Lucky Plant: ಈ ಹೂವಿನ ಗಿಡ ಮನೆಯಲ್ಲಿ ಬೆಳೆಸಿದ್ರೆ ನಿಮ್ಮ ಭಾಗ್ಯದ ಬಾಗಿಲು ತೆರೆದಂತೆಯೇ!

Suvarna News   | Asianet News
Published : Jan 17, 2022, 05:06 PM IST

ಪಾರಿಜಾತವು ಸಮುದ್ರ ಮಂಥನದಲ್ಲಿ ದೊರೆತಿದ್ದು, ಇಂದ್ರನ ತೋಟದ ಅಂದ ಹೆಚ್ಚಿಸಿರುವ ಈ ಸಸ್ಯಕ್ಕೆ ದೈವಿಕ ಶಕ್ತಿ ಇದೆ. ನೀವು ಹಣಕಾಸಿನ ಅಡಚಣೆಯಿಂದ ಬಳಲುತ್ತಿದ್ದರೆ, ಈ ವಿಶೇಷ ಸಸ್ಯವನ್ನು ಮನೆಯಲ್ಲಿ ನೆಡಬೇಕು. ಇದು ನಿಮ್ಮ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು.

PREV
18
Lucky Plant: ಈ ಹೂವಿನ ಗಿಡ ಮನೆಯಲ್ಲಿ ಬೆಳೆಸಿದ್ರೆ ನಿಮ್ಮ ಭಾಗ್ಯದ ಬಾಗಿಲು ತೆರೆದಂತೆಯೇ!

ತುಳಸಿ(Tulasi) ಗಿಡಕ್ಕೆ ಶಾಸ್ತ್ರಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ತುಳಸಿ ಗಿಡ ನೆಟ್ಟ ಮನೆಯಲ್ಲಿ ತಾಯಿ ಲಕ್ಷ್ಮಿ ಮತ್ತು ವಿಷ್ಣು ದೇವರು ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಮನೆಯಲ್ಲಿ ತುಳಸಿ ಗಿಡ ಇಲ್ಲದಿದ್ದರೆ, ನೀವು ಪರಿಜಾತವನ್ನು ಸಹ ನೆಡಬಹುದು. ಇದು ತುಳಸಿಯಷ್ಟೇ ಶ್ರೇಷ್ಟವಾಗಿರುವುದರ ಜೊತೆಗೆ, ಅಷ್ಟೇ ದೈವಿಕ ಲಾಭ ತರಲಿದೆ. 

28

ಪಾರಿಜಾತದ(Parijat) ಗಿಡದಲ್ಲಿ ತಾಯಿ ಲಕ್ಷ್ಮಿ ನಿವಾಸ
ಪಾರಿಜಾತ  ಗಿಡದಲ್ಲಿ ಲಕ್ಷ್ಮಿ ಮಾತೆ ವಾಸಿಸುತ್ತಾರೆ ಎಂಬ ಧಾರ್ಮಿಕ ನಂಬಿಕೆ ಇದೆ. ಮನೆಯ ಅಂಗಳದಲ್ಲಿ ಈ ಗಿಡವನ್ನು ನೆಡುವುದರಿ೦ದ ಮನೆಯ ವಾಸ್ತುದೋಷಗಳು ನಿವಾರಣೆಯಗುತ್ತವೆ ಹಾಗೂ ಸ೦ಬ೦ಧಕ್ಕೆ ಸುಖ ಸಮೃದ್ಧಿ ಸಿಗುತ್ತದೆ.

38

ಪಾರಿಜಾತ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಇದು ನಕಾರಾತ್ಮಕ ಶಕ್ತಿಗಳನ್ನು(Negative energy) ಮನೆಯಿಂದ ದೂರವಿರಿಸುತ್ತದೆ. ಕುಟುಂಬ ಸದಸ್ಯರಲ್ಲಿ ಐಕ್ಯತೆಯನ್ನು ಹೆಚ್ಚಿಸುತ್ತದೆ. ಆದುದರಿಂದ ಸಾಧ್ಯವಾದಷ್ಟು ಮನೆಯಲ್ಲಿ ಪಾರಿಜಾತ ಗಿಡವನ್ನು ಬೆಳೆಸಲು ಪ್ರಯತ್ನಿಸಿ. 

48

ಕುಟುಂಬ ವಿರಸ ದೂರವಾಗುತ್ತದೆ
ಜ್ಯೋತಿಷ್ಯ ದ ಪ್ರಕಾರ ಮನೆಯಲ್ಲಿ ಒಂದು ಪರಿಜಾತ  ಗಿಡವನ್ನು ನೆಡುವುದು ಕುಟುಂಬದಲ್ಲಿನ ಸಂಘರ್ಷವನ್ನು ನಿವಾರಿಸುತ್ತದೆ. ಇದು ರೋಗಗಳನ್ನು ದೂರವಾಗಿಸುತ್ತದೆ ಮತ್ತು ಕುಟುಂಬ ಸದಸ್ಯರ ಜೀವಿತಾವಧಿಯನ್ನು ದೀರ್ಘಗೊಳಿಸುತ್ತದೆ. ಇದರಿಂದ ಮಾನಸಿಕ ಒತ್ತಡ(Mental pressure) ನಿವಾರಣೆಯಾಗಿದ್ದು, ಮನೆಯ ಆರ್ಥಿಕ ಸ್ಥಿತಿಯೂ ಉತ್ತಮವಾಗುತ್ತದೆ.

58

ಸುಗಂಧ(SMell) ಮನೆಯನ್ನು ಆವರಿಸುತ್ತದೆ 
ಪರಿಜಾತ ಸಸ್ಯದ ಸುಗಂಧವು ಇಡೀ ಮನೆಯನ್ನು ಆವರಿಸುತ್ತದೆ. ಇದರ ಪರಿಮಳದಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತದೆ. ಈ ಹೂವು ಲಕ್ಷ್ಮಿ ಮಾತೆಗೆ  ತುಂಬಾ ಪ್ರಿಯವಾಗಿದೆ.

68

ಮನೆಯ ಪೂಜಾಕೋಣೆಯಲ್ಲಿ ಲಕ್ಷ್ಮೀ(Goddess Lakshmi) ಮಾತೆಯ ಭಾವಚಿತ್ರದ ಮೇಲೆ ಪಾರಿಜಾತ  ಹೂವನ್ನು ಇರಿಸಬೇಕು. ಇದು ಲಕ್ಷ್ಮಿ ಮಾತೆಯನ್ನು ಪ್ರಸನ್ನಗೊಳಿಸುತ್ತದೆ ಮತ್ತು ಭಕ್ತರಿಗೆ ವರವನ್ನು ನೀಡುತ್ತದೆ. ಮನೆಯಲ್ಲಿ ಸಮೃದ್ಧಿ ನೆಮ್ಮದಿ ಸದಾ ತುಂಬಿರಲು ಸಹಾಯ ಮಾಡುತ್ತದೆ.

78

ಸಮುದ್ರ ಮಂಥನದಿಂದ ಸಸ್ಯದ ಉಗಮ
ಪಾರಿಜಾತ  ಸಸ್ಯವು ಸಮುದ್ರ ಮಂಥನದ ಸಮಯದಲ್ಲಿ ಹುಟ್ಟಿಕೊಂಡಿತು. ನಂತರ ಇಂದ್ರ ದೇವರು ಈ ಪವಾಡಸದೃಶ ಸಸ್ಯವನ್ನು ಸ್ವರ್ಗದ ತೋಟದಲ್ಲಿ ನೆಟ್ಟರು. ಹಾಗಾಗಿ ಇದು ಬಹಳ ದೈವಿಕ ಸಸ್ಯವಾಗಿದೆ.

88

ಪುರಾಣಗಳ ಪ್ರಕಾರ, ಶ್ರೀಕೃಷ್ಣನು(Sri Krishna) ಈ ಸಸ್ಯವನ್ನು ತನ್ನ ಪತ್ನಿ ರುಕ್ಮಿಣಿಗೆ ಉಡುಗೊರೆಯಾಗಿ ನೀಡಿದ್ದನು. ಅದು ಅವನಿಗೆ ಶಾಶ್ವತ ಪ್ರೌಢಾವಸ್ಥೆಯನ್ನು ನೀಡಿತು. ಈ ಸಸ್ಯದಿಂದಾಗಿಯೇ ಇಂದ್ರ ಮತ್ತು ಶ್ರೀಕೃಷ್ಣ ಕೂಡ ಹೋರಾಡಿದರು, ನಂತರ ಇಂದ್ರನ ಶಾಪವು ಈ ಸಸ್ಯಕ್ಕೆ ಎಂದಿಗೂ ಹಣ್ಣನ್ನು ತರಲಿಲ್ಲ. ಆದಾಗ್ಯೂ, ಅದು ಹೂ ಬಿಡುವುದನ್ನು ಮುಂದುವರೆಸಿತು.

Read more Photos on
click me!

Recommended Stories