ಕೆಲವರಿಗೆ ಸುಳ್ಳು(Lie) ಹೇಳೋದು ಅಂದ್ರೆ ನೀರು ಕುಡಿದಷ್ಟು ಸಲೀಸು. ಅದರಲ್ಲೂ ಕೆಲ ರಾಶಿಯವರು ಸುಳ್ಳು ಹೇಳೋದರಲ್ಲಿ ನಿಪುಣರು. ಎಲ್ಲಿ, ಹೇಗೆ, ಯಾವ, ಯಾವ ಸಂದರ್ಭದಲ್ಲಿ ಬೇಕಾದರೂ ಸುಳ್ಳು ಹೇಳುವಂತವರು. ಯಾರು ಅಂತವರು ಎಂದು ತಿಳಿಯಲು ಈ ಸ್ಟೋರಿ ಒಮ್ಮೆ ಓದಿ ನೋಡಿ.
ಮೇಷ ರಾಶಿ: ಮೇಷ ರಾಶಿಯವರು ಸುಳ್ಳು ಹೇಳುವುದನ್ನು ನಂಬೋದಿಲ್ಲ. ಆದರೆ ಪರಿಸ್ಥಿತಿ ಹಾಗಿದ್ದರೆ, ಸುಳ್ಳು ಹೇಳೊದಕ್ಕೆ ಹಿಂದೆ ಮುಂದೆ ನೋಡಲ್ಲ. ಡೇಟಿಂಗ್ (Dating) ನಂತಹ ಸಣ್ಣ ವಿಷಯಕ್ಕಾಗಿ ಅಥವಾ ಗಾಯದಂತಹ ದೊಡ್ಡ ವಿಷಯಕ್ಕಾಗಿ ಅವರು ಸುಲಭವಾಗಿ ಸುಳ್ಳು ಹೇಳಬಹುದು.
ವೃಷಭ ರಾಶಿ(Taurus): ವೃಷಭ ರಾಶಿಯವರು ಸಾಮಾನ್ಯವಾಗಿ ಯಾವುದೇ ಸಮಸ್ಯೆಯ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಇರಿಸಿಕೊಳ್ಳಲು ಪ್ರಯತ್ನಿಸೋದಿಲ್ಲ. ಆದರೆ, ಅವರು ಸುಳ್ಳು ಹೇಳಿದಾಗ ಸತ್ಯಕ್ಕೆ ಪೆಟ್ಟು ಕೊಡುವಂತಹ ಸುಳ್ಳುಗಳನ್ನು ಹೇಳುತ್ತಾರೆ, ಅದು ಅವರಿಗೆ ವರ್ಕ್ ಆಗುತ್ತೆ.
ಮಿಥುನ ರಾಶಿ: ಸುಳ್ಳು ಹೇಳುವುದು ಒಂದು ಆಟವಾಗಿದ್ದರೆ, ಮಿಥುನ ರಾಶಿಯವರು ಸ್ಪರ್ಧೆಯಲ್ಲಿ ವಿಜೇತರಾಗುತ್ತಾರೆ(Winner). ಅವರು ಯಾವುದೇ ವಿಷಯಗಳನ್ನು ತ್ವರಿತವಾಗಿ ರೂಪಿಸಬಲ್ಲರು ಮತ್ತು ಅವರು ಯಾವಾಗ ಸುಳ್ಳು ಹೇಳಿದರು ಎಂದು ಸಹ ಅವರಿಗೆ ತಿಳಿದಿರೋದಿಲ್ಲ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ತಾವು ಪ್ರೀತಿಸುವ ವ್ಯಕ್ತಿಯನ್ನು ತುಂಬಾ ರಕ್ಷಿಸುತ್ತಾರೆ. ಆದರೆ ಕುಟುಂಬ, ಸ್ನೇಹಿತರು ಅಥವಾ ಪಾರ್ಟ್ನರ್ ನನ್ನು(Partner) ಉಳಿಸಿಕೊಳ್ಳಲು ಎಂತಹ ಸುಳ್ಳು ಹೇಳಲು ರೆಡಿ ಈ ಕರ್ಕಾಟಕ ರಾಶಿಯವರು.
ಸಿಂಹ ರಾಶಿ(Leo): ಸಿಂಹ ರಾಶಿ ಎಲ್ಲರನ್ನು ಎಲ್ಲದನ್ನು ಸೇರಿಸಲು ಇಷ್ಟಪಡುತ್ತಾರೆ. ಇವರ ಸುಳ್ಳನ್ನು ಎಷ್ಟು ಸಲೀಸಾಗಿ ಹೇಳುತ್ತಾರೆ ಅಂದ್ರೆ, ಅದು ಸತ್ಯವೇ ಆಗಿರುತ್ತೆ ಎಂದು ಜನ ನಂಬುವಷ್ಟು ಸಲೀಸಾಗಿ ಸುಳ್ಳು ಹೇಳುವಲ್ಲಿ ನಿಪುಣರು ಎಂದರೆ ತಪ್ಪಾಗಲಾರದು.
ಕನ್ಯಾ ರಾಶಿ(Virgo): ಸುಳ್ಳು ಹೇಳಿದ ನಂತರ ಕನ್ಯಾ ರಾಶಿಯವರ ಜೀವನ ಸುಲಭವಾಗೋದಾದ್ರೆ, ಇವರು ಸುಳ್ಳು ಹೇಳುತ್ತಾರೆ. ಸುಳ್ಳು ಹೇಳುವುದು ಇವರ ಸಮಸ್ಯೆಯನ್ನು ಪರಿಹರಿಸೋದಾದ್ರೆ, ಇವರು ಸುಳ್ಳು ಹೇಳುತ್ತಾರೆ.
ತುಲಾ ರಾಶಿ(Libra): ಇತರರಿಗೆ ಹಾನಿ ಮಾಡದಿದ್ದರೆ ಸುಳ್ಳು ಹೇಳುವುದು ಯೋಗ್ಯ ಎಂದು ತುಲಾ ರಾಶಿಯವರು ನಂಬುತ್ತಾರೆ. ಪ್ರತಿಯೊಬ್ಬರೂ ಅದರಿಂದ ಪ್ರಯೋಜನ ಪಡೆಯುತ್ತಿದ್ದರೆ, ಅದರಿಂದ ಏನು ಹಾನಿ? ಎಂಬುದು ತುಲಾ ರಾಶಿಯವರ ಅಭಿಪ್ರಾಯ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ತಮ್ಮನ್ನು ಅಥವಾ ಬೇರೆಯವರನ್ನು ರಕ್ಷಿಸಲು(Protect) ಚೆನ್ನಾಗಿಯೇ ಸುಳ್ಳು ಹೇಳುತ್ತಾರೆ. ನೀವು ಎಂದಾದರೂ ಸುಳ್ಳು ಹೇಳಬೇಕಾದರೆ, ಸುಳ್ಳು ಹೇಳುವ ಬಗ್ಗೆ ವೃಶ್ಚಿಕ ರಾಶಿಯವರನ್ನು ಕೇಳಿ. ಅವರು ಚೆನ್ನಾಗಿಯೇ ಪಾಠ ಮಾಡುತ್ತಾರೆ.
ಧನು ರಾಶಿ: ಧನು ರಾಶಿಯವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸುಳ್ಳು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಇವರು ಸುಳ್ಳು ಹೇಳಲು ಪ್ರಯತ್ನಿಸಿದ್ರೆ, ಒಂದು ಕ್ಷಣ ತಪ್ಪಿತಸ್ಥತೆ ಭಾವದಿಂದ ಸತ್ಯವನ್ನು(Truth) ಹೊರಹಾಕುತ್ತಾರೆ.
ಮಕರ ರಾಶಿ(Capricorn): ಧನು ರಾಶಿಯವರಂತೆ, ಮಕರ ರಾಶಿಯವರು ಸುಳ್ಳು ಹೇಳಲು ಬರೋದಿಲ್ಲ. ಮತ್ತು ಇವರು ಸುಳ್ಳು ಹೇಳಿದರೆ, ಸ್ವಲ್ಪ ಸಮಯದಲ್ಲೇ ನೀವು ಅದರ ಬಗ್ಗೆ ಸತ್ಯ ತಿಳಿದುಕೊಳ್ಳುತ್ತೀರಿ.
ಕುಂಭ ರಾಶಿ(Aquarius): ಸುಳ್ಳು ಹೇಳುವುದು ಕುಂಭ ರಾಶಿಯವರಿಗೆ ಒಂದು ಕಲೆ ಇದ್ದಂತೆ. ನಮ್ಮಲ್ಲಿ ಹೆಚ್ಚಿನವರು ಇವರ ಬಾಯಿಯಿಂದ ಹೊರಬರುವ ಎಲ್ಲವನ್ನೂ ನಂಬುತ್ತಾರೆ ಏಕೆಂದರೆ ಇವರು ಬಹಳ ದೃಢನಿಶ್ಚಯದಿಂದ ಸುಳ್ಳುಗಳನ್ನು ಹೇಳುತ್ತಾರೆ.
ಮೀನ ರಾಶಿ(Pisces): ಮೀನ ರಾಶಿಯವರು ಸುಳ್ಳು ಹೇಳುತ್ತಿದ್ದರೆ, ಅದು ಒಳ್ಳೆಯದಕ್ಕಾಗಿಯೇ ಇರುತ್ತದೆ. ಯಾಕಂದ್ರೆ ಇವರು ಸುಳ್ಳು ಹೇಳುವ ಮೊದಲು ಅನೇಕ ಬಾರಿ ಯೋಚಿಸುತ್ತಾರೆ.