Kaal Sarp Dosh: ಕಾಳ ಸರ್ಪ ದೋಷದಿಂದ ಶುಭ ಫಲ ಪ್ರಾಪ್ತಿಯೂ ಸಾಧ್ಯ!

First Published Feb 27, 2022, 10:27 AM IST

ಕಾಳಸರ್ಪ ದೋಷವನ್ನು ಅತ್ಯಂತ ಅಪಾಯಕಾರಿ ಅಶುಭ ಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ರೂಪುಗೊಳ್ಳುವ ಈ ಅಶುಭ ಯೋಗದ ಹಿಂದೆ ರಾಹು-ಕೇತುವಿನ ಪಾತ್ರ ಪ್ರಮುಖವಾಗಿದೆ ಎಂದು ನಂಬಲಾಗಿದೆ. ಈ ಯೋಗದಿಂದಾಗಿ ವ್ಯಕ್ತಿಯು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಕಾಳ ಸರ್ಪ ದೋಷ(Kaal Sarp Dosh) ಎಂದರೇನು? 
ಜ್ಯೋತಿಷ್ಯದ ಪ್ರಕಾರ, ಎಲ್ಲ ಗ್ರಹಗಳು ರಾಹು ಮತ್ತು ಕೇತು ಗ್ರಹದ ನಡುವೆ ಬಂದಾಗ, ಆಗ ವ್ಯಕ್ತಿಯ ಜನ್ಮ ಪಟ್ಟಿಯಲ್ಲಿ ಕಾಳ ಸರ್ಪ ದೋಷವು ರೂಪುಗೊಳ್ಳುತ್ತದೆ. ಕಾಳ ಸರ್ಪ ಯೋಗವನ್ನು ಹೊಂದಿರುವ ಎಲ್ಲ ವ್ಯಕ್ತಿಗಳು ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಾರೆಂದಲ್ಲ, ವ್ಯಕ್ತಿಯ ಜಾತಕದಲ್ಲಿ ಈ ಗ್ರಹಗಳ ಸ್ಥಾನ ಮತ್ತು ಉಳಿದ ವಿಷಯಗಳನ್ನು ಆಧರಿಸಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 

ಕಾಳ ಸರ್ಪ ದೋಷದ ಫಲವೇನು?
ಯಾರ ಜಾತಕದಲ್ಲಿ ಕಾಳ ಸರ್ಪ ದೋಷ ಕಂಡು ಬರುತ್ತದೆಯೋ ಆ ವ್ಯಕ್ತಿ ಸಾಕಷ್ಟು ಹೋರಾಟಗಳಿಂದ ಎಲ್ಲವನ್ನೂ ಪಡೆಯುತ್ತಾನೆ ಎಂದು ನಂಬಲಾಗಿದೆ. ಇಂಥವರು ಪ್ರತಿಯೊಂದು ಕಾರ್ಯದಲ್ಲೂ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕ ಒತ್ತಡ(Mental Stress), ಅಜ್ಞಾತ ಭಯ ಮತ್ತು ಗೊಂದಲವೂ ಉದ್ಭವಿಸುತ್ತವೆ. ಉದ್ಯೋಗ, ವೃತ್ತಿ ಮತ್ತು ವ್ಯವಹಾರವು ಏರಿಳಿತಗಳನ್ನು ಹೊಂದಿರುವುದು ಕಂಡುಬರುತ್ತದೆ.
 

ಎಲ್ಲ ಗ್ರಹಗಳಿಗಿಂತ ಆರು ರಾಶಿಗಳ ಮುಂದೆ ರಾಹು ಸ್ಥಿತವಾಗಿದ್ದು, ಕೇತು ಆ ಎಲ್ಲ ಗ್ರಹಗಳ ಹಿಂದೆ ಸ್ಥಿತವಾಗಿದ್ದ ಸಂದರ್ಭದಲ್ಲಿ ಈ ಯೋಗವು ಹೆಚ್ಚು ತೊಂದರೆ ಕೊಡುವುದಿಲ್ಲ. ಅಂದರೆ ಕೆಟ್ಟ ಪರಿಣಾಮಗಳ ಪ್ರಭಾವ ತಗ್ಗಿರುತ್ತದೆ. ರಾಹು ಅಥವಾ ಕೇತುವು ತ್ರಿಕೋನಾಕೃತಿಯಲ್ಲಿ ಸ್ಥಿತವಾಗಿದ್ದಾಗ ಕಾಳ ಸರ್ಪ ಯೋಗವು ಪರಿಣಾಮಗಳು ಹೆಚ್ಚು ಉತ್ತಮವಾಗುತ್ತಾ ಬರುತ್ತದೆ. 

sarpa app

ಕಾಳಸರ್ಪ ದೋಷದ ಶುಭ ಫಲಗಳು
ಕಾಳಸರ್ಪ ದೋಷವು ಯಾವಾಗಲೂ ಅಶುಭ ಫಲಗಳನ್ನು ಒದಗಿಸುತ್ತದೆ ಎಂದಿಲ್ಲ. ಕೆಲವು ಸಂದರ್ಭಗಳಲ್ಲಿ ಈ ದೋಷ ಶುಭ ಫಲಗಳನ್ನೂ ನೀಡುತ್ತದೆ. ಜ್ಯೋತಿಷ್ಯದಲ್ಲಿ(Astrology) ರಾಹು-ಕೇತುವನ್ನು ನಿಗೂಢ ಗ್ರಹವೆಂದು ಪರಿಗಣಿಸಲಾಗಿದೆ. ರಾಹು ಮತ್ತು ಕೇತುಗಳನ್ನು ಜೀವನದಲ್ಲಿ ಹಠಾತ್ ಘಟನೆಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅವರು ಜೀವನದಲ್ಲಿ ಶುಭ ಫಲಗಳನ್ನು ಸಹ ಒದಗಿಸುತ್ತಾರೆ. 

ಕಾಳಸರ್ಪ ದೋಷವಿದ್ದಾಗ ವ್ಯಕ್ತಿ ತುಂಬಾ ಶ್ರಮಜೀವಿ(Hard worker)ಯಾಗಿರುತ್ತಾನೆ. ಅಂಥ ವ್ಯಕ್ತಿಗಳು ಬಿಟ್ಟುಕೊಡುವುದಿಲ್ಲ ಮತ್ತು ಯಶಸ್ವಿಯಾಗಲು ಪ್ರಯತ್ನಿಸುತ್ತಲೇ ಇರುತ್ತಾರೆ. ಅನೇಕ ಪ್ರಸಿದ್ಧ ಮತ್ತು ಮಹಾನ್ ಪುರುಷರ ಜಾತಕದಲ್ಲಿ ಕಾಳ ಸರ್ಪ ದೋಷ ಕಂಡುಬಂದಿದೆ. ಕಾಳಸರ್ಪ ದೋಷ ಪರಿಹಾರ ಮಾಡಿದ ನಂತರ ಈ ದೋಷದ ಪರಿಣಾಮ ಕಡಿಮೆಯಾಗಿ ಶುಭ ಫಲಗಳು ಲಭಿಸುತ್ತವೆ.

ಕಾಳ ಸರ್ಪ ದೋಷದ ಆರಾಧನೆ 
ಸೋಮವಾರ ಶಿವನನ್ನು(Shiva) ಪೂಜಿಸಿದಲ್ಲಿ ಕಾಳಸರ್ಪ ದೋಷಕ್ಕೆ ಶಾಂತಿ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ಸೋಮವಾರ ಬೆಳಗ್ಗೆ ಎದ್ದು ಶಿವನ ದರ್ಶನ ಮಾಡಬೇಕು. ಸ್ನಾನ ಮಾಡಿದ ಬಳಿಕ ಶಿವನ ಆರಾಧನೆಯನ್ನು ಆರಂಭಿಸಿ. ಸೋಮವಾರ ಶಿವನಿಗೆ ಜಲಾಭಿಷೇಕ ಮಾಡಿ ಶಿವನ ನೆಚ್ಚಿನ ವಸ್ತುಗಳನ್ನು ಅರ್ಪಿಸಿ. ಓಂ ನಮಃ ಶಿವಾಯ ಈ ಮಂತ್ರವನ್ನು ಜಪಿಸಿ.

click me!