ಈ ಐದು ರಾಶಿಗಳಿಗೆ ವ್ಯಂಗ್ಯ ಮಾಡೋದಂದ್ರೆ ನೀರು ಕುಡಿದಷ್ಟು ಸುಲಭ!

Published : Jun 11, 2022, 04:24 PM ISTUpdated : Jun 12, 2022, 12:15 PM IST

ಕೆಲವರ ಮಾತು ಸೂಜಿಗಿಂತಾ ಮೊನಚು. ಮೊದಲಿಗೆ ತಮಾಷೆಯಂತೆ ಕೇಳಿದ್ರೂ ನಿಧಾನವಾಗಿ ಅದರಲ್ಲಿರುವ ವ್ಯಂಗ್ಯ, ಕುಹಕ ಅರ್ಥವಾಗುತ್ತದೆ. ಇಂಥ ವ್ಯಂಗ್ಯ ಮಾಡುವವರು ಈ 5 ರಾಶಿಗೆ ಸೇರಿದವರಾಗಿರುತ್ತಾರೆ. 

PREV
16
ಈ ಐದು ರಾಶಿಗಳಿಗೆ ವ್ಯಂಗ್ಯ ಮಾಡೋದಂದ್ರೆ ನೀರು ಕುಡಿದಷ್ಟು ಸುಲಭ!

ಸಾಂದರ್ಭಿಕ ವ್ಯಂಗ್ಯ ಹೇಳಿಕೆಯಿಂದ ಪ್ರತಿಯೊಬ್ಬರೂ ನಗಬಹುದು, ಆದರೆ ವ್ಯಂಗ್ಯ(Sarcasm)ವನ್ನು ಎಲ್ಲರೂ ಮೆಚ್ಚುವುದಿಲ್ಲ. ನಿಮ್ಮ ಪರಿಚಿತರಲ್ಲಿ ಒಬ್ಬರಾದರೂ ವ್ಯಂಗ್ಯವೀರರಿರುತ್ತಾರೆ. ಇನ್ನೊಬ್ಬರನ್ನು ಮಾತಲ್ಲೇ ಚುಚ್ಚಿ ಸಂತಸ ಪಡುವವರು. ಎಲ್ಲ ಮಾತನ್ನೂ ವ್ಯಂಗ್ಯದಲ್ಲೇ ಆಡುವವರು. ಓದಿದ್ದು, ತಿಂದಿದ್ದು, ತೇಗಿದ್ದು ಎಲ್ಲವನ್ನೂ ವ್ಯಂಗ್ಯ ಮಾಡುವವರು, ವ್ಯಂಗ್ಯ ಅರ್ಥವಾಗದವರಿಗೆ ಹೆಚ್ಚು ಮಜಾ ತೆಗೆಯುವವರು. ವ್ಯಂಗ್ಯದಲ್ಲಿ ಹೆಚ್ಚು ನಿರರ್ಗಳವಾಗಿರುವ ಕೆಲವು ರಾಶಿಚಕ್ರ ಚಿಹ್ನೆ(zodiac signs)ಗಳಿವು. 

26

ಧನು ರಾಶಿ(Sagittarius)
ಇವರು ತಮಾಷೆಯ ರಾಶಿಚಕ್ರದ ಚಿಹ್ನೆಗಳಲ್ಲಿ ಒಂದಾಗಿರುವುದರಿಂದ ಧನು ರಾಶಿಯು ಸಂಪೂರ್ಣವಾಗಿ ವ್ಯಂಗ್ಯಾತ್ಮಕ ಹಾಸ್ಯಗಳ ಸಂಗ್ರಹವನ್ನೇ ಹೊಂದಿದೆ. ಧನು ರಾಶಿಯವರು ಜೀವನವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಎಲ್ಲವನ್ನೂ ವ್ಯಂಗ್ಯವಾಗಿ ನೋಡುತ್ತಾರೆ. 'ಲೈಫು ಇಷ್ಟೇನೇ'ಯ ದಿಗಂತ್ ಪಾತ್ರದಂತೆ ವ್ಯಂಗ್ಯವಾಡುವವರು ಇವರು. 

36

ಮಿಥುನ ರಾಶಿ(Gemini)
ಮಿಥುನವು ಅತ್ಯಂತ ವ್ಯಂಗ್ಯ ರಾಶಿಯ ಚಿಹ್ನೆ. ವ್ಯಂಗ್ಯಭರಿತ ಮಾತುಗಳು ಪುಂಖಾನುಪುಂಖವಾಗಿ ಇವರಿಂದ ಹೊರ ಬರುತ್ತವೆ. ಹಾಸ್ಯದ ವಿಷಯದಲ್ಲಿ ಇವರು ಪ್ರತಿಭಾವಂತರು ಎಂಬುದರಲ್ಲಿ ಎರಡು ಮಾತಿಲ್ಲ. ಅಂತೆಯೇ ಕೆಲವೊಮ್ಮೆ ಹಾಸ್ಯದ ಕ್ರೀಮ್ ಹಚ್ಚಿ ವ್ಯಂಗ್ಯದ ಬಿಸ್ಕೇಟ್ ಕೊಟ್ಟಾಗ ಕಚ್ಚಿದ ಮೇಲೆಯೇ ತಿಳಿಯೋದು ಅದು ವ್ಯಂಗ್ಯ ಎಂದು. ಇಷ್ಟಕ್ಕೂ ಮಾತಾಡದೇ ಬರೀ ನೋಟ ಇಲ್ಲವೇ ನಗೆಯಲ್ಲೇ ವ್ಯಂಗ್ಯ ತೋರಬಲ್ಲರು ಇವರು. 
 

46

ಕುಂಭ ರಾಶಿ(Aquarius)
ಕುಂಭ ರಾಶಿಯವರು ಎಲ್ಲರನ್ನೂ ತಮಾಷೆಯಿಂದ ಬಹಳ ನಗಿಸಿ ಕಣ್ಣಲ್ಲಿ ನೀರು ತರಬಲ್ಲರು. ಅಂತೆಯೇ ಅವರ ವ್ಯಂಗ್ಯದ ಮೊನಚೂ ಜೋರಾಗಿರುತ್ತದೆ. ಮೊದಲೇ ಔಟ್ ಆಫ್ ದ ಬಾಕ್ಸ್ ಥಿಂಕಿಂಗ್‌ನಲ್ಲಿ ಎತ್ತಿದ ಕೈ. ವ್ಯಂಗ್ಯಕ್ಕೆ ಇವರ ಈ ಪ್ರತಿಭೆ ಬೆರೆತರೆ ಹೊಸ ತರವಾಗಿ ಚುಚ್ಚಬಲ್ಲರು. 
 

56

ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರು ವ್ಯಂಗ್ಯಾತ್ಮಕ ಪ್ರತಿಭೆ. ವೃಶ್ಚಿಕ ರಾಶಿಗೆ ಹಾಸ್ಯ ಪ್ರಜ್ಞೆ ಕೊಂಚ ದೂರದ ಮಾತೇ. ಆದರೆ, ವ್ಯಂಗ್ಯದಲ್ಲಿ ಯಾರನ್ನೂ ಮೀರಿಸಿಯಾರು. ಈ ನಿರ್ದಿಷ್ಟ ರಾಶಿಚಕ್ರ ಚಿಹ್ನೆಯು ಕೀಟಲೆ ಮಾಡುವ ಪ್ರಲೋಭನೆಯನ್ನು ವಿರೋಧಿಸುವುದಿಲ್ಲ. ಕೆಲವೊಮ್ಮೆ ಇವರ ವ್ಯಂಗ್ಯದ ಹೊಡೆತ ತಿಂದವರಿಗೆ ಆ ನೋವು ಬಹು ಕಾಲ ಚುರುಚುರು ಅನ್ನುತ್ತಲೇ ಇರುತ್ತದೆ. ಎಲ್ಲಿ, ಯಾವಾಗ, ಯಾರನ್ನು ಹೇಗೆ ಝಾಡಿಸಬೇಕೆಂಬುದು ಇವರಿಗೆ ಗೊತ್ತು. 

66

ಮಕರ ರಾಶಿ(Capricorn)
ಮಕರ ರಾಶಿಯವರ ವ್ಯಂಗ್ಯವನ್ನು ನೀವು ಬೇರೆಯವರಲ್ಲಿ ಕಾಣಲಾರಿರಿ! ಅತ್ಯಂತ ತಾಳ್ಮೆಯಿಲ್ಲದವರಲ್ಲಿ ಒಬ್ಬರಾದ ಮಕರ ರಾಶಿಯವರು ಕೋಪಗೊಂಡಾಗ ಅಥವಾ ಯಾರೊಂದಿಗಾದರೂ ಒಪ್ಪದಿದ್ದಾಗ ಮಕರದವರ ವ್ಯಂಗ್ಯವು ಸಾಮಾನ್ಯವಾಗಿ ಹೊರ ಹೊಮ್ಮುತ್ತದೆ. ಮಕರವು ವಿಷಯಗಳಿಗೆ ವ್ಯಂಗ್ಯದ ಸ್ಪರ್ಶವನ್ನು ಸೇರಿಸಿ ಪರಿಣಾಮಕಾರಿ ಸಂವಹನ ನಡೆಸುತ್ತಾರೆ. 
 

Read more Photos on
click me!

Recommended Stories