ಕನ್ಯಾರಾಶಿಗೆ ಶನಿ ಪ್ರವೇಶಿಸಿದ್ದು, ಸೂರ್ಯನೊಂದಿಗೆ ಮುಖಾಮುಖಿಯಾಗಿದೆ. ಇದರಿಂದ ಶನಿಯ ಬಲ ದ್ವಿಗುಣಗೊಂಡಿದ್ದು, ಅಕ್ಟೋಬರ್ 17ರವರೆಗೆ ಮೂರು ರಾಶಿಯವರಿಗೆ ವೃತ್ತಿ, ಆರ್ಥಿಕತೆ ಮತ್ತು ಕುಟುಂಬ ಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿದೆ.
ಶನಿದೇವನನ್ನು ಅತ್ಯಂತ ಪ್ರಭಾವಶಾಲಿಯುಳ್ಳ ಗ್ರಹ ಎಂದು ಪರಿಗಣಿಸಲಾಗುತ್ತದೆ. ಕರ್ಮದ ಫಲಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಆದ್ರೆ ಶನಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಸುಮಾರು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿರೋದರಿಂದ ಆ ರಾಶಿ ಮೇಲೆ ಶನಿಯ ಪ್ರಭಾವ ಅಧಿಕವಾಗಿರುತ್ತದೆ. ಸದ್ಯ ಶನಿ ಗ್ರಹ ಮೀನ ರಾಶಿಯ ನಕಾರಾತ್ಮಕ ಸ್ಥಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಸೆಪ್ಟೆಂಬರ್ 17ರಂದು ಕನ್ಯಾರಾಶಿಗೆ ಶನಿ ಸ್ಥಳಾಂತರಗೊಂಡಿದ್ದಾನೆ.
25
ಶನಿ ಎರಡು ಪಟ್ಟು ಬಲ
ಕನ್ಯಾರಾಶಿ ಪ್ರವೇಶದಿಂದಾಗಿ ಶನಿ ಮತ್ತು ಸೂರ್ಯ ಪರಸ್ಪರ ಭೇಟಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಸೂರ್ಯ ಮತ್ತು ಶನಿಯನ್ನು ಶತ್ರು ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಸೂರ್ಯನ ದೃಷ್ಟಿಯಿಂದಾಗಿ ಶನಿ ಎರಡು ಪಟ್ಟು ಬಲವನ್ನು ಪಡೆದುಕೊಂಡಿದ್ದಾರೆ. ಇದರ ಪರಿಣಾಮ ಅಕ್ಟೋಬರ್ 17ವರವರೆಗೆ ಶನಿ ಎರಡು ಪಟ್ಟು ಬಲ ಹೊಂದಿರಲಿದೆ. ಇದು ಕೆಲವು ರಾಶಿಚಿಕ್ರದ ಮೇಲೆ ಪ್ರಭಾವ ಬೀರಲಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಯಶಸ್ಸು ಮತ್ತು ಆರ್ಥಿಕ ಲಾಭ ಸಿಗಲಿದೆ.
35
ಕರ್ಕಾಟಕ ರಾಶಿ
ಶನಿ ಮತ್ತು ಸೂರ್ಯನ ಮುಖಾಮಖಿ ಕರ್ಕಾಟಕ ರಾಶಿ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ. 7ನೇ ಮತ್ತು 8ನೇ ಮನೆ ಅಧಿಪತಿಗಳು ವಿಧಿ ಸ್ಥಾನದಲ್ಲಿದ್ದಾರೆ. ಶನಿ ಬಲ ಎರಡು ಪಟ್ಟು ಹೆಚ್ಚಳದಿಂದ ಕರ್ಕಾಟಕ ರಾಶಿಚಕ್ರದವರಿಗೆ ಹಲವು ಉತ್ತಮ ಫಲಿತಾಂಶಗಳು ಲಭ್ಯವಾಗಲಿವೆ. ಮದುವೆ ಭಾಗ್ಯ, ಆತ್ಮವಿಶ್ವಾಸ ಹೆಚ್ಚಳ, ವೃತ್ತಿಯಲ್ಲಿ ಉನ್ನತ ಸ್ಥಾನ, ಹೊಸ ಅವಕಾಶ, ಆರ್ಥಿಕ ಸ್ಥಿರತೆ, ಆರೋಗ್ಯ ಸುಧಾರಣೆ ಮತ್ತು ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ.
ತುಲಾ ರಾಶಿಯ 12ನೇ ಮನೆ ಮೂಲಕ ಸೂರ್ಯ ಸಾಗಿದ್ದು, ಶನಿಯ ದುಪ್ಪಟ್ಟು ಬಲದಿಂದಾಗಿ ಈ ರಾಶಿಯವರ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ಕಾಣುತ್ತಾರೆ. ಹೊಸ ವ್ಯವಹಾರಗಳಲ್ಲಿ ಹೂಡಿಕೆ, ಪದನ್ನೋತಿ, ವ್ಯವಹಾರದಲ್ಲಿ ಪ್ರಗತಿ, ಹೊಸ ನಾಯಕತ್ವದ ಜವಾಬ್ದಾರಿಗಳು ನಿಮಗೆ ಸಿಗಲಿವೆ. ಸೂರ್ಯನ ಶಕ್ತಿ ಕರ್ಕಾಟಕ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಣಕಾಸಿನ ವಿಷಯಗಳಲ್ಲಿ ವಿಶೇಷ ಪ್ರಗತಿ ನಿಮ್ಮದಾಗುತ್ತದೆ.
ಶನಿಯ ದ್ವಿಗುಣ ಬಲದಿಂದಾಗಿ ಮಕರ ರಾಶಿಯವರು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನ ನೋಡಲಿದ್ದಾರೆ. ಶನಿಯು ಮೂರನೇ ಮನೆಯಲ್ಲಿರುವುದರಿಂದ ಮಕರ ರಾಶಿಯವರು ಮತ್ತಷ್ಟು ಶಕ್ತಿಶಾಲಿಯಾಗುತ್ತಾರೆ. ಶನಿಯ ಕೃಪೆಯಿಂದಾಗಿ ಮಕರ ರಾಶಿಯವರು ಸಮಾಜದಲ್ಲಿ ಗೌರವ ಪಡೆಯುತ್ತಾರೆ ಮತ್ತು ದೀರ್ಘಕಾಲದಿಂದ ಸ್ಥಗಿತಗೊಂಡ ಕೆಲಸಗಳು ಪುನರಾರಂಭಗೊಳ್ಳಬಹುದು. ವೃತ್ತಿ, ಕುಟುಂಬ ಜೀವನ, ಆರ್ಥಿಕ ಸ್ಥಿರತೆಯೂ ಕಂಡು ಬರುತ್ತದೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.