ಶನಿಚಾರಿ ಅಮಾವಾಸ್ಯೆಯಂದು ಇದನ್ನ ಮಾಡಿದ್ರೆ ಶನಿ ದೋಷವೇ ಬರಲ್ವಂತೆ ?

First Published Jan 20, 2023, 5:16 PM IST

ಶನಿವಾರ ಬರುವ ಅಮಾವಾಸ್ಯೆಯನ್ನು ಶನಿಚಾರಿ ಅಮಾವಾಸ್ಯೆ ಎಂದು ಕರೆಯಲಾಗುತ್ತೆ. ವರ್ಷದ ಮೊದಲ ಶನಿ ಅಮಾವಾಸ್ಯೆ ಈ ರಾಶಿಯವರಿಗೆ ವಿಶೇಷವಾಗಿದೆ. ಈ ಅಮವಾಸ್ಯೆಯ ವಿಶೇಷತೆ ಏನು? ಇದರ ಮಹತ್ವ ತಿಳಿಯಲು ಮುಂದೆ ಓದಿ.  

ಜ್ಯೋತಿಷ್ಯದ ಪ್ರಕಾರ, ಪ್ರತಿ ತಿಂಗಳು ಅಮಾವಾಸ್ಯೆ (Amavasya) ಮತ್ತು ಹುಣ್ಣಿಮೆ ಬರುತ್ತೆ. ಅಮಾವಾಸ್ಯೆ ತಿಥಿ ಪ್ರತಿ ತಿಂಗಳ ಹದಿನೈದನೇ ದಿನ. ಅಮಾವಾಸ್ಯೆ ತಿಥಿಯನ್ನು ಪೂರ್ವಜರಿಗೆ ಅರ್ಪಿಸಲಾಗಿದೆ ಎಂದು ಪರಿಗಣಿಸಲಾಗಿದೆ. ಮಾಘ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತೆ. ಈ ವರ್ಷ ಮೌನಿ ಅಮಾವಾಸ್ಯೆಯ ದಿನ ಶನಿವಾರವಾಗಿರೋದರಿಂದ, ಅದರ ಪ್ರಾಮುಖ್ಯತೆ ಅನೇಕ ಪಟ್ಟು ಹೆಚ್ಚುತ್ತಿದೆ. ಈ ವರ್ಷ ಮಾಘಿ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಅಥವಾ ಶನಿಚಾರಿ ಅಮಾವಾಸ್ಯೆ 2023 ರ ಜನವರಿ 21 ರ ಶನಿವಾರ ಬಂದಿದೆ.

ಅಮಾವಾಸ್ಯೆ ದಿನದಂದು ದಾನ-ಸ್ನಾನದ ವಿಶೇಷ ಮಹತ್ವ

ಜ್ಯೋತಿಷ್ಯದ ಪ್ರಕಾರ, ಶನಿವಾರ ಬರುವ ಅಮಾವಾಸ್ಯೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತೆ. ಈ ದಿನ ಸ್ನಾನ(Bath) ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. 

ಶನಿಚಾರಿ ಅಮಾವಾಸ್ಯೆಯ ದಿನದಂದು ಸರ್ವಾರ್ಥ ಸಿದ್ಧಿ ಯೋಗದ ರಚನೆಯಿಂದಾಗಿ, ಈ ದಿನದ ಪ್ರಾಮುಖ್ಯತೆ ಎರಡು ಪಟ್ಟು ಹೆಚ್ಚಾಗಿದೆ. ಈ ದಿನ ಶನಿ ಸಂಬಂಧಿತ ಕ್ರಮಗಳನ್ನು ಮಾಡೋದರಿಂದ, ಶನಿ(Shani) ದೇವರ ಅಶುಭ ಪರಿಣಾಮವು ಕಡಿಮೆಯಾಗುತ್ತೆ ಎಂದು ನಂಬಲಾಗಿದೆ.

ಈ ರಾಶಿಗಳ ಮೇಲೆ ಶನಿಯ ವಕ್ರ ದೃಷ್ಟಿ :

ಶನಿ ಪ್ರಸ್ತುತ ಕುಂಭ ರಾಶಿಯಲ್ಲಿದ್ದಾನೆ. ಕುಂಭ ರಾಶಿಯಲ್ಲಿ (Aquarius) ಶನಿ ಇರೋದರಿಂದ, ಶನಿಯ ಸಾಡೆ ಸಾತ್ ಮಕರ, ಕುಂಭ ಮತ್ತು ಮೀನ ರಾಶಿ ಮೇಲೆ ಪರಿಣಾಮ ಬೀರುತ್ತೆ. ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಮೇಲೆ ಶನಿಯು ಧನು ರಾಶಿಯ ಪ್ರಭಾವ ಬೀರುತ್ತಾನೆ. 

ಶನಿಯ ಕ್ರೋಧ ತಡೆಗಟ್ಟಲು ಶನಿ ಅಮಾವಾಸ್ಯೆ ವಿಶೇಷ ದಿನ. ಹಾಗಾಗಿ, ಈ ಐದು ರಾಶಿಯವರು(Zodiac sign) ಶನಿ ದೇವರಿಗೆ ಸಂಬಂಧಿಸಿದ ಕ್ರಮಗಳನ್ನು ಶನಿಚರಿ ಅಮಾವಾಸ್ಯೆಯ ದಿನದಂದು ಅನುಸರಿಸಬೇಕು..
 

ಗ್ರಹಗಳ ಸ್ಥಾನ-

ಮೇಷ ರಾಶಿಯಲ್ಲಿ ರಾಹು, ವೃಷಭ ರಾಶಿಯಲ್ಲಿ ಮಂಗಳ, ತುಲಾ ರಾಶಿಯಲ್ಲಿ ಕೇತು, ಧನು ರಾಶಿಯಲ್ಲಿ ಬುಧ ಮತ್ತು ಚಂದ್ರ, ಮಕರ ರಾಶಿಯಲ್ಲಿ ಶುಕ್ರ ಮತ್ತು ಸೂರ್ಯ(Sun), ಕುಂಭ ರಾಶಿಯಲ್ಲಿ ಶನಿ ಸಂಚರಿಸುತ್ತಿದ್ದಾನೆ. ಮೀನ ರಾಶಿಯಲ್ಲಿ ಗುರು ಕುಳಿತಿದ್ದಾನೆ. ಶನಿಯು ತನ್ನದೇ ಆದ ರಾಶಿಯಲ್ಲಿರೋದರಿಂದ ಕುಂಭ ರಾಶಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತೆ .
 

ಶನಿ ದೋಷವನ್ನು (Shani Dosha) ತೊಡೆದುಹಾಕಲು ಸರಳ ವಿಧಾನಗಳು ಹೀಗಿವೆ-
ಸೂರ್ಯಾಸ್ತದ ನಂತರ ಅರಳಿ ಮರದ ಬಳಿ ದೀಪವನ್ನು ಬೆಳಗಿಸಿ.
ಶನಿ ದೇವರಿಗೆ ಎಣ್ಣೆಯನ್ನು ಅರ್ಪಿಸಿ ಮತ್ತು ಆತನನ್ನು ಪೂಜಿಸಿ.

ಅರಳಿ ಮರಕ್ಕೆ ನೀರನ್ನು ಅರ್ಪಿಸಿ ಮತ್ತು ಅದನ್ನು ಪೂಜಿಸಿ, ನಂತರ ಏಳು ಪ್ರದಕ್ಷಿಣೆ ಮಾಡಿ.
ಪ್ರತಿ ಶನಿವಾರ(Saturday) ಬೆಳಿಗ್ಗೆ, ಸ್ನಾನ ಇತ್ಯಾದಿಗಳಾದ ನಂತರ, ಎಣ್ಣೆಯನ್ನು ದಾನ ಮಾಡಿ.
 

ಹನುಮಂತನಿಗೆ(Hanuman) ಕುಂಕುಮ ಮತ್ತು ಮಲ್ಲಿಗೆಯನ್ನು ಅರ್ಪಿಸಿ.
ಶನಿ ಚಾಲೀಸಾ ಪಠಿಸಿ.
ಹೀಗೆ ಮಾಡೋದರಿಂದ ಶನಿ ದೋಷ ಪರಿಹಾರವಾಗುತ್ತೆ ನೋಡಿ!  
 

click me!