ದಾಂಪತ್ಯ ಜೀವನ ಸಾಮರಸ್ಯದಿಂದ ಕೂಡಿರಲು ಅಕ್ಷಯ ತೃತೀಯದಂದು ಈ ಕೆಲಸ ಮಾಡಿ

First Published | Apr 10, 2023, 5:06 PM IST

ಅಕ್ಷಯ ತೃತೀಯ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದೆ. ಈ ದಿನ ನೀವು ಯಾವುದೇ ಕೆಲಸವನ್ನು ಮಾಡಿದರೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯಬಹುದು. ಈ ದಿನ, ವೈವಾಹಿಕ ಜೀವನವನ್ನು ಸಂತೋಷಗೊಳಿಸಲು ನೀವು ಕೆಲವು ಪರಿಹಾರಗಳನ್ನು ಸಹ ಪ್ರಯತ್ನಿಸಬಹುದು.   

ಅಕ್ಷಯ ತೃತೀಯ (Akshaya tritiya) ಹಿಂದೂ ಧರ್ಮದ ಜನಪ್ರಿಯ ಹಬ್ಬ. ಇದು ಸನಾತನ ಧರ್ಮದ ಜನರಿಗೆ ಅತ್ಯಂತ ಪವಿತ್ರ ಹಬ್ಬವೆಂದು ಪರಿಗಣಿಸಲಾಗಿದೆ ಮತ್ತು ಈ ಶುಭ ದಿನ ಜೈನ ಸಮುದಾಯಗಳಿಗೆ ಅತ್ಯಂತ ಮಂಗಳಕರ ಮತ್ತು ಪವಿತ್ರ ದಿನ. ಇದು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲ್ಪಟ್ಟಿರೋದರಿಂದ, ಈ ದಿನದಂದು ನೀವು ಯಾವುದೇ ಶುಭ ಕಾರ್ಯವನ್ನು ಮಾಡಿದರೆ, ನೀವು ಖಂಡಿತವಾಗಿಯೂ ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಈ ಶುಭ ದಿನದಂದು, ಮದುವೆಯನ್ನು ಯಾವುದೇ ಮುಹೂರ್ತವಿಲ್ಲದೆ ಮಾಡಬಹುದು ಎಂದು ನಂಬಲಾಗಿದೆ, ಯಾಕಂದ್ರೆ ಇದನ್ನು ಸಂಪೂರ್ಣವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತೆ.

ಈ ಕಾರಣಕ್ಕಾಗಿ, ಜನರು ಯಾವುದೇ ಹೊಸ ವ್ಯವಹಾರವನ್ನು(Business) ಪ್ರಾರಂಭಿಸೋದು, ಹೊಸ ಮನೆಯನ್ನು ಖರೀದಿಸೋದು ಅಥವಾ ಹೊಸ ಸಂಬಂಧವನ್ನು ಬೆಸೆಯೋದು ಮುಂತಾದ ಅನೇಕ ಕೆಲಸಗಳನ್ನು ಮಾಡುತ್ತಾರೆ, ಇದರಿಂದ ಅವರು ಯಶಸ್ಸನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. 

Tap to resize

ಹಾಗೆಯೇ, ನೀವು ವಿವಾಹಿತರಾಗಿದ್ದರೆ(Married) ಮತ್ತು ಸಂಗಾತಿಯೊಂದಿಗೆ ವಿವಾದವನ್ನು ಹೊಂದಿದ್ದರೆ, ಈ ದಿನದಂದು ಕೆಲವು ವಿಶೇಷ ಕ್ರಮಗಳೊಂದಿಗೆ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಭಿನ್ನಾಭಿಪ್ರಾಯಗಳನ್ನು ತೆಗೆದುಹಾಕಬಹುದು ಎಂದು ನಂಬಲಾಗಿದೆ. ಅಕ್ಷಯ ತೃತೀಯ ದಿನದಂದು ನೀವು ಪ್ರಯತ್ನಿಸಬಹುದಾದ ಸುಲಭ ಜ್ಯೋತಿಷ್ಯ ಪರಿಹಾರಗಳ ಬಗ್ಗೆ ತಿಳಿದುಕೊಂಡು, ಸಂಬಂಧಗಳಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳೋಣ.

ವಿಶೇಷ ಬಣ್ಣಗಳ ಬಟ್ಟೆಗಳನ್ನು ಧರಿಸಿ 
ನೀವು ವೈವಾಹಿಕ ಜೀವನದಲ್ಲಿ ಮಾಧುರ್ಯವನ್ನು ಹೆಚ್ಚಿಸಲು ಬಯಸೋದಾದ್ರೆ, ಅಕ್ಷಯ ತೃತೀಯ ದಿನದಂದು, ಗಂಡ ಮತ್ತು ಹೆಂಡತಿ ಕೆಲವು ವಿಶೇಷ ಬಣ್ಣಗಳ ಬಟ್ಟೆಗಳನ್ನು ಧರಿಸಬೇಕು. ಈ ದಿನ ನೀವು ಗುಲಾಬಿ ಮತ್ತು ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿದ್ರೆ, ಸಾಮರಸ್ಯ ಉಳಿಯುತ್ತೆ. ಮುಖ್ಯವಾಗಿ ಅಕ್ಷಯ ತೃತೀಯ ದಿನದಂದು ಗುಲಾಬಿ ಬಣ್ಣದ(Rose color) ಬಟ್ಟೆಗಳನ್ನು ಧರಿಸೋದು ಸೂಕ್ತ ಏಕೆಂದರೆ ಇದನ್ನು ಪ್ರೀತಿಯ ಬಣ್ಣವೆಂದು ಪರಿಗಣಿಸಲಾಗುತ್ತೆ, ಆದ್ದರಿಂದ ಈ ದಿನದಂದು ಈ ಬಣ್ಣಗಳ ಬಟ್ಟೆಗಳನ್ನು ಧರಿಸಿ ಪೂಜಿಸಿ.  

ರುದ್ರಾಭಿಷೇಕ(Rudrabhisheka) ಮಾಡಿ 
ಅಕ್ಷಯ ತೃತೀಯ ದಿನದಂದು ಶಿವನನ್ನು ಮೆಚ್ಚಿಸಲು ನಿಮ್ಮ ಸಂಗಾತಿಯೊಂದಿಗೆ ರುದ್ರಾಭಿಷೇಕ ಮಾಡಿಸಿದ್ರೆ, ನಿಮ್ಮ ವೈವಾಹಿಕ ಜೀವನದಲ್ಲಿ ಯಾವಾಗಲೂ ಪ್ರೀತಿ ಇರಲಿದೆ. ಸಾಧ್ಯವಾದರೆ, ಶಿವ ದೇವಾಲಯಕ್ಕೆ ಹೋಗಿ ಒಟ್ಟಿಗೆ ರುದ್ರಾಭಿಷೇಕ ಮಾಡಿಸಿ, ಅದು ನಿಮಗೆ ಹೆಚ್ಚು ಫಲಪ್ರದವಾಗಬಹುದು.

ರುದ್ರಾಭಿಷೇಕ ಮಾಡೋದರಿಂದ ಎಲ್ಲಾ ಪಾಪಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತೆ ಮತ್ತು ನಿಮ್ಮ ಸಂಬಂಧವನ್ನು ಹತ್ತಿರ ತರಲು ಸಹಾಯ ಮಾಡುತ್ತೆ. ಈ ದಿನ ನೀವು ಮನೆಯಲ್ಲಿ ರುದ್ರಾಭಿಷೇಕವನ್ನು ಆಯೋಜಿಸುತ್ತಿದ್ದರೆ ಅದು ಸಕಾರಾತ್ಮಕತೆಯನ್ನು(Positivity) ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. 

ಗೌರಿ ಶಂಕರನನ್ನು(Gowri-Shankar) ಪೂಜಿಸಿ
ಅಕ್ಷಯ ತೃತೀಯ ದಿನದಂದು, ಗಂಡ ಮತ್ತು ಹೆಂಡತಿ ಗೌರಿ ಮತ್ತು ಶಂಕರರನ್ನು ಒಟ್ಟಿಗೆ ಪೂಜಿಸಿದ್ರೆ, ನಿಮ್ಮ ನಡುವಿನ ಪ್ರೇಮ ಸಂಬಂಧವು ವರ್ಷಪೂರ್ತಿ ಸಿಹಿಯಾಗಿ ಉಳಿಯಲಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ನೀವು ಶಿವ-ಪಾರ್ವತಿಯನ್ನು ಪೂಜಿಸಬಹುದು.

ನೀವು ಮದುವೆಯಾಗದಿದ್ದರೆ ಮತ್ತು ಕೆಲವು ಕಾರಣಗಳಿಂದಾಗಿ ಮದುವೆ ವಿಳಂಬವಾಗುತ್ತಿದ್ದರೆ, ಮಾತೆ ಗೌರಿಯನ್ನು ಪೂಜಿಸುವಾಗ, ಅವಳಿಗೆ ಕೆಂಪು ಶಾಲನ್ನು ಅರ್ಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ನೀವು ವಿವಾಹಿತರಾಗಿದ್ದರೆ, ತಾಯಿಗೆ ಕೆಂಪು ಕುಂಕುಮವನ್ನು(Kumkum) ಅರ್ಪಿಸಿ. 

ಶೃಂಗಾರ ಮಾಡಿಕೊಳ್ಳಿ  
ಅಕ್ಷಯ ತೃತೀಯ ದಿನದಂದು ನೀವು ಶೃಂಗಾರ ಮಾಡಿಕೊಳ್ಳುವುದು, ನಿಮ್ಮ ಗಂಡನ ಜೀವನದಲ್ಲಿ ಸಾಮರಸ್ಯ ತರಲು ಇದು ಸುಲಭ ಮಾರ್ಗ. ಈ ದಿನ ಶೃಂಗಾರದ ಜೊತೆಗೆ ಚಿನ್ನದ ಆಭರಣಗಳನ್ನು(Gold jewel) ಧರಿಸಿ. ಈ ದಿನದಂದು ನೀವು ಶೃಂಗಾರ ವಸ್ತುಗಳನ್ನು ಖರೀದಿಸಿ ಅದನ್ನು ಮಾತಾ ಗೌರಿಗೆ ಅರ್ಪಿಸಿದ್ರೆ ಮತ್ತು ಅರ್ಪಿಸಿದ ಕೆಲವು ವಸ್ತುಗಳನ್ನು ಬಳಸಿದ್ರೆ, ಸಂಗಾತಿಯೊಂದಿಗೆ ಯಾವಾಗಲೂ ಸಾಮರಸ್ಯದಿಂದ ಬಾಳಬಹುದು.

ಈ ಮಂತ್ರವನ್ನು(Mantra) ಪಠಿಸಿ 
ಅಕ್ಷಯ ತೃತೀಯ ದಿನದಂದು, ಮಾತೆ ಗೌರಿಗೆ ಸಿಂಧೂರವನ್ನು ಅರ್ಪಿಸುವಾಗ ನೀವು 'ಓಂ ಗೌರಿ ಶಂಕರಾಯ ನಮಃ' ಮಂತ್ರವನ್ನು ಪಠಿಸಿದ್ರೆ, ಅದು ನಿಮಗೆ ವಿಶೇಷವಾಗಿ ಫಲಪ್ರದವಾಗಿರಲಿದೆ. ಈ ದಿನ, ಶಿವಲಿಂಗಕ್ಕೆ ನೀರನ್ನು ಅರ್ಪಿಸುವಾಗ, 'ಓಂ ನಮಃ ಶಿವಾಯ' ಮಂತ್ರವನ್ನು 108 ಬಾರಿ ಪಠಿಸಿ. ಈ ಮಂತ್ರವನ್ನು ಪಠಿಸೋದು  ಮಂಗಳಕರ ಮತ್ತು ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಾಮರಸ್ಯವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತೆ. 

ಅಕ್ಷಯ ತೃತೀಯ ದಿನದಂದು ಇಲ್ಲಿ ಹೇಳಿರುವ  ಕೆಲವು ಸುಲಭ ಪರಿಹಾರಗಳನ್ನು ಪ್ರಯತ್ನಿಸಿದ್ರೆ, ನಿಮ್ಮ ಸಂಗಾತಿಯೊಂದಿಗಿನ(Partner) ಸಂಬಂಧವು ಯಾವಾಗಲೂ ಸಿಹಿಯಾಗಿ ಉಳಿಯಲಿದೆ. 

Latest Videos

click me!