ಕೇತು, ಶನಿ , ಪಿತೃ ದೋಷ ನಿವಾರಣೆಗೆ ಬೇವಿನ ಉಪಾಯ

First Published | Jun 12, 2022, 12:00 PM IST

ಬೇವಿನ ಧಾರ್ಮಿಕ ಮಹತ್ವವೂ ಗಣನೀಯವಾಗಿದೆ. ದೈವಿಕ ಶಕ್ತಿಗಳಿಂದ ಸಮೃದ್ಧವಾಗಿರುವ ಬೇವನ್ನು ಬಳಸುವ ಮೂಲಕ, ಜಾತಕದಿಂದ ಮಂಗಳ, ಶನಿ ಮತ್ತು ಕೇತು ಗ್ರಹಗಳ ದೋಷ ನಿವಾರಿಸಬಹುದು. ಬೇವಿನಿಂದ ವಾಸ್ತು ದೋಷಗಳನ್ನು ಮತ್ತಿತರ ದೋಷಗಳನ್ನು ಹೇಗೆ ನಿವಾರಣೆ ಮಾಡಬಹುದು ನೋಡೋಣ.

ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಸಸ್ಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಮರಗಳು ಮತ್ತು ಸಸ್ಯಗಳು ಮನೆಯನ್ನು ಸುಂದರವಾಗಿಸಲು ಸಹಾಯ ಮಾಡುವುದಲ್ಲದೆ, ಮನೆಯ ವಾಸ್ತು ದೋಷ ನಿವಾರಿಸಲು ಸಹಾಯ ಮಾಡುತ್ತವೆ. ಆದರೆ ಬೇವಿನ(Neem) ಇತರ ಗುಣಗಳ ಬಗ್ಗೆ ಮಾತನಾಡುವುದಾದರೆ, ಅದರ ಮರವು ಔಷಧೀಯ ಗುಣಗಳಿಂದ ತುಂಬಿದೆ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಸಹ ಹೊಂದಿದೆ.

ಮಂಗಳನಲ್ಲದೆ, ಬೇವು ಶನಿ ಮತ್ತು ಕೇತುವಿಗೆ ಸಂಬಂಧಿಸಿದೆ. ನೀವು ಮನೆಯ ಹೊರಗೆ ನೆಡಲು ಬಯಸಿದರೆ, ಯಾವಾಗಲೂ ದಕ್ಷಿಣ ದಿಕ್ಕಿನಲ್ಲಿ ನೆಡಬೇಕು. ಇದಲ್ಲದೆ, ಬೇವಿನ ಮರವು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಮುಖ್ಯವಾಗಿದೆ. ಇದನ್ನು ಬಳಸುವ ಮೂಲಕ, ಅನೇಕ ರೀತಿಯ ದೋಷಗಳನ್ನು(Dosha) ತೊಡೆದುಹಾಕಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇವನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.

Tap to resize

ಜಾತಕದ ದೋಷಗಳನ್ನು ತೊಡೆದು ಹಾಕಲು ಬೇವಿನಿಂದ ನೀವು ಏನೆಲ್ಲಾ ಮಾಡಬಹುದು? 
ಶನಿ(Shani) ಮತ್ತು ಕೇತು ಗ್ರಹಗಳ ಶಾಂತಿಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೇವು ಶನಿ ಮತ್ತು ಕೇತು ಗ್ರಹಕ್ಕೆ ಸಂಬಂಧಿಸಿದೆ. ಹಾಗಾಗಿ, ಈ ಎರಡೂ ಗ್ರಹಗಳನ್ನು ಶಾಂತಗೊಳಿಸಲು ಬೇವನ್ನು ಬಳಸಬಹುದು. ನೀವು ಮನೆಯ ಹೊರಗೆ ಬೇವಿನ ಮರ ನೆಟ್ಟರೆ ಎಲ್ಲಾ ದೋಷಗಳು ನಿವಾರಣೆಯಾಗುತ್ತೆ.

ಬೇವಿನ ಮರದಿಂದ ಹವನ ಮಾಡುವ ಮೂಲಕ ಶನಿ ಗ್ರಹವನ್ನು ಶಾಂತಗೊಳಿಸಲಾಗುತ್ತದೆ. ಆದ್ದರಿಂದ, ಸಾಧ್ಯವಾದರೆ, ವಾರಕ್ಕೊಮ್ಮೆ ಹವನದಲ್ಲಿ ಬೇವಿನ ಮರವನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.
ಜಾತಕದಲ್ಲಿ ಕೇತು ಗ್ರಹವನ್ನು ಶಾಂತಗೊಳಿಸಲು, ಬೇವಿನ ಎಲೆಗಳ ರಸ ಹೊರತೆಗೆದು ಸ್ನಾನದ(Neem) ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಹೀಗೆ ಮಾಡೋದ್ರಿಂದ,  ಪ್ರತಿಯೊಂದು ಸಮಸ್ಯೆ ನಿವಾರಣೆಯಾಗುತ್ತದೆ. 

ಹನುಮಂತನನ್ನು ಮೆಚ್ಚಿಸಲು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೇವನ್ನು ಪೂಜಿಸುವ ಮೂಲಕ, ಭಗವಾನ್ ಹನುಮಾನ್(Hanuman) ಕೂಡ ಬೇಗನೆ ಸಂತೋಷಗೊಳ್ಳುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ, ಪ್ರತಿದಿನ ಬೇವಿನ ಮರಕ್ಕೆ ನೀರು ಹಾಕೋದನ್ನು ಖಚಿತಪಡಿಸಿಕೊಳ್ಳಿ.
 

ಧನಾತ್ಮಕ ಶಕ್ತಿಗಾಗಿ ಮನೆಯಲ್ಲಿ ಅಥವಾ ಹೊರಗೆ ಬೇವಿನ ಮರ ನೆಡಿ. ಹಾಗೆ ಮಾಡುವುದರಿಂದ ಸುತ್ತಲೂ ಹೆಚ್ಚು ಸಕಾರಾತ್ಮಕ ಶಕ್ತಿ ಸೃಷ್ಟಿಯಾಗುತ್ತೆ. ಏಕೆಂದರೆ ಬೇವಿನ ಮರ ಮಾ ದುರ್ಗೆಯ(Durga) ಸಂಕೇತವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಇದನ್ನು ನೀಮಾರಿ ದೇವಿ ಎಂದೂ ಸಹ ಕರೆಯಲಾಗುತ್ತದೆ.

ಪಿತೃ ದೋಷ(Pitra dosha) ವಿಮೋಚನೆಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಜಾತಕದಲ್ಲಿ ಪಿತೃದೋಷ ಹೊಂದಿದ್ದರೆ, ಅವನು ಮನೆಯ ದಕ್ಷಿಣ ಅಥವಾ ವಾಯುವ್ಯ ಕೋನದಲ್ಲಿ ಬೇವಿನ ಮರ ನೆಡಬೇಕು. ಹಾಗೆ ಮಾಡೋದ್ರಿಂದ, ಪಿತೃ ದೋಷ ನಿವಾರಣೆಯಾಗುತ್ತೆ, ಜೊತೆಗೆ ಪಿತೃಗಳ ಆಶೀರ್ವಾದವು ಯಾವಾಗಲೂ ಇರುತ್ತದೆ.

ಶನಿ ದೋಷ(Shani Dosha) ನಿವಾರಣೆಗೆ ವಾಸ್ತು ಶಾಸ್ತ್ರದ ಪ್ರಕಾರ, ಶನಿಯ ಮಹಾದಶವು ವ್ಯಕ್ತಿಯ ಜಾತಕದಲ್ಲಿ ನಡೆಯುತ್ತಿದ್ದರೆ, ಬೇವಿನ ಎಲೆಯ ಹಾರವನ್ನು ತಯಾರಿಸಿ ಅದನ್ನು ಧರಿಸಿ. ಇದು ಶನಿಯ ಅಶುಭ ಪರಿಣಾಮ ಕಡಿಮೆ ಮಾಡುತ್ತದೆ ಮತ್ತು ಶುಭ ಫಲಗಳ ಸಾಧನೆಗೆ ಕಾರಣವಾಗುತ್ತದೆ.

Latest Videos

click me!