ತೆ. ದೀರ್ಘಕಾಲದಿಂದ ಏನನ್ನು ಸಾಧಿಸಲು ಶ್ರಮಿಸುತ್ತಿದ್ದೀರೋ, ಅದನ್ನು ನೀವು ಈ ಸಮಯದಲ್ಲಿ ಪಡೆಯಬಹುದು. ಉದ್ಯೋಗಸ್ಥರ ವೇತನ ಹೆಚ್ಚಿಸುವ ಬಗ್ಗೆ ಮಾತುಗಳು ಇರಬಹುದು ಅಥವಾ ದೀಪಾವಳಿಯಂದು ದುಬಾರಿ ಉಡುಗೊರೆಗಳನ್ನು ಪಡೆಯಬಹುದು.
410
ವೃಷಭ ರಾಶಿಯವರು ಹಣವನ್ನು ಉಳಿಸುವತ್ತ ಗಮನ ಹರಿಸಬೇಕು. ಯಾಕೆಂದರೆ ಜೀವನ ಸಾಗಿಸಲು ಹಣದ ಅವಶ್ಯಕತೆ ತುಂಬಾ ಇದೆ. ವೈವಾಹಿಕ ಜೀವನದಲ್ಲಿ, ಯಾವುದೇ ರೀತಿಯ ವಾದಗಳನ್ನು (Arguement) ತಪ್ಪಿಸೋದು ಒಳಿತು. ಪರಿಹಾರವಾಗಿ, ಹೆಚ್ಚು ಸೋಂಪು, ಜೇನುತುಪ್ಪ ಮತ್ತು ಬೇಳೆಕಾಳು ಸೇವಿಸಿ.
510
ಕರ್ಕಾಟಕ ರಾಶಿಯ ಮೇಲೆ ಶುಕ್ರನ ಸಂಚಾರದ ಪರಿಣಾಮ
ಶುಕ್ರನ ಸಂಚಾರವು ಕರ್ಕಾಟಕ ರಾಶಿಯವರಿಗೆ ಬಹಳ ಮಂಗಳಕರ ಪರಿಣಾಮವನ್ನು ತರಲಿದೆ. ಈ ಸಂಚಾರದ ಪರಿಣಾಮದಿಂದ, ಮನೆಯನ್ನು ಅಲಂಕರಿಸಲು ಮತ್ತು ಸುಂದರಗೊಳಿಸಲು ಹೆಚ್ಚು ಖರ್ಚು ಮಾಡಬಹುದು. ಈ ದೀಪಾವಳಿಯ ಶುಭ ಸಂದರ್ಭದಲ್ಲಿ, ಹೊಸ ವಾಹನ (vehicle) ಖರೀದಿಸುವ ಯೋಗವಿದೆ. ವ್ಯವಹಾರದೊಂದಿಗೆ ಸಂಬಂಧ ಹೊಂದಿರುವವರು ಈ ಹಬ್ಬದ ಋತುವಿನಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭ ಪಡೆಯುತ್ತಾರೆ.
610
ಯಾವುದೇ ಕೆಲಸದ ಯಶಸ್ಸಿಗೆ ಕಠಿಣ ಪರಿಶ್ರಮದ ಕೊರತೆ ಇರಬಾರದು. ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷವಾಗಬಹುದು ಮತ್ತು ನಿಮ್ಮನ್ನು ಲೈಫಿನಲ್ಲಿ ಮುಂದೆ ಕರೆದೊಯ್ಯಬಹುದು. ಈ ಸಮಯದಲ್ಲಿ ನೀವು ಕಠಿಣ ಪರಿಶ್ರಮದ ಫಲವನ್ನು ಹಣದ ಲಾಭದ ರೂಪದಲ್ಲಿ ಪಡೆಯುವ ನಿರೀಕ್ಷೆಯಿದೆ. ಪ್ರೀತಿ (Love) ಮತ್ತು ಪ್ರಣಯದ ವಿಷಯಕ್ಕೆ ಬಂದ್ರೆ, ಈ ಸಂಚಾರದ ಅವಧಿಯು ತುಂಬಾ ಅದ್ಭುತವಾಗಿರಲಿದೆ. ಇದಕ್ಕೆ ಪರಿಹಾರವಾಗಿ, ಕಡಲೆ ಬೇಳೆ ಮತ್ತು ಅರಿಶಿನವನ್ನು ಪ್ರತಿ ಶುಕ್ರವಾರ ಬಾವಿಗೆ ಹಾಕಿ.
710
ಕನ್ಯಾರಾಶಿಯ ಮೇಲೆ ಶುಕ್ರನ ಸಂಚಾರದ ಪರಿಣಾಮ
ಕನ್ಯಾ ರಾಶಿಯವರಿಗೆ, ಈ ಸಂಚಾರ ಎಲ್ಲಾ ರೀತಿಯ ಭೌತಿಕ ಸಂತೋಷಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಸಂಪತ್ತು(Wealth) ಹೆಚ್ಚಾಗುವ ಸಾಧ್ಯತೆಯಿದೆ. ಹಣವನ್ನು ಉಳಿಸುವಲ್ಲಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕವಾಗಿ, ಈ ಅವಧಿಯು ನಿಮಗೆ ಪ್ರಯೋಜನಕಾರಿಯಾಗಲಿದೆ ಮತ್ತು ಈ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಷಮತೆ ಸಹ ಸುಧಾರಿಸಲಿದೆ.
810
ಆರ್ಥಿಕ ಸ್ಥಿತಿ ಸುಧಾರಿಸಲಿದೆ ಮತ್ತು ನಿಮ್ಮ ಹಣ ಎಲ್ಲಿ ಸಿಲುಕಿಕೊಂಡಿದ್ದರೂ, ಈ ಸಮಯದಲ್ಲಿ ನೀವು ಅದನ್ನು ಹಬ್ಬಕ್ಕೆ ಮುಂಚಿತವಾಗಿ ಮರಳಿ ಪಡೆಯುತ್ತೀರಿ. ಆದಾಯದ ಹೊಸ ಮೂಲಗಳನ್ನು ಸಹ ಕಂಡುಕೊಳ್ಳುತ್ತೀರಿ. ಸಾಲವನ್ನು ಮರುಪಾವತಿಸುವಲ್ಲಿ ನೀವು ಯಶಸ್ಸು ಪಡೆಯುವ ನಿರೀಕ್ಷೆಯಿದೆ. ಇದಕ್ಕೆ ಪರಿಹಾರವಾಗಿ, ಪ್ರತಿ ಶುಕ್ರವಾರ ಅಗತ್ಯವಿರುವವರಿಗೆ ಸಕ್ಕರೆ ಮತ್ತು ಬೆಲ್ಲದಂತಹ(Jaggery) ವಸ್ತುಗಳನ್ನು ದಾನ ಮಾಡಿ.
910
ತುಲಾ ರಾಶಿಯ ಮೇಲೆ ಶುಕ್ರನ ಸಂಚಾರದ ಪರಿಣಾಮ
ಶುಕ್ರನ ಸಂಚಾರವು ನಿಮ್ಮ ಲಗ್ನ ಮನೆಯಲ್ಲಿರಲಿದೆ ಮತ್ತು ಈ ಸಂಚಾರದ ನಂತರ, ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಲಿದೆ. ನೀವು ಮೊದಲಿಗಿಂತ ಹೆಚ್ಚು ಹಣ ಉಳಿಸಲು ಸಾಧ್ಯವಾಗುತ್ತೆ. ಹೆಚ್ಚುವರಿ ಆದಾಯದ ಮೂಲಗಳನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವು ಸಕಾರಾತ್ಮಕ (Positive) ಬದಲಾವಣೆಗಳನ್ನು ಕಾಣಲಿದೆ.
1010
ನೀವು ಎಲ್ಲಿ ಹಣ ಹೂಡಿಕೆ ಮಾಡಿದರೂ, ಅದು ಭವಿಷ್ಯದಲ್ಲಿ ನಿಮಗೆ ಉತ್ತಮ ಆದಾಯ ನೀಡಲಿದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ. ಪ್ರೇಮ ಸಂಬಂಧಗಳ ವಿಷಯದಲ್ಲಿ, ಈ ಟ್ರಾನ್ಸಿಟ್ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಪ್ರೇಮಿಗಳು ಈ ಸಮಯದಲ್ಲಿ ಮದುವೆ ಆಗಬಹುದು(Marriage) ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳಬಹುದು. ಪರಿಹಾರವಾಗಿ, ಕಪ್ಪು ಹಸು ಅಥವಾ ಕುದುರೆಗೆ ಪ್ರತಿದಿನ ರೊಟ್ಟಿ ತಿನ್ನಿಸಿ.