ದೇವರ ಪೂಜೆಗೆ ಧೂಪ  ದ್ರವ್ಯದ ಕಡ್ಡಿಯನ್ನೇಕೆ ಬಳಸಬಾರದು?

Published : Jan 04, 2023, 05:22 PM IST

ಹಿಂದೂ ಧರ್ಮದಲ್ಲಿ, ಪೂಜೆಯನ್ನು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತೆ. ಆದ್ದರಿಂದ ಪೂಜೆ ಮಾಡುವಾಗ ದೇವರಿಗೆ ಸಿಟ್ಟು ಬರುವ ಹಾಗೆ ಮಾಡುವ ತಪ್ಪುಗಳು ಯಾವುವು ಎಂದು ತಿಳಿಯೋಣ. ನಂತರ ಆ ತಪ್ಪುಗಳನ್ನು ಮಾಡದೇ ದೇವರನ್ನು ಒಲಿಸಿಕೊಳ್ಳುವುದು ಹೇಗೆ ಅನ್ನೋದನ್ನು ನೋಡೋಣ.

PREV
18
ದೇವರ ಪೂಜೆಗೆ ಧೂಪ  ದ್ರವ್ಯದ ಕಡ್ಡಿಯನ್ನೇಕೆ ಬಳಸಬಾರದು?

 ಹಿಂದೂ ಧರ್ಮದಲ್ಲಿ ಆರಾಧನೆಗೆ ವಿಶೇಷ ಮಹತ್ವವಿದೆ. ಪೂಜೆ (Pooja) ಮಾಡುವಾಗ ಇಡೀ ಆಚರಣೆಯನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಪೂಜೆಯನ್ನು ಕ್ರಮ ಪ್ರಕಾರ ಮಾಡದಿದ್ದರೆ, ಅದನ್ನು ಪರಿಪೂರ್ಣವೆಂದು ಪರಿಗಣಿಸಲಾಗೋದಿಲ್ಲ. ಹಾಗಾಗಿ, ಪೂಜೆ ಮಾಡುವಾಗ, ಕೆಲವು ವಿಷಯಗಳಿಗೆ ವಿಶೇಷ ಗಮನವನ್ನು ಕೊಡಬೇಕು. ಮತ್ತೊಂದೆಡೆ, ಪೂಜೆ ಮಾಡುವಾಗ ಯಾವುದೇ ತಪ್ಪುಗಳು ಆಗಬಾರದು ಎಂಬುದನ್ನೂ ನೆನಪಿನಲ್ಲಿಡಬೇಕು. ಹೀಗೆ ಮಾಡುವ ಮೂಲಕ ದೇವರಿಗೆ ಸಿಟ್ಟು ತರಿಸುವ ತಪ್ಪುಗಳ ಬಗ್ಗೆ ತಿಳಿಯೋಣ. ನೀವು ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದರೆ, ಅದನ್ನು ತಕ್ಷಣವೇ ಬದಲಾಯಿಸಿ. 

28

1. ಪೂಜೆ ಪ್ರಾರಂಭಿಸುತ್ತಿದ್ದರೆ, ಮೊದಲು ಗಣೇಶನನ್ನು ಪೂಜಿಸಿ, ಆಗ ಮಾತ್ರ ಯಶಸ್ಸನ್ನು ಸಾಧಿಸಬಹುದು. ಗಣೇಶನಿಗೆ(Lord Ganesh) ತುಳಸಿ ದಳವನ್ನು ಎಂದಿಗೂ ಅರ್ಪಿಸಬೇಡಿ. ಹಾಗೆ ಮಾಡೋದು ದೋಷಕ್ಕೆ ಕಾರಣವಾಗಬಹುದು. ಗಣೇಶನಿಗೆ ಯಾವಾಗಲೂ ಗರಿಕೆಯನ್ನು ಅರ್ಪಿಸಿ.

38

2. ನೀವು ಶಿವನನ್ನು ಪೂಜಿಸುತ್ತಿದ್ದರೆ, ಅವನಿಗೆ ಎಂದಿಗೂ ಕೇದಿಗೆ ಹೂವನ್ನು ಅರ್ಪಿಸದಂತೆ ನೋಡಿಕೊಳ್ಳಿ. ಪೌರಾಣಿಕ ಕಥೆಗಳ ಪ್ರಕಾರ, ಭಗವಾನ್ ಶಿವನು(Lord shiva) ಕೇದಿಗೆಗೆ ಶಾಪವನ್ನು ನೀಡಿದ. ಅವನ ಮೇಲೆ ಕೋಪಗೊಳ್ಳುತ್ತಾನೆ. ಹಾಗಾಗಿ, ಶಿವನಿಗೆ ಕೇದಿಗೆ ಹೂವುಗಳನ್ನು ಅರ್ಪಿಸದಿದ್ದರೆ ಒಳ್ಳೆಯದು.

48

3. ಪೂಜೆಗೆ ಮೊದಲು ದೇವರ ವಿಗ್ರಹಗಳಿಗೆ(Idol) ಸ್ನಾನ ಮಾಡಿಸುವಾಗ, ಕೇವಲ ಬೆರಳುಗಳನ್ನು ಮಾತ್ರ ಬಳಸಿ. ಅವುಗಳಿಗೆ ಸ್ನಾನ ಮಾಡಿಸುವಾಗ ಹೆಬ್ಬೆರಳನ್ನು ಬಳಸಬೇಡಿ. ಆ  ಸಮಯದಲ್ಲಿ ಹೆಬ್ಬೆರಳನ್ನು ಬಳಸಿದ್ರೆ, ಆಗ ಕೆಲಸವು ಹದಗೆಡಬಹುದು.

58

4. ದೀಪ (Deepa) ಬೆಳಗಿಸಿದರೆ, ಅದನ್ನು ಯಾವಾಗಲೂ ದೇವರ ಮಂಟಪದಲ್ಲೇ ಇರಿಸಿ. ಅದನ್ನು ಭೂಮಿಯ ಮೇಲೆ ಇಡಬೇಡಿ, ಅದನ್ನು ಅಶುಭವೆಂದು ಪರಿಗಣಿಸಲಾಗುತ್ತೆ.

68

5. ಹಿಂದೂ ಧರ್ಮದಲ್ಲಿ, ಪೂಜೆಯ ಸಮಯದಲ್ಲಿ ಧೂಪ  ದ್ರವ್ಯದ ಕಡ್ಡಿಗಳನ್ನು ಬಳಸೋದನ್ನು ನಿಷೇಧಿಸಲಾಗಿದೆ. ವಾಸ್ತವವಾಗಿ, ಊದುಬತ್ತಿಗಳನ್ನು(Agarbatti) ಬಿದಿರಿನ ಮರದಿಂದ ತಯಾರಿಸಲಾಗುತ್ತೆ. ಹಿಂದೂ ಧರ್ಮದಲ್ಲಿ ಶವಸಂಸ್ಕಾರಕ್ಕೆ ಬಿದಿರಿನ ಮರವನ್ನು ಬಳಸಲಾಗುತ್ತೆ. ಹಾಗಾಗಿ ಅವುಗಳನ್ನು ಬಳಸದಿರೋದು ಒಳ್ಳೇದು.  
 

78
tulsi

6. ನೀವು ಪ್ರತಿದಿನ ತುಳಸಿಯನ್ನು(Tulasi) ಪೂಜಿಸುತ್ತೀರಾ, ಹಾಗಿದ್ರೆ ಭಾನುವಾರ ಹಾಗೆ ಮಾಡಬೇಡಿ. ಭಾನುವಾರದಂದು ತುಳಸಿಯನ್ನು ಮುಟ್ಟಬೇಡಿ. ಇದರಿಂದಾಗಿ, ಭಗವಾನ್ ವಿಷ್ಣುವು ಸಂತೋಷದಿಂದಿರುವ ಬದಲು ಕೋಪಗೊಳ್ಳುತ್ತಾನೆ.

88

7. ನೀವು ಸಾಲಿಗ್ರಾಮವನ್ನು ಪೂಜಿಸೋದಾದ್ರೆ,  ಅಕ್ಷತೆಯನ್ನು(Akshathe) ಎಂದಿಗೂ ಅರ್ಪಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಹಾಗೆ ಮಾಡೋದು ಪಾಪಕ್ಕೆ ಸಮಾನವೆಂದು ಪರಿಗಣಿಸಲಾಗುತ್ತೆ. ಸಾಲಿಗ್ರಾಮ ಪೂಜಿಸುವ ಸರಿಯಾದ ಕ್ರಮಗಳನ್ನು ತಿಳಿದುಕೊಂಡು ಬಳಿಕವಷ್ಟೇ ಪೂಜಿಸಿ.

click me!

Recommended Stories