ಅಕ್ಕಿಯನ್ನು(Rice) ಆಹಾರದಲ್ಲಿ ಅನೇಕ ರೀತಿಯಲ್ಲಿ ಬಳಸಲಾಗುತ್ತೆ. ಸಿಹಿಯಾದ ಪಾಯಸದಿಂದ ಹಿಡಿದು ಬಿರಿಯಾನಿವರೆಗೆ ಎಲ್ಲವನ್ನೂ ಮಾಡಬಹುದು. ಆದರೆ ಜ್ಯೋತಿಷ್ಯದಲ್ಲಿ, ಕೆಲವು ಪರಿಹಾರಗಳನ್ನು ಸಹ ಹೇಳಲಾಗಿದೆ, ಇದನ್ನು ಮಾಡೋದರಿಂದ ವ್ಯಕ್ತಿಯ ಅದೃಷ್ಟ ರಾತ್ರೋರಾತ್ರಿ ಬೆಳಗುತ್ತೆ. ಅವುಗಳು ಯಾವುವು ಅನ್ನೋದನ್ನು ನೋಡೋಣ.
ಈ ಟ್ರಿಕ್‌ನಿಂದ ಚಂದ್ರ (Moon) ಸಂತೋಷಪಡುತ್ತಾನೆ
ಹುಣ್ಣಿಮೆಯಂದು ಅಕ್ಕಿ ಪಾಯಸ ತಯಾರಿಸಿ ಚಂದ್ರ ದೇವನಿಗೆ ಅರ್ಪಿಸಿ. ಇದನ್ನು ಮಾಡೋದರಿಂದ, ಚಂದ್ರ ದೇವ ಸಂತೋಷವಾಗಿರುತ್ತಾನೆ . ಅಷ್ಟೇ ಅಲ್ಲ, ಇದನ್ನ ಮಾಡಿದ್ರೆ ನೀವು ಹಣ ಸೇರಿದಂತೆ ಅನೇಕ ಪ್ರಯೋಜನ ಪಡೆಯುವಿರಿ.
ಗುರುವಾರ, ಕೇಸರಿಯನ್ನು ಸೇರಿಸಿದ ಅಕ್ಕಿಯಿಂದ ಸಿಹಿಯಾದ ಹಳದಿ ಪಾಯಸ ತಯಾರಿಸಿ. ದೇವರಿಗೆ ಅರ್ಪಿಸಿ. ಇದನ್ನು ಮಾಡೋದರಿಂದ ವಿಷ್ಣು ಮತ್ತು ತಾಯಿ ಲಕ್ಷ್ಮಿ ಸಂತೋಷಪಡುತ್ತಾರೆ. ಲಕ್ಷ್ಮಿ ದೇವಿಯ (Goddess Lakshmi) ಕೃಪೆಯಿಂದ, ಹಣದ ಕೊರತೆಯಿರೋದಿಲ್ಲ.
ಹಣ (Money) ಕೈಯಲ್ಲಿ ಉಳಿಯಲು ಈ ಕ್ರಮ ತೆಗೆದುಕೊಳ್ಳಿ
ನಿಮ್ಮ ಬಳಿ ಹಣವಿದ್ದರೂ ಅದು ನಿಲ್ಲದಿದ್ದರೆ, 7 ಪೂರ್ಣ ಅಕ್ಕಿಯ ಕಾಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಪರ್ಸ್ ನಲ್ಲಿ ಇರಿಸಿ. ಇದು ನಿಮ್ಮಲ್ಲಿ ಹಣ ಉಳಿಯುವಂತೆ ಮಾಡುತ್ತೆ.
ಪ್ರತಿದಿನ ಬೆಳಿಗ್ಗೆ ಎದ್ದು ಒಂದು ಹಿಡಿ ಅಕ್ಕಿಯನ್ನು ಮೀನುಗಳಿರುವ(Fish) ಕೊಳಕ್ಕೆ ಎಸೆಯಿರಿ. ನಂತರ, ನಿಮ್ಮ ಇಷ್ಟ ದೇವನನ್ನು ನೆನಪಿಸಿಕೊಳ್ಳಿ ಮತ್ತು ನಿಮ್ಮ ಕಷ್ಟಗಳನ್ನು ಎದುರಿಸಲು ಪ್ರಾರ್ಥಿಸಿ. ಹೀಗೆ ಮಾಡೋದ್ರಿಂದ, ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಪಿತೃ ದೋಷಗಳನ್ನು(Pitru Dosha) ತೊಡೆದುಹಾಕಲು ಇಲ್ಲಿದೆ ಪರಿಹಾರ
ಪಿತೃ ದೋಷವನ್ನು ತೆಗೆದುಹಾಕಲು, ಮಂಗಳವಾರ ಬೇಯಿಸಿದ ಅನ್ನವನ್ನು ಪಿತೃಗಳಿಗೆ ಅರ್ಪಿಸಿ. ಶನಿ ದೋಷ ತಪ್ಪಿಸಲು, ಅಕ್ಕಿಯೊಂದಿಗೆ ಬೆರೆಸಿದ ಕಪ್ಪು ಎಳ್ಳನ್ನು ದಾನ ಮಾಡಿ. ಸೂರ್ಯ ದೋಷ ತೆಗೆದುಹಾಕಲು, ಅಕ್ಕಿಯಲ್ಲಿ ಸ್ವಲ್ಪ ಅರಿಶಿನವನ್ನು ಬೆರೆಸಿ ಸೂರ್ಯ ದೇವರಿಗೆ ಅರ್ಪಿಸಿ.
ವ್ಯವಹಾರದಲ್ಲಿ ಯಶಸ್ಸಿಗೆ (Success) ಸಲಹೆ
ತಮ್ಮ ಜೀವನದಲ್ಲಿ ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಚಿಂತಿತರಾಗಿರುವವರು, ಅಕ್ಕಿಯ ಈ ಪರಿಹಾರವನ್ನು ಮಾಡಬಹುದು. ಅಂತಹ ಜನರು ಸಿಹಿ ಅನ್ನವನ್ನು ತಯಾರಿಸಬೇಕು ಮತ್ತು ಛಾವಣಿ ಮೇಲೆ ಕುಳಿತಿರುವ ಕಾಗೆಗಳಿಗೆ ಆಹಾರವನ್ನು ನೀಡಬೇಕು.
ಕಾಗೆಗಳಿಗೆ(Crow) ಆಹಾರ ನೀಡೋದ್ರಿಂದ ಅವುಗಳಿಗೆ ತೃಪ್ತಿಯಾಗುತ್ತೆ. ಇದರಿಂದ ನಿಮ್ಮ ಜೀವನದ ತೊಂದರೆಗಳ ಅವಧಿಯೂ ಕೊನೆಗೊಳ್ಳುತ್ತೆ. ಈ ಪರಿಹಾರವನ್ನು ಮಾಡೋದರಿಂದ, ನಿಮ್ಮ ವ್ಯವಹಾರದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.