ಸಾಲದ ಹೊರೆ ಇಳಿಸಲು ಬೆಲ್ಲವನ್ನು ಹೀಗೆ ಉಪಯೋಗಿಸಿ ನೋಡಿ

Published : Aug 05, 2022, 04:12 PM IST

ಬೆಲ್ಲವನ್ನು ಸಿಹಿ ತಿಂಡಿ ತಯಾರಿಸೋದರಲ್ಲಿ ಬಳಸಲಾಗುತ್ತೆ. ಇದು ಪ್ರತಿ ಭಕ್ಷ್ಯದಲ್ಲಿಯೂ ವಿಭಿನ್ನ ರುಚಿಯನ್ನು ನೀಡುತ್ತೆ. ಹಾಗೆ ವ್ಯಕ್ತಿಯ ಜೀವನವನ್ನು ಮಾಧುರ್ಯದಿಂದ ತುಂಬುತ್ತೆ ಅನ್ನೋದು ನಿಮಗೆ ಗೊತ್ತಿದೆ ಅಲ್ವಾ?. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಲ್ಲವನ್ನು ವಿವಿಧ ರೀತಿಯಲ್ಲಿ ಬಳಸುವ ಮೂಲಕ ವ್ಯಕ್ತಿಯು ಹಣದ ಕೊರತೆಯನ್ನು ನಿವಾರಿಸಬಹುದು. ಇದರೊಂದಿಗೆ, ಉದ್ಯೋಗ, ವ್ಯವಹಾರದಲ್ಲಿನ ಪ್ರಗತಿಯೊಂದಿಗೆ ನೀವು ಗೌರವವನ್ನು ಪಡೆಯಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಲ್ಲದಿಂದ ಯಾವ ಪರಿಹಾರ ಕಂಡುಕೊಳ್ಳುವುದು ಪ್ರಯೋಜನಕಾರಿ ಎಂದು ಇಲ್ಲಿ ತಿಳಿಯೋಣ.

PREV
16
ಸಾಲದ ಹೊರೆ ಇಳಿಸಲು ಬೆಲ್ಲವನ್ನು ಹೀಗೆ ಉಪಯೋಗಿಸಿ ನೋಡಿ
ಸೂರ್ಯನನ್ನು ಬಲಪಡಿಸಲು

ಜಾತಕದಲ್ಲಿ ಸೂರ್ಯನ ಸ್ಥಾನವು ದುರ್ಬಲವಾಗಿದ್ದರೆ, ಪ್ರತಿದಿನ ನೀರಿನೊಂದಿಗೆ ಸ್ವಲ್ಪ ಬೆಲ್ಲ(Jaggery) ತಿನ್ನುವ ಮೂಲಕ ನಿಮ್ಮ ದಿನವನ್ನು  ಪ್ರಾರಂಭಿಸಿ. ಇದರೊಂದಿಗೆ, ಭಾನುವಾರದಿಂದ ಮುಂದಿನ 8 ದಿನಗಳವರೆಗೆ 800 ಗ್ರಾಂ ಗೋಧಿ ಮತ್ತು 800 ಗ್ರಾಂ ಬೆಲ್ಲವನ್ನು ದೇವಾಲಯಕ್ಕೆ ಅರ್ಪಿಸಿ. ಇದರಿಂದ ಒಳ್ಳೆದಾಗುವುದು. 
 

26
ಹಣದ(Money) ಕೊರತೆಯನ್ನು ಹೋಗಲಾಡಿಸಲು

ಆರ್ಥಿಕ ಪರಿಸ್ಥಿತಿ ದುರ್ಬಲಗೊಳ್ಳುತ್ತಲೇ ಇದ್ದರೆ, ಒಂದು ಸಣ್ಣ ತುಂಡು ಬೆಲ್ಲ ಹಣದ ಕೊರತೆಯನ್ನು ತೊಡೆದು ಹಾಕಬಹುದು. ಇದಕ್ಕಾಗಿ, ಒಂದು ಸಣ್ಣ ತುಂಡು ಬೆಲ್ಲವನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ನಾಣ್ಯದೊಂದಿಗೆ ಕಟ್ಟಿ. ಇದರ ನಂತರ, ಅದನ್ನು ತಾಯಿ ಲಕ್ಷ್ಮಿ ಚಿತ್ರದ ಮುಂದೆ ಇರಿಸಿ. ಪ್ರತಿದಿನವೂ ಸರಿಯಾಗಿ ಪೂಜೆ ಮಾಡಿ. ಐದನೆಯ ದಿನ, ದುರ್ಗಾ ಮಾತೆಯನ್ನು ಪೂಜಿಸಿದ ನಂತರ, ಈ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಕಪಾಟಿನಲ್ಲಿ, ಸುರಕ್ಷಿತವಾಗಿ ಅಥವಾ ನೀವು ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ.

36
ಸಾಲದಿಂದ ಮುಕ್ತಿಗಾಗಿ

ನೀವು ನಿರಂತರವಾಗಿ ಸಾಲದ ಹೊರೆಯಲ್ಲಿದ್ದರೆ, ಹಳದಿ ಬಟ್ಟೆಯಲ್ಲಿ 7 ಉಂಡೆ ಅರಿಶಿನ (Turmeric) ಮತ್ತು ಸ್ವಲ್ಪ ಬೆಲ್ಲ ಕಟ್ಟಿ. ನಂತರ ಅದನ್ನು ನೀವು ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. 21 ದಿನಗಳ ನಿರ್ವಹಣೆ ನಂತರ, ಈ ಹಳದಿ ಬಟ್ಟೆಯಲ್ಲಿ ಕಟ್ಟಿದ ಎಲ್ಲಾ ಸಾಮಾನುಗಳನ್ನು ಹರಿಯುವ ನೀರಿಗೆ ಹಾಕಬೇಕು. ಹಾಗೆ ಮಾಡೋದರಿಂದ, ನೀವು ಸಾಲದಿಂದ ಮುಕ್ತಿ ಹೊಂದುತ್ತೀರಿ.

46
ಸಂಪತ್ತಿನ ಹೆಚ್ಚಳಕ್ಕಾಗಿ

ಲಕ್ಷ್ಮಿ ಮಾತೆಯ ಕೃಪೆಯಿಂದ ನೀವು ಸಂಪತ್ತು, ಧಾನ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಬಯಸಿದರೆ, ಗುರುವಾರ, ಹಸುವಿಗೆ(Cow) ಕಡಲೆ ಬೇಳೆಯೊಂದಿಗೆ  ಸ್ವಲ್ಪ ಬೆಲ್ಲವನ್ನು ನೀಡಿ. ಇದರಿಂದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ, ಅಲ್ಲದೇ ಹಣದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ತಿಳಿದು ಬಂದಿದೆ.
 

56
ಉದ್ಯೋಗದಲ್ಲಿ ಬಡ್ತಿ(Promotion) ಪಡೆಯಲು

ನೀವು ಹೊಸ ಉದ್ಯೋಗ ಹುಡುಕುತ್ತಿದ್ದು ಪದೇ ಪದೇ ವಿಫಲರಾಗುತ್ತಿದ್ದರೆ ಅಥವಾ ಪ್ರಸ್ತುತ ಉದ್ಯೋಗದಲ್ಲಿ ಬಡ್ತಿ ಬಯಸಿದರೆ, ಹಸುವಿಗೆ ಪ್ರತಿದಿನ ಅನ್ನದೊಂದಿಗೆ ಸ್ವಲ್ಪ ಬೆಲ್ಲವನ್ನು ಸೇರಿಸುವ ಮೂಲಕ ತಿನ್ನಿಸಿ. ಇದನ್ನು ಪ್ರತಿದಿನ ಮಾಡೋದರಿಂದ, ನೀವು ಕೆಲವೇ ದಿನಗಳಲ್ಲಿ ಒಳ್ಳೆಯ ಸುದ್ದಿ ಪಡೆಯುತ್ತೀರಿ.

66
ಮದುವೆಯಲ್ಲಿ(Marriage) ಅಡೆತಡೆ ಉಂಟಾದಾಗ

ಇನ್ನೂ ಮದುವೆಯ ಯೋಗ ಬರದಿದ್ದರೆ, ಬೆಲ್ಲವನ್ನು ಬಳಸಬಹುದು. ಇದಕ್ಕಾಗಿ, ಪ್ರತಿ ಗುರುವಾರ, ಗೋಧಿ ಹಿಟ್ಟಿಗೆ ಸ್ವಲ್ಪ ಬೆಲ್ಲ, ತುಪ್ಪ ಮತ್ತು ಅರಿಶಿನವನ್ನು ಸೇರಿಸಿ ಹಸುವಿಗೆ ಆಹಾರ ನೀಡಿ. ಸುಮಾರು 7 ಗುರುವಾರಗಳಂದು ಇದನ್ನು ಮಾಡುವ ಮೂಲಕ, ಆ ವ್ಯಕ್ತಿಯು ಶೀಘ್ರದಲ್ಲೇ ಮದುವೆಯಾಗುತ್ತಾನೆ.

click me!

Recommended Stories