ಶ್ರಾವಣ ಮಾಸದಲ್ಲಿ ಬೀಳುವ ಕನಸಿನಲ್ಲಿ ಇವೆಲ್ಲ ಕಂಡರೆ ಶುಭವೋ ಶುಭ

First Published Jul 20, 2022, 4:53 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದ ಕನಸಿನಲ್ಲಿ ಶಿವನಿಗೆ ಸಂಬಂಧಿಸಿದ ಕೆಲವು ವಸ್ತುಗಳು ಕಂಡುಬಂದರೆ, ಮಹಾದೇವನ ಆಶೀರ್ವಾದವು ನಿಮ್ಮ ಮೇಲೆ ಬೀಳಲಿದೆ ಎಂದರ್ಥ.

ಶಿವಲಿಂಗ
ಶಿವಲಿಂಗವು ಶಿವನ ಪ್ರತಿನಿಧಿಯೇ ಆಗಿದೆ. ಅಂಥ ಪವಿತ್ರ ಶಿವಲಿಂಗ ಕನಸಿನಲ್ಲಿ ಕಂಡರೆ ಬದುಕಿನ ಎಲ್ಲ ಪ್ರಮುಖ ಸಮಸ್ಯೆಗಳಿಂದ ಮುಕ್ತರಾಗಲಿದ್ದೀರಿ ಎಂಬ ಸೂಚನೆಯಾಗಿದೆ. ಹಾಗೆ ಕನಸಿನಲ್ಲಿ ಶಿವಲಿಂಗ ಕಂಡ ಬೆಳಗ್ಗೆ ಎದ್ದು ಶಿವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಿಸಿ. 

ಶಿವ ದೇವಾಲಯ
ಶಿವನ ದೇವಾಲಯವು ಕನಸಿನಲ್ಲಿ ಕಂಡರೆ ಬಹಳ ಸಮಯದಿಂದ ನಿಮ್ಮನ್ನು ಕಾಡಿಸುತ್ತಿರುವ ಆರೋಗ್ಯ ಸಮಸ್ಯೆಯಿಂದ ಮುಕ್ತರಾಗುತ್ತೀರಿ ಎಂದರ್ಥ. 
 

Latest Videos


ತ್ರಿಶೂಲ(Trident)
ತ್ರಿಶೂಲವನ್ನು ರಜ, ತಮ ಮತ್ತು ಸತ್ ಗುಣಗಳ ಸಂಕೇತವೆಂದು ಪರಿಗಣಿಸಲಾಗಿದೆ. ಇವೆಲ್ಲವೂ ಸೇರಿ ಶಿವನ ತ್ರಿಶೂಲ ರೂಪುಗೊಂಡಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ಶಿವನ ತ್ರಿಶೂಲದ ಮೂರು ಅಂಚುಗಳು ಕಾಮ, ಕ್ರೋಧ ಮತ್ತು ಲೋಭಗಳಿಗೆ ಕಾರಣವೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ತ್ರಿಶೂಲವನ್ನು ನೋಡುವುದು, ಅದರಲ್ಲೂ ಶ್ರಾವಣದಲ್ಲಿ ಕಂಡರೆ, ನಿಮ್ಮ ಎಲ್ಲ ತೊಂದರೆಗಳು ನಾಶವಾಗುತ್ತವೆ ಎಂಬುದರ ಸಂಕೇತವಾಗಿದೆ.

ಡಮರು(Damru)
ಶಿವನು ಯಾವಾಗಲೂ ತನ್ನ ಕೈಯಲ್ಲಿ ಡಮರುವನ್ನು ಹಿಡಿದಿರುತ್ತಾನೆ. ಡಮರು ಸ್ಥಿರತೆಯ ಸಂಕೇತವಾಗಿದೆ. ಕನಸಿನಲ್ಲಿ ಶಿವನ ಡಮರು ಕಂಡರೆ ಬದುಕಿನ ಸಂಕ್ಷೋಭೆ ಮುಗಿಯಲಿದೆ ಎಂದರ್ಥ. ಕನಸಿನಲ್ಲಿ ಡಮರುವನ್ನು ನೋಡುವುದು ಜೀವನದಲ್ಲಿ ಸ್ಥಿರತೆಯ ಸಂಕೇತವಾಗಿದೆ.

ಹಾವು(snake)
ಶಿವನು ವಾಸುಕಿ ನಾಗನನ್ನು ಕೊರಳಲ್ಲಿ ಧರಿಸಿದ್ದಾನೆ. ಶ್ರಾವಣ ಮಾಸದಲ್ಲಿ ನಾಗದೇವತೆ ಕನಸಿನಲ್ಲಿ ಬರುವುದು ಸಂಪತ್ತನ್ನು ಹೆಚ್ಚಿಸುವ ಸಂಕೇತವೆಂದು ಪರಿಗಣಿಸಲಾಗಿದೆ.

ನಂದಿ(Bull)
ಧಾರ್ಮಿಕ ನಂಬಿಕೆಯ ಪ್ರಕಾರ, ನಂದಿಯನ್ನು ಶಿವನ ವಾಹನ ಎಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಕನಸಿನಲ್ಲಿ ಗೂಳಿ ಕಂಡರೆ, ಶಿವ ನಿಮಗೆ ದಯೆ ತೋರಲಿದ್ದಾನೆ ಎಂದು ಅರ್ಥ ಮಾಡಿಕೊಳ್ಳಿ. ಕನಸಿನಲ್ಲಿ ನಂದಿಯನ್ನು ನೋಡುವುದು ನೀವು ಪ್ರತಿ ಕಾರ್ಯದಲ್ಲಿ ಯಶಸ್ವಿಯಾಗುವ ಸಂಕೇತವಾಗಿದೆ.

click me!