ಈ ಪವಿತ್ರ ಎಲೆಗಳೊಂದಿಗೆ ದೇವ-ದೇವತೆಗಳಿಗಿದೆ ಸಂಬಂಧ!

First Published | Jun 22, 2023, 4:31 PM IST

ಹಿಂದೂ ಧರ್ಮದಲ್ಲಿ ಅನೇಕ ಮರಗಳು ಮತ್ತು ಸಸ್ಯಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಅಲ್ಲದೇ ಹಿಂದೂಗಳು ಮರ ಮತ್ತು ಸಸ್ಯಗಳನ್ನು ದೇವರ ರೂಪದಂತೆ ಪೂಜಿಸುತ್ತಾರೆ. ಯಾವ ಪವಿತ್ರ ಎಲೆಗಳು ಯಾವ ದೇವರು ಮತ್ತು ದೇವತೆಗಳಿಗೆ ಸಂಬಂಧಿಸಿವೆ ಎಂದು ತಿಳಿಯೋಣ. 

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ದೇವ- ದೇವತೆಗಳು ಮರಗಳು ಮತ್ತು ಸಸ್ಯಗಳಲ್ಲಿ ವಾಸಿಸುತ್ತಾರೆ. ಈ ಕಾರಣಕ್ಕಾಗಿ, ಅನೇಕ ಮರ ಮತ್ತು ಸಸ್ಯಗಳನ್ನು ಸಹ ಪೂಜಿಸಲಾಗುತ್ತೆ. ಅರಳಿ, ಬೇವು, ಹುಣಸೆ, ತುಳಸಿ ಅಥವಾ ಮಾವು ಮುಂತಾದ ಮರಗಳನ್ನು ನೆಡುವ ವ್ಯಕ್ತಿ ಸದ್ಗುಣಶೀಲ ಎಂದು ನಂಬಲಾಗಿದೆ. ಯಾವ ಪವಿತ್ರ ಎಲೆಗಳು(Holy leaves) ದೇವ-ದೇವತೆಗಳಿಗೆ ಸಂಬಂಧಿಸಿವೆ ಎಂದು ನಂಬಲಾಗಿದೆ ಎಂದು ಇಲ್ಲಿ ತಿಳಿಯೋಣ. ಆ ಮೂಲಕ ನೀವು ಸಹ ಪೂಜೆಯನ್ನು ಮಾಡಿ, ದೇವರ ಆಶೀರ್ವಾದ ಪಡೆಯಬಹುದು. 

ಬೇವಿನ ಎಲೆ (Neem)
ಬೇವು ಪವಾಡಸದೃಶ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದನ್ನು ದುರ್ಗಾ ಮಾತೆಯ ರೂಪವೆಂದು ಪರಿಗಣಿಸಲಾಗಿದೆ. ಭಾರತದ ಕೆಲವು ಭಾಗಗಳಲ್ಲಿ, ಈ ಮರವನ್ನು ದೇವಿ ಎಂದೂ ಕರೆಯಲಾಗುತ್ತೆ. ಬೇವಿನ ಮರವನ್ನು ಮಂಗಳ ದೇವಿ ಎಂದೂ ಪರಿಗಣಿಸಲಾಗುತ್ತೆ. ನಂಬಿಕೆಗಳ ಪ್ರಕಾರ, ಇದನ್ನು ಪೂಜಿಸೋದರಿಂದ ಮಂಗಳ ದೋಷಗಳು ದೂರವಾಗುತ್ತವೆ.

Tap to resize

ಬಾಳೆ ಎಲೆಗಳು (Banana plant)
ಬಾಳೆ ಎಲೆಗಳನ್ನು ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತೆ. ಬಾಳೆ ಮರದಲ್ಲಿ ವಿಷ್ಣು ಮತ್ತು ತಾಯಿ ಲಕ್ಷ್ಮಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ಬಾಳೆ ಮರವು ಗುರು ದೇವನಿಗೆ ಸಂಬಂಧಿಸಿದೆ ಎಂದು ಸಹ ಹೇಳಲಾಗುತ್ತೆ. ಗುರುವಾರ ಬಾಳೆ ಮರದ ಬೇರನ್ನು ಪೂಜಿಸುವ ಮೂಲಕ ವಿಷ್ಣುವನ್ನು ಸಂತೋಷಪಡಿಸಬಹುದು ಎಂದು ನಂಬಲಾಗಿದೆ. ಬಾಳೆ ಮರವು ನಿಮ್ಮ ಮನೆಗೆ ಮಂಗಳಕರ ವಿಷಯಗಳನ್ನು ತರುವುದಲ್ಲದೆ, ಸಂಪತ್ತನ್ನು ಸಹ ಒದಗಿಸುತ್ತೆ. 

ಶಮಿ ಮರದ ಎಲೆಗಳು 
ಹಿಂದೂ ಧರ್ಮದಲ್ಲಿ ಶಮಿ ಮರವನ್ನು ಸಹ ಪೂಜಿಸಲಾಗುತ್ತೆ. ಅನೇಕ ಜನರು ದಸರಾದಂದು ಶಮಿ ಮರವನ್ನು ಪೂಜಿಸುತ್ತಾರೆ. ಶಮಿ ಮರವನ್ನು ಭಗವಾನ್ ರಾಮನು(Sri Ram) ಪೂಜಿಸುತ್ತಿದ್ದನೆಂದು ನಂಬಲಾಗಿದೆ. ಪಾಂಡವರು ವನವಾಸದ ಕೊನೆಯ ವರ್ಷದಲ್ಲಿ ಗಾಂಡಿವ ಬಿಲ್ಲು ಈ ಮರದಲ್ಲಿ ಅಡಗಿಸಿಟ್ಟ ಬಗ್ಗೆ ಉಲ್ಲೇಖಗಳಿವೆ. ಶಮಿ ಮರದ ಕಟ್ಟಿಗೆಯನ್ನು ಯಜ್ಞಕ್ಕೆ ಉಪಯೋಗಿಸೋದು  ಪವಿತ್ರವೆಂದು ಪರಿಗಣಿಸಲಾಗಿದೆ. 

ಅರಳಿ ಮರ
ಹಿಂದೂ ಧರ್ಮದಲ್ಲಿ ಅರಳಿ ಮರವನ್ನು ಬಹಳ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮ ಅರಳಿ ಮರದ ಬೇರಿನಲ್ಲಿ, ವಿಷ್ಣು ಕಾಂಡದಲ್ಲಿ ಮತ್ತು ಶಿವನು ಕೊಂಬೆಗಳಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಒಬ್ಬರ ಜಾತಕದಲ್ಲಿ ಶನಿ ದೋಷವಿದ್ದರೆ(Shani Dosh), ಅರಳಿ ಮರವನ್ನು ವಿಶೇಷವಾಗಿ ಪೂಜಿಸಬೇಕು. ಶನಿವಾರ, ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆ ದೀಪಗಳನ್ನು ಬೆಳಗಿಸಬೇಕು.
 

ನೆಲ್ಲಿಕಾಯಿ(Amla) ಮರ 
ಹಿಂದೂ ಧರ್ಮದಲ್ಲಿ, ನೆಲ್ಲಿಕಾಯಿ ಮರವನ್ನು ಔಷಧೀಯ ಮರವೆಂದು ಪರಿಗಣಿಸಲಾಗಿದೆ. ರುಚಿಗೆ ಅನುಗುಣವಾಗಿ ಅದರ ಕೆಲವು ಗುಣಲಕ್ಷಣಗಳನ್ನು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸದ ಒಂಬತ್ತನೇ ದಿನದಂದು ನೆಲ್ಲಿಕಾಯಿಯ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ, ಮಹಿಳೆಯರು ನೂಲನ್ನು ನೆಲ್ಲಿಕಾಯಿ ಮರಕ್ಕೆ ಸುತ್ತುತ್ತಾರೆ ಮತ್ತು ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.  

ಶ್ರೀಗಂಧದ ಮರ(Sandalwood)
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಗಂಧದ ಮರವು ಬಹಳ ವಿಶೇಷ ಮಹತ್ವವನ್ನು ಹೊಂದಿದೆ. ಪೂಜಿಸುವ ಜನರು ಹೆಚ್ಚಾಗಿ ಶ್ರೀಗಂಧದ ಪೇಸ್ಟ್ ನ್ನು ತಮ್ಮ ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಶ್ರೀಗಂಧವನ್ನು ವಿಶೇಷವಾಗಿ ವಿಷ್ಣುವಿನ ಪೂಜೆಗಳಲ್ಲಿ ಬಳಸಲಾಗುತ್ತದೆ ಎಂದು ನಂಬಲಾಗಿದೆ.  
 

Latest Videos

click me!