ಕನಸಲ್ಲಿ ಆನೆ ನೋಡಿದ್ರಾ? ಇದರಿಂದಾ ಒಳ್ಳೆಯದಾಗುತ್ತಾ? ಇಲ್ವಾ? ತಿಳಿಯಿರಿ

First Published | Apr 11, 2023, 4:15 PM IST

ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ವಿವಿಧ ಹಂತಗಳಲ್ಲಿ ಆನೆಯನ್ನು ನೋಡೋದು ಅನೇಕ ಸಂದರ್ಭಗಳಲ್ಲಿ ಶುಭವೆಂದು ಪರಿಗಣಿಸಲಾಗುತ್ತೆ. ವಾಸ್ತವವಾಗಿ, ಹಿಂದೂ ಧರ್ಮದಲ್ಲಿ, ಆನೆಯನ್ನು ಮಂಗಳಕರತೆಯ ಸಂಕೇತವೆಂದು ಪರಿಗಣಿಸಲಾಗುತ್ತೆ. ಕನಸಿನಲ್ಲಿ ಆನೆಯನ್ನು ನೋಡೋದರ ಅರ್ಥವೇನು ಎಂದು ತಿಳಿಯೋಣ.

ಹಿಂದೂ ಧರ್ಮದಲ್ಲಿ ಆನೆಯನ್ನು(Elephant) ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆನೆ ಗಣೇಶನೊಂದಿಗೆ ಸಂಬಂಧ ಹೊಂದಿದೆ ಎಂದು ನಂಬಲಾಗಿದೆ. ಆನೆಯನ್ನು ಹಿಂದೂ ಧರ್ಮದಲ್ಲಿ ಶುಭ ಸಂಕೇತವಾಗಿಯೂ ಬಳಸಲಾಗುತ್ತೆ. ಆದ್ದರಿಂದ, ಕನಸಿನಲ್ಲಿ ನೀವು ಆನೆಯನ್ನು ಮತ್ತೆ ಮತ್ತೆ ನೋಡುವುದು ಶುಭವೋ? ಅಶುಭವೋ? ಕನಸಿನ ವಿಜ್ಞಾನದ ಪ್ರಕಾರ ಅದರರ್ಥ ಏನಿರಬಹುದು ತಿಳಿಯೋಣ.

ಕನಸಿನಲ್ಲಿ ಕಪ್ಪು(Black) ಆನೆಯನ್ನು ನೋಡೋದರ ಅರ್ಥವೇನು?
ಕನಸಿನ ವಿಜ್ಞಾನದ ಪ್ರಕಾರ, ಒಬ್ಬ ವ್ಯಕ್ತಿ ಕನಸಿನಲ್ಲಿ ಕಪ್ಪು ಆನೆಯನ್ನು ನೋಡಿದರೆ, ಅವನು ಸ್ವಲ್ಪ ಜಾಗರೂಕರಾಗಿರಬೇಕು. ಕನಸಿನಲ್ಲಿ ಕಪ್ಪು ಆನೆ ನೋಡೋದು ಎಂದರೆ ಮುಂಬರುವ ಸಮಯದಲ್ಲಿ ನೀವು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು ಎಂದರ್ಥ.

Tap to resize

ಕನಸಿನಲ್ಲಿ ಬಿಳಿ ಆನೆಯನ್ನು(White Elephant) ನೋಡೋದರ ಅರ್ಥವೇನು?
ಕನಸಿನ ವಿಜ್ಞಾನದ ಪ್ರಕಾರ, ನೀವು ಕನಸಿನಲ್ಲಿ ಬಿಳಿ ಆನೆಯನ್ನು ನೋಡಿದರೆ, ಅದು ತುಂಬಾ ಶುಭ ಸಂಕೇತ ಎಂದರ್ಥ. ಈ ಕನಸು ನಿಮ್ಮ ಜೀವನದಲ್ಲಿ ಸಾಕಷ್ಟು ಸಂತೋಷವನ್ನು ತರುತ್ತೆ. ಹಾಗೆಯೇ ಅಂತಹ ಕನಸು ಬಂದಾಗ, ನೀವು ಸಾಧ್ಯವಾದಷ್ಟು ಬೇಗ ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ಪಡೆಯಬಹುದು.

ಗರ್ಭಿಣಿ (Pregnant)ಮಹಿಳೆಯ ಕನಸಿನಲ್ಲಿ ಆನೆ ಬಂದರೆ ಅದರ ಅರ್ಥವೇನು?
ಗರ್ಭಿಣಿ ಮಹಿಳೆ ಕನಸಿನಲ್ಲಿ ಆನೆಯನ್ನು ನೋಡಿದರೆ, ಅದನ್ನು ಬಹಳ ಒಳ್ಳೆಯ ಕನಸು ಎಂದು ಪರಿಗಣಿಸಲಾಗುತ್ತೆ. ಇದರರ್ಥ ನೀವು ಅದೃಷ್ಟಶಾಲಿ ಮಗುವನ್ನು ಹೊಂದುತ್ತೀರಿ ಎಂದು. ಹಾಗೆಯೇ, ಅಂತಹ ಕನಸು ಮಗುವಿಗೆ ತೀಕ್ಷ್ಣವಾದ ಬುದ್ಧಿಶಕ್ತಿಯನ್ನು ಹೊಂದಿರುವ ಸಾಧ್ಯತೆಯನ್ನು ಸಹ ತೋರಿಸುತ್ತೆ.

ಕನಸಿನಲ್ಲಿ ಆನೆಗಳ ಹಿಂಡನ್ನು(Group) ನೋಡುವುದರ ಅರ್ಥವೇನು?
ಒಬ್ಬ ವ್ಯಕ್ತಿ ಕನಸಿನಲ್ಲಿ ಆನೆಗಳ ಹಿಂಡನ್ನು ನೋಡಿದರೆ, ನಿಮ್ಮ ಆರ್ಥಿಕ ಸ್ಥಿತಿ ಶೀಘ್ರದಲ್ಲೇ ಸುಧಾರಿಸಲಿದೆ ಎಂದರ್ಥ. ಅಂತಹ ಕನಸುಗಳು ಸಂಪತ್ತಿನ ಬೆಳವಣಿಗೆಯನ್ನು (Prosperity) ಸಹ ಸೂಚಿಸುತ್ತವೆ. ಹಾಗಾಗಿ ಖುಷಿ ಪಡಿ.

ಕನಸಿನಲ್ಲಿ ಆನೆ ದಾಳಿ(Attack) ಮಾಡೋದನ್ನು ನೋಡುವುದರ ಅರ್ಥವೇನು?
ಆನೆ ನಿಮ್ಮ ಮೇಲೆ ದಾಳಿ ಮಾಡುತ್ತಿರೋದನ್ನು ಕನಸಿನಲ್ಲಿ ನೋಡಿದರೆ. ಇದರರ್ಥ ನಿಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳು ಇರಬಹುದು.  ಕನಸಿನಲ್ಲಿ ಆನೆಗೆ ನೀವು ಹೆದರುತ್ತಿದ್ದರೆ, ನಿಮ್ಮ ಜೀವನದಲ್ಲಿನ ತೊಂದರೆಗಳನ್ನು ತೆಗೆದುಹಾಕುವ ಮೂಲಕ ನೀವು ಮುಂದುವರಿಯುತ್ತೀರಿ ಎಂದರ್ಥ.

Latest Videos

click me!