ಚಾಣಕ್ಯ ನೀತಿ : ದೈಹಿಕ ಸಂಬಂಧದದ ನಂತರ ಸ್ನಾನ ಮಾಡಬೇಕಂತೆ!

Published : Jul 23, 2022, 06:33 PM IST

ಈ ನಾಲ್ಕು ಕೆಲಸಗಳನ್ನು ಮಾಡಿದ ತಕ್ಷಣ ಸ್ನಾನ ಮಾಡಬೇಕು ಎಂದು ಆಚಾರ್ಯ ಚಾಣಕ್ಯನು ಒಂದು ಪದ್ಯದ ಮೂಲಕ ಹೇಳುತ್ತಾನೆ. ಹಾಗಾದ್ರೆ ಯಾವ ಕೆಲಸ ಮಾಡಿದ ತಕ್ಷಣ ಸ್ನಾನ ಮಾಡಬೇಕು ಅನ್ನೋ ಪ್ರಶ್ನೆ ನಿಮ್ಮ ತಲೇಲಿ ಮೂಡುತ್ತೆ ಅಲ್ವಾ? ಇಲ್ಲಿ ಆ ಕುರಿತು ನೀಡಲಾಗಿದೆ. ಒಂದು ವೇಳೆ ನೀವು ಇದನ್ನು ಮಾಡಿದ ಮೇಲೆ ಸ್ನಾನ ಮಾಡಿಲ್ಲ ಅಂದ್ರೆ, ಅದರಿಂದ ಭಾರಿ ನಕಾರಾತ್ಮಕ ಪರಿಣಾಮ ಬೀರೋದು ಖಚಿತ. ಹಾಗಿದ್ರೆ ಬನ್ನಿ ಆ ಕೆಲಸದ ಬಗ್ಗೆ ತಿಳಿದುಕೊಳ್ಳೋಣ.  

PREV
19
ಚಾಣಕ್ಯ ನೀತಿ : ದೈಹಿಕ ಸಂಬಂಧದದ ನಂತರ ಸ್ನಾನ ಮಾಡಬೇಕಂತೆ!

ಆಚಾರ್ಯ ಚಾಣಕ್ಯನು ಅರ್ಥಶಾಸ್ತ್ರ (economics), ರಾಜಕೀಯ ಮತ್ತು ರಾಜತಾಂತ್ರಿಕತೆಯ ಜ್ಞಾನಿಯಾಗಿದ್ದನು. ಅವರು ಸಮಾಜವನ್ನು ಸುಧಾರಿಸಲು ಮತ್ತು ವ್ಯಕ್ತಿಯು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಲು ಅನೇಕ ನಿಯಮಗಳನ್ನು ರೂಪಿಸಿದ್ದಾನೆ, ಇದು ಇಂದಿಗೂ ಪ್ರಸ್ತುತ. 
 

29

ಒಬ್ಬ ವ್ಯಕ್ತಿಯು ಚಾಣಕ್ಯ ನೀತಿಗಳ ಸಾರವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಆಗ ವ್ಯಕ್ತಿಯು ಎಂದಿಗೂ ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ನಾಲ್ಕು ಕಾರ್ಯಗಳ ಬಗ್ಗೆ ಉಲ್ಲೇಖಿಸಿದ್ದಾನೆ, ಅವುಗಳನ್ನು ಮಾಡಿದ ನಂತರ ಸ್ನಾನ ಮಾಡಬೇಕು. ಆ ಕೆಲಸಗಳ ಬಗ್ಗೆ ತಿಳಿಯೋಣ. 
 

39

 ಈ ನಾಲ್ಕು ಕೆಲಸಗಳನ್ನು ಮಾಡಿದ ನಂತರ, ಸ್ನಾನ ಮಾಡಿ ಎಂದು ಆಚಾರ್ಯ ಚಾಣಕ್ಯ ತಿಳಿಸಿದ್ದಾರೆ. ಆ ಕುರಿತಂತೆ ಸಂಸ್ಕೃತ ದ್ವಿಪದಿ ನೀಡಲಾಗಿದೆ. ಅವುಗಳ ಬಗ್ಗೆ ತಿಳಿಯೋಣ. ತೈಲಾಭ್ಯಂಗೆ ಚಿತಾಧುಮೆ ಮೈಥುನೆ ಕ್ಷೌರಕರ್ಮಿಣೇ.
ತವದ್ ಭವತಿ ಚಂಡಾಲೋ ಯವತ್ ಸ್ನಾನ ನ ಚಚರೇತ್.

49

ಯಾವ ಯಾವ ಸಮಯದಲ್ಲಿ ಪುರುಷ ಅಥವಾ ಮಹಿಳೆ ಸ್ನಾನ ಮಾಡಬೇಕು ಎಂದು ಶ್ಲೋಕದ ಅರ್ಥ. ಅವನು ದೇಹಕ್ಕೆ ಎಣ್ಣೆಯನ್ನು ಹಚ್ಚಿದ ನಂತರ, ಅವನು ತನ್ನ ಕೂದಲನ್ನು ಕತ್ತರಿಸಿದ ನಂತರ ಅಥವಾ ದೈಹಿಕ ಸಂಬಂಧವನ್ನು ಹೊಂದಿದ್ದ ನಂತರ, ಶವಸಂಸ್ಕಾರದಿಂದ ಹಿಂತಿರುಗಿದ ನಂತರ ಸ್ನಾನ ಮಾಡಬೇಕೆಂದು ಚಾಣಕ್ಯ ಹೇಳುತ್ತಾರೆ. ಈ ಕೆಲಸಗಳನ್ನು ಮಾಡಿದ ನಂತರ ವ್ಯಕ್ತಿಯು ಸ್ನಾನ ಮಾಡದಿದ್ದರೆ, ಅದರಿಂದ ನೆಗೆಟಿವ್ ಎನರ್ಜಿ ದೂರವಾಗುತ್ತದೆ.

59
ಎಣ್ಣೆಯಿಂದ ಮಸಾಜ್ ಮಾಡಿದ ನಂತರ ಸ್ನಾನ ಮಾಡಿ

ಆಚಾರ್ಯ ಚಾಣಕ್ಯನು ಈ ಶ್ಲೋಕದ ಮೂಲಕ ಹೇಳೋದೇನೆಂದರೆ ಒಬ್ಬ ವ್ಯಕ್ತಿಯು ಇಡೀ ದೇಹಕ್ಕೆ ಎಣ್ಣೆಯನ್ನು ಹಚ್ಚಿದ ನಂತರ, ಸ್ನಾನ ಮಾಡಬೇಕು ಎಂದು ಹೇಳುತ್ತಾನೆ. ಏಕೆಂದರೆ ಎಣ್ಣೆಯಿಂದ ಮಸಾಜ್ (oil massage) ಮಾಡಿದ ನಂತರ, ದೇಹದಿಂದ ಕೊಳಕು ಹೆಚ್ಚು ಹೊರಬರುತ್ತದೆ. ಹಾಗಾಗಿ, ನೀವು ಸ್ನಾನ ಮಾಡದೆ ಬಟ್ಟೆಗಳನ್ನು ಧರಿಸಿದರೆ, ಇಡೀ ಕೊಳಕು ಮತ್ತೆ ದೇಹದ ಒಳಗೆ ಹೋಗುತ್ತದೆ.

69
ಶವ ಸಂಸ್ಕಾರದಿಂದ ಬಂದ ನಂತರ

ಆಚಾರ್ಯ ಚಾಣಕ್ಯನ ಪ್ರಕಾರ, ಯಾರದ್ದೋ ಶವಸಂಸ್ಕಾರದಿಂದ ಮನೆಗೆ ಮರಳಿದ ನಂತರ ಸ್ನಾನ ಮಾಡಬೇಕು. ಇದಕ್ಕೆ ಎರಡು ದೊಡ್ಡ ಕಾರಣಗಳಿವೆ. ಮೊದಲನೆಯದು, ಸ್ನಾನ ಮಾಡುವುದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು (negative energy) ದೇಹದಿಂದ ದೂರ ಹೋಗುತ್ತದೆ. ಇದರಿಂದ ನೆಗೆಟಿವಿಟಿ ಹತ್ತಿರ ಸುಳಿಯೋದಿಲ್ಲ. 

79

ಇದಕ್ಕೆ ಇನ್ನೊಂದು ಕಾರಣೆ ಏನೆಂದರೆ, ಎರಡನೇ ಕಾರಣವೆಂದರೆ ವಿವಿಧ ರೀತಿಯ ಶವಗಳನ್ನು ಸ್ಮಶಾನದಲ್ಲಿ ದಹನ ಮಾಡಲಾಗುತ್ತದೆ, ಅವುಗಳಲ್ಲಿ ಅನೇಕವು ಗಂಭೀರ ಕಾಯಿಲೆಗಳನ್ನು ಸಹ ಹೊಂದಿರುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ಅವನ ದೇಹದಿಂದ ಹೊರಬರುವ ಮನೆಯನ್ನು ತಲುಪಬಹುದು. ಆದ್ದರಿಂದ, ನೀವು ಶವಸಂಸ್ಕಾರದ ಬಳಿಕ ಸ್ನಾನ ಮಾಡಬೇಕು..ಬ್ಯಾಕ್ಟೀರಿಯಾಗಳು ಪರಿಸರದಾದ್ಯಂತ ಹರಡುತ್ತವೆ, ಇದು ನಿಮ್ಮ ದೇಹಕ್ಕೆ ಅಂಟಿಕೊಳ್ಳುವ ಮೂಲಕ ಸಮಸ್ಯೆ ಕಾಡಬಹುದು. 

89
ಶಾರೀರಿಕ ಸಂಬಂಧ ಹೊಂದಿದ ನಂತರ

ಆಚಾರ್ಯ ಚಾಣಕ್ಯನ ಪ್ರಕಾರ, ದೈಹಿಕ ಸಂಬಂಧವನ್ನು ಹೊಂದಿದ್ದರೂ, ಪುರುಷ ಮತ್ತು ಮಹಿಳೆ ಸ್ನಾನ ಮಾಡಬೇಕು. ಏಕೆಂದರೆ ಹಾಗೆ ಮಾಡುವುದರಿಂದ, ಅವನು ಅಶುದ್ಧನಾಗುತ್ತಾನೆ. ಆದುದರಿಂದ ಯಾವುದೇ ಸಮಯದಲ್ಲಿ ಮಾಡಿದ್ರೂ ಸ್ನಾನ ಮಾಡೋದನ್ನು ಮರೆಯಬೇಡಿ.
 

99
ಕ್ಷೌರದ ನಂತರ ಸ್ನಾನ ಮಾಡಿ.

ಆಚಾರ್ಯ ಚಾಣಕ್ಯನ ಪ್ರಕಾರ, ಕೂದಲನ್ನು ಕತ್ತರಿಸಿದ ನಂತರವೂ ಸ್ನಾನ ಮಾಡಬೇಕು. ಏಕೆಂದರೆ ಕೂದಲನ್ನು ಕತ್ತರಿಸುವಾಗ, ಸಣ್ಣ ಕಣಗಳು ದೇಹವನ್ನು ಪ್ರವೇಶಿಸುತ್ತವೆ, ಇದು ವ್ಯಕ್ತಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಆದ್ದರಿಂದ ಕೂದಲು ಕತ್ತರಿಸಿದ ನಂತರ, ನೀವು ಸ್ನಾನ ಮಾಡಬೇಕು.
 

Read more Photos on
click me!

Recommended Stories