ಬಂಗಾಳದಲ್ಲಿ, ಶರದೃತುವಿನಲ್ಲಿ ಹುಣ್ಣಿಮೆಯ ಚಂದ್ರನಿದ್ದಾಗ ಲಕ್ಷ್ಮಿಯನ್ನು ಪೂಜಿಸಲಾಗುತ್ತೆ. ಇದನ್ನು ವರ್ಷದ ಅತ್ಯಂತ ಪ್ರಕಾಶಮಾನವಾದ ರಾತ್ರಿ ಎಂದು ಕರೆಯಲಾಗುತ್ತೆ. ಈ ರಾತ್ರಿ, ಲಕ್ಷ್ಮಿ ದೇವಿಯು ಸಂಪತ್ತಿನ(Wealth) ಮಳೆ ಸುರಿಸುತ್ತಾಳೆ ಮತ್ತು ಬಡತನ, ಕೋಪ ಮತ್ತು ಸೋಮಾರಿತನದ ಕತ್ತಲೆಯನ್ನು ಜೀವನದಿಂದ ತೆಗೆದುಹಾಕುತ್ತಾಳೆ ಎಂದು ನಂಬಲಾಗಿದೆ.