ಲಕ್ಷ್ಮೀ ಮಂತ್ರ ಪಠಿಸಿ
ಪ್ರತಿನಿತ್ಯ 108 ಬಾರಿ ಲಕ್ಷ್ಮಿ ಮಂತ್ರವನ್ನು ಜಪಿಸುವವರು ಸಂಪತ್ತಿನ ದೇವಿಯನ್ನು ಮೆಚ್ಚಿಸುವುದರಲ್ಲಿ ಅನುಮಾನವಿಲ್ಲ, ಮಂತ್ರ ಹೀಗಿದೆ- || ಓಂ ಮಹಾಲಕ್ಷ್ಮ್ಯಯೇ ವಿದ್ಮಹೇ, ವಿಷ್ಣುಪ್ರಿಯಯೇ ಧೀಮಹಿ, ತನ್ನೋ ಲಕ್ಷ್ಮತ್ ಪ್ರಚೋದಯಾತ್||
ನಿಯಮಿತವಾಗಿ ಮನೆಯನ್ನು ಸ್ವಚ್ಛಗೊಳಿಸಿ
ಮನೆಯಲ್ಲಿ ಸ್ವಚ್ಛತೆ ಇದ್ದರೆ ಆ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಅದೇ ಸಮಯದಲ್ಲಿ ಮನೆಯಲ್ಲಿ ಸಂಗ್ರಹವಾದ ಕೊಳೆ ಮತ್ತು ಕಸ ತುಂಬಿದ್ದರೆ ಲಕ್ಷ್ಮಿ ಅಂಥ ಸ್ಥಳದಲ್ಲಿ ಪಾದವಿಡುವುದಿಲ್ಲ. ಮನೆ ಶುಚಿಯಾಗಿದ್ದಾಗ ಮಾತ್ರ ಮನೆಗೆ ಲಕ್ಷ್ಮಿ ದೇವಿಯ ಆಗಮನದ ಬಾಗಿಲು ತೆರೆಯುತ್ತದೆ. ಅದಕ್ಕಾಗಿಯೇ ನೀವು ನಿಯಮಿತವಾಗಿ ಅಂದರೆ ಪ್ರತಿ ದಿನ ಮನೆಯನ್ನು ಸ್ವಚ್ಛಗೊಳಿಸಬೇಕು. ಹಾಗಂಥ ಸಂಜೆ ಹೊತ್ತಿನಲ್ಲಿ ಮನೆಯನ್ನು ಗುಡಿಸಬಾರದು. ಯಾವಾಗಲೂ ಹಗಲಿನಲ್ಲೇ ಮನೆಯನ್ನು ಸ್ವಚ್ಛಗೊಳಿಸಬೇಕು.
ಮುಖ್ಯ ಬಾಗಿಲಿಗೆ ಅರಿಶಿನದಿಂದ ಸ್ವಸ್ತಿಕವನ್ನು ಮಾಡಿ
ನೀವು ಮನೆಯ ಮುಖ್ಯ ದ್ವಾರದಲ್ಲಿ ಪ್ರತಿದಿನ ಅರಿಶಿನದಿಂದ ಸ್ವಸ್ತಿಕವನ್ನು ಮಾಡಿದರೆ, ಅದು ನಿಮ್ಮ ಮನೆಯಲ್ಲಿ ಸಂಪತ್ತಿನ ಮಳೆಯ ಹಾದಿಯನ್ನು ತೆರೆಯಲು ಸಹಾಯ ಮಾಡುತ್ತದೆ. ಲಕ್ಷ್ಮಿ ದೇವಿಯು ಮನೆಯ ಮುಖ್ಯ ದ್ವಾರದಿಂದ ಮಾತ್ರ ಪ್ರವೇಶಿಸುತ್ತಾಳೆ ಮತ್ತು ನಿಯಮಿತವಾಗಿ ಸ್ವಸ್ತಿಕವನ್ನು ಮಾಡಿದರೆ, ಅದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಇದರೊಂದಿಗೆ ನೀವು ಬಾಗಿಲ ಬುಡದಲ್ಲಿ ದೀಪವನ್ನು ಬೆಳಗಿಸಿದರೆ ಅದು ನಿಮಗೆ ಇನ್ನೂ ಪ್ರಯೋಜನಕಾರಿಯಾಗಿದೆ.
ಕಮಲ
ಕಮಲದ ಮೇಲೆ ತಾಯಿ ಲಕ್ಷ್ಮೀಗೆ ವಿಶೇಷ ಪ್ರೀತಿ. ಆಕೆ ಕಮಲದ ಮೇಲೆಯೇ ಕುಳಿತಿರುತ್ತಾಳೆ. ಹೀಗಾಗಿ ಆಕೆಗೆ ಕಮಲದ ಹೂಗಳನ್ನು ಅರ್ಪಿಸಿ. ಕಮಲದ ಬೀಜಗಳ ಮಾಲಾವನ್ನು ಜಪಮಾಲೆಗೆ ಬಳಸುವುದು ಸಹ ದೇವಿಯನ್ನು ಆಕರ್ಷಿಸಲು ಸಹಾಯಕವಾಗಿದೆ.
ತುಳಸಿಗೆ ಪ್ರಾರ್ಥನೆ
ತುಳಸಿ ಗಿಡವನ್ನು ನೆಟ್ಟ ಸ್ಥಳದಲ್ಲಿ ಎಲ್ಲ ದೇವರು ನೆಲೆಸಿರುತ್ತಾರೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದ್ದರಿಂದ ತುಳಸಿ ಗಿಡದ ಪಕ್ಕದಲ್ಲಿ ಯಾವಾಗಲೂ ದೀಪವನ್ನು ಹಚ್ಚಿ ಮತ್ತು ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುವಂತೆ ನೋಡಿಕೊಳ್ಳಿ.
ಹೆಜ್ಜೆ ಗುರುತುಗಳು
ಲಕ್ಷ್ಮಿಯ ಹೆಜ್ಜೆಗುರುತುಗಳನ್ನು ಹಸಿ ಅಕ್ಕಿ ಹಿಟ್ಟಿನಿಂದ ಬಿಡಿಸಿ ಮತ್ತು ಅವಳನ್ನು ನಿಮ್ಮ ಮನೆಗೆ ಸ್ವಾಗತಿಸಿ. ಲಕ್ಷ್ಮಿ ದೇವಿಯನ್ನು ಆಹ್ವಾನಿಸುವುದು ವಿಷ್ಣುವಿನ ಪ್ರವೇಶವನ್ನು ಕೂಡಾ ಖಚಿತಪಡಿಸುತ್ತದೆ ಎಂದು ಹೇಳಲಾಗುತ್ತದೆ. ಏಕೆಂದರೆ ಅವರಿಬ್ಬರು ಬೇರ್ಪಡಿಸಲಾಗದವರು. ಅವರ ಸಾಮೂಹಿಕ ಆಶೀರ್ವಾದವು ಎಲ್ಲ ಪಾಪಗಳನ್ನು ತೊಳೆಯುತ್ತದೆ ಮತ್ತು ಸಮೃದ್ಧಿಯು ಮೇಲುಗೈ ಸಾಧಿಸುತ್ತದೆ.