ಹೋಮದ ಆಹುತಿ ವೇಳೆ ಸ್ವಾಹಾ ಎಂದು ಹೇಳೋದ್ಯಾಕೆ?

Published : Jul 19, 2022, 03:34 PM IST

ನಮ್ಮ ದೇಶದಲ್ಲಿ ಹೋಮ-ಹವನದ ಸಂಪ್ರದಾಯವು ಬಹಳ ಹಳೆಯ ಕಾಲದಿಂದಲೂ ಇದೆ. ಹಿಂದೂ ಧರ್ಮದಲ್ಲಿ, ಪ್ರತಿಯೊಂದು ಶುಭ ಸಂದರ್ಭದಲ್ಲಿ ಹವನದ ಆಚರಣೆ ಇದ್ದೇ ಇರುತ್ತೆ. ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ದೇವರನ್ನು ಸ್ಮರಿಸಬೇಕು ಎಂದು ನಂಬಲಾಗಿದೆ, ಆಗ ಮಾತ್ರ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಹವನದ ಸಮಯದಲ್ಲಿ, ಮಂತ್ರದ ನಂತರ ಸ್ವಾಹಾ ಎಂಬ ಪದ ಖಂಡಿತವಾಗಿಯೂ ಹೇಳಲಾಗುತ್ತೆ, ಇದರ ನಂತರವೇ, ಆಹುತಿ ನೀಡಲಾಗುತ್ತೆ. ಆದರೆ ಪ್ರತಿ ಆಹುತಿಯ ಮೊದಲು 'ಸ್ವಾಹಾ' ಎಂಬ ಪದ ಏಕೆ ಹೇಳಲಾಗುತ್ತೆ ಮತ್ತು ಅದನ್ನು ಹೇಳುವ ಅಗತ್ಯವೇನಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದರ ಹಿಂದಿನ ಕಥೆ ಏನು? ಇಲ್ಲಿ ತಿಳಿಯಿರಿ ಪ್ರತಿ ಅಹುತಿಯ ಮೊದಲು ಸ್ವಾಹಾ ಎಂಬ ಪದ ಏಕೆ ಹೇಳಲಾಗುತ್ತೆ ಎಂದು.

PREV
17
ಹೋಮದ ಆಹುತಿ ವೇಳೆ ಸ್ವಾಹಾ ಎಂದು ಹೇಳೋದ್ಯಾಕೆ?
ಸ್ವಾಹಾದ ಅರ್ಥವೇನು?

ಹೋಮವಿದ್ದಾಗಲೆಲ್ಲಾ, ಸ್ವಾಹಾ ಉಚ್ಚರಿಸುವಾಗ ಹವನದ ವಸ್ತುವನ್ನು ಹವನ ಕುಂಡದಲ್ಲಿ ಹಾಕಲಾಗುತ್ತೆ. ಸ್ವಾಹಾ ಎಂದರೆ ಸರಿಯಾದ ರೀತಿಯಲ್ಲಿ ತಿಳಿಸುವುದು ಎಂದರ್ಥ. ದೇವರು ಮಾನವನ ಹೋಮ ಸ್ವೀಕರಿಸುವವರೆಗೆ ಯಾವುದೇ ಯಜ್ಞವನ್ನು ಯಶಸ್ವಿ ಎಂದು ಪರಿಗಣಿಸಲಾಗೋದಿಲ್ಲ ಎಂದು ನಂಬಲಾಗಿದೆ. ಹಾಗಾಗಿ ಸ್ವಾಹಾ ಹೇಳುವ ಮೂಲಕ ಬೆಂಕಿಗೆ ಅರ್ಪಣೆ ಮಾಡಿದಾಗ ಮಾತ್ರ ದೇವತೆಗಳು ಸ್ವೀಕರಿಸುತ್ತಾರೆ.

27
ಹವನದ ಸಮಯದಲ್ಲಿ ಸ್ವಾಹಾವನ್ನು ಏಕೆ ಹೇಳಲಾಗುತ್ತೆ ?

ಹವನದ ಸಮಯದಲ್ಲಿ ಸ್ವಾಹಾ ಹೇಳುವ ಬಗ್ಗೆ ಅನೇಕ ರೀತಿಯ ಕಥೆಗಳನ್ನು ಪುರಾಣದಲ್ಲಿ ತಿಳಿಸಲಾಗಿದೆ, ಅವುಗಳಲ್ಲಿ ಕೆಲವು ಇಲ್ಲಿ ಹೇಳಲಾಗಿದೆ. ಅವು ಏನೆಂದು ತಿಳಿದುಕೊಳ್ಳೋಣ. 

37
ಅಗ್ನಿದೇವರ ಪತ್ನಿಯನ್ನು ನೆನಪಿಸಿಕೊಳ್ಳೋದು

ಮೊದಲನೆಯ ಕಥೆಯ ಪ್ರಕಾರ, ಸ್ವಾಹಾ ದಕ್ಷ ರಾಜನ ಮಗಳು, ಅವಳು ಅಗ್ನಿದೇವನನ್ನು ಮದುವೆಯಾದಳು. ಆದ್ದರಿಂದಲೇ ಬೆಂಕಿಗೆ ಏನನ್ನಾದರೂ ಸಮರ್ಪಿಸಿದಾಗಲೆಲ್ಲಾ, ಅವನ ಹೆಂಡತಿಯನ್ನು ಒಟ್ಟಿಗೆ ನೆನಪಿಸಿಕೊಳ್ಳಲಾಗುತ್ತೆ. ಆಗ ಮಾತ್ರ ಅಗ್ನಿದೇವ ಕೊಟ್ಟದ್ದನ್ನು ಒಪ್ಪಿಕೊಳ್ಳುತ್ತಾನೆ ಎಂಬ ನಂಬಿಕೆ.

47
ಅಗ್ನಿ ದೇವನ ಜೊತೆಗಿರುವ ಸ್ವಾಹಾ

ಎರಡನೆಯ ಕಥೆಯ ಪ್ರಕಾರ, ಒಮ್ಮೆ ದೇವತೆಗಳು ಕ್ಷಾಮ ಅನುಭವಿಸಿದರು. ಅವರಿಗೆ ಆಹಾರ ಮತ್ತು ಪಾನೀಯದ ಕೊರತೆಯಿತ್ತು. ಈ ಕಠಿಣ ಪರಿಸ್ಥಿತಿಯನ್ನು (Hard Situation) ತಪ್ಪಿಸಲು, ಬ್ರಹ್ಮದೇವನು ಭೂಮಿಯ ಮೇಲಿನ ಬ್ರಾಹ್ಮಣರಿಂದ ದೇವತೆಗಳಿಗೆ ಆಹಾರ ಪದಾರ್ಥಗಳನ್ನು ತಲುಪಿಸಲು ಒಂದು ಪರಿಹಾರವನ್ನು ಕಂಡುಹಿಡಿದನು. ಇದಕ್ಕಾಗಿ ಅವರು ಅಗ್ನಿದೇವನನ್ನು ಆಯ್ಕೆ ಮಾಡಿದರು.

57

ಆ ಸಮಯದಲ್ಲಿ, ಅಗ್ನಿದೇವನ ಸಾಮರ್ಥ್ಯವು ಸಾಕಾಗಲಿಲ್ಲ, ಅದಕ್ಕಾಗಿಯೇ ಸ್ವಾಹಾದ ಉಗಮವಾಯಿತು. ಸ್ವಾಹಾಗೆ ಅಗ್ನಿದೇವನ ಜೊತೆಗಿರಲು ಆಜ್ಞಾಪಿಸಲಾಯಿತು. ಇದರ ನಂತರ, ಅಗ್ನಿದೇವನಿಗೆ ಏನನ್ನಾದರೂ ಸಮರ್ಪಿಸಿದಾಗಲೆಲ್ಲಾ, ಸ್ವಾಹಾ ಅದನ್ನು ಸೇವಿಸಿ ದೇವತೆಗಳಿಗೆ ತಲುಪಿಸುತ್ತಿದ್ದನು. ಅಂದಿನಿಂದ, ಸ್ವಾಹಾ ಯಾವಾಗಲೂ ಅಗ್ನಿದೇವರೊಂದಿಗೆ ಇವತ್ತಿನವರೆಗೂ ಇದ್ದಾರೆ ಎಂದು ಸಹ ನಂಬಲಾಗಿದೆ.

67
ಸ್ವಾಹಾಗೆ ಸಮರ್ಪಿತವಾದ ಎಲ್ಲಾ ಸಾಮಗ್ರಿಗಳು

ಮೂರನೇ ಕಥೆಯ ಪ್ರಕಾರ, ಸ್ವಾಹಾ ಪ್ರಕೃತಿಯ ಕಲೆಯಾಗಿ ಜನಿಸಿದನು. ದೇವತೆಗಳು ಸ್ವೀಕರಿಸಿದ ಯಾವುದೇ ವಸ್ತುವು ಸ್ವಾಹಾಗೆ ಸಮರ್ಪಿಸದೆ ದೇವತೆಗಳನ್ನು ತಲುಪಲು ಸಾಧ್ಯವಿಲ್ಲ ಎಂದು ಭಗವಾನ್ ಕೃಷ್ಣನು ಸ್ವಾಹಾನನ್ನು ಆಶೀರ್ವದಿಸಿದ್ದನು. ಅದಕ್ಕಾಗಿಯೇ ಹವನದ ಸಮಯದಲ್ಲಿ ಸ್ವಾಹಾ ಎಂದು ತಪ್ಪದೇ ಹೇಳಲಾಗುತ್ತೆ.

77
ಯಜ್ಞ ಪೂರ್ಣವಾಗೋಲ್ಲ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವರು ಹವನವನ್ನು ಸ್ವೀಕರಿಸುವವರೆಗೆ ಯಾವುದೇ ಯಜ್ಞವು ಪೂರ್ಣಗೊಳ್ಳೋದಿಲ್ಲ. ಅಗ್ನಿಯಲ್ಲಿ ಆಹುತಿಯನ್ನು ಅರ್ಪಿಸುವಾಗ ಸ್ವಾಹಾ ಹೇಳಿದಾಗ ಮಾತ್ರ ದೇವತೆಗಳು ಹವನ ವಸ್ತುವನ್ನು ಸ್ವೀಕರಿಸುತ್ತಾರೆ ಎಂದು ನಂಬಲಾಗಿದೆ.

Read more Photos on
click me!

Recommended Stories