ಸಂಖ್ಯೆ 7 : ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸೋದು ಪ್ರಯೋಜನಕಾರಿ
7 ನೇ ಸಂಖ್ಯೆಯ ಜನರಿಗೆ ಸಮಯವು ಉತ್ತಮವಾಗಿರಲಿದೆ. ಶಾಂತ ಮತ್ತು ಸಂಯಮದ ರೀತಿಯಲ್ಲಿ, ನೀವು ಈ ತಿಂಗಳು ನಿಮ್ಮ ಎಲ್ಲಾ ಕಾರ್ಯಗಳನ್ನು ನಿರ್ವಹಿಸೋದನ್ನು ಮುಂದುವರಿಸುತ್ತೀರಿ. ವ್ಯವಹಾರದ ದೃಷ್ಟಿಕೋನದಿಂದ, ದೂರ ಪ್ರಯಾಣ, ವಿಶೇಷವಾಗಿ ದಕ್ಷಿಣ ದಿಕ್ಕಿನ ಕಡೆ ಪ್ರಯಾಣ ಪ್ರಯೋಜನಕಾರಿ. ಉದ್ಯೋಗಾಕಾಂಕ್ಷಿಗಳು ಈ ತಿಂಗಳು ಬಡ್ತಿ(Promotion) ಅಥವಾ ಇನ್ಕ್ರಿಮೆಂಟ್ ಪಡೆಯಬಹುದು. ಕುಟುಂಬದಲ್ಲಿನ ಮಹಿಳೆಯರ ನಡುವೆ ಉದ್ವಿಗ್ನತೆ ಇರಬಹುದು, ಇದರಿಂದಾಗಿ ನಿಮ್ಮ ಮನಸ್ಸು ಸ್ವಲ್ಪ ಸಮಯದವರೆಗೆ ಅಸಮಾಧಾನಗೊಳ್ಳುತ್ತೆ. ಆರೋಗ್ಯದ ದೃಷ್ಟಿಯಿಂದ, ಯೂರಿಕ್ ಆಮ್ಲ ಮತ್ತು ಮಧುಮೇಹದ ಸಮಸ್ಯೆ ಹೆಚ್ಚಾಗಬಹುದು.
ಪರಿಹಾರ - ಈ ತಿಂಗಳು ರಾತ್ರಿ ಸೂಕ್ತದ ಪಠಣವು ನಿಮಗೆ ಪ್ರಯೋಜನಕಾರಿ.