ಏಪ್ರಿಲ್ 14 ರಿಂದ, ಈ 4 ರಾಶಿಗಳ ಜನರು ಆರ್ಥಿಕ ಸಮಸ್ಯೆ ಎದುರಿಸಬೇಕಾಗಬಹುದು!

First Published Apr 12, 2023, 12:50 PM IST

ಗ್ರಹಗಳ ರಾಜನಾದ ಸೂರ್ಯನು ಏಪ್ರಿಲ್ ನಲ್ಲಿ ಮೇಷ ರಾಶಿಯಲ್ಲಿ ಸಂಚರಿಸಲಿದ್ದಾನೆ. ಸೂರ್ಯನು ಮೇಷ ರಾಶಿಗೆ ಹೋಗೋದರಿಂದ, ಅನೇಕ ರಾಶಿಯವರ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಉಂಟಾಗಲಿವೆ. ಈ ಸೂರ್ಯ ಸಂಕ್ರಮಣದ ಫಲಗಳನ್ನು ಇಲ್ಲಿ ತಿಳಿಯಿರಿ-

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಸಂಚಾರವನ್ನು ಒಂದು ಪ್ರಮುಖ ಘಟನೆ ಎಂದು ಪರಿಗಣಿಸಲಾಗಿದೆ. ಏಪ್ರಿಲ್ 14 ರ ಶುಕ್ರವಾರದಂದು ಸೂರ್ಯನು(Sun) ಮೇಷ ರಾಶಿಯಲ್ಲಿ ಸಂಚರಿಸಲಿದ್ದಾನೆ. ಮಧ್ಯಾಹ್ನ 03:12 ಕ್ಕೆ ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. 
 

ಮೇಷ ರಾಶಿಗೆ ಸೂರ್ಯನ ಆಗಮನದ ಕಾರಣ, ಕೆಲವು ರಾಶಿಯವರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಈ ಸಮಯದಲ್ಲಿ ಸೂರ್ಯ ಈ ರಾಶಿ ಮೇಲೆ ನಕಾರಾತ್ಮಕ(Negative) ಪರಿಣಾಮ ಬೀರುತ್ತಾನೆ. ಸೂರ್ಯ ಸಂಕ್ರಮಣದಿಂದ ಯಾವ ರಾಶಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಿಳಿಯಿರಿ-

Latest Videos


ವೃಷಭ - ಈ ರಾಶಿಯ ಹನ್ನೆರಡನೇ ಮನೆಯಲ್ಲಿ, ಸೂರ್ಯ ಇರೋದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬಹುದು ಮತ್ತು ಹಣವನ್ನು(Money) ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ. ಅಡೆತಡೆ ಮತ್ತು ವಿಳಂಬಗಳು ಉದ್ಭವಿಸಬಹುದು. ವೃತ್ತಿಜೀವನದಲ್ಲಿ, ಮೇಷ ರಾಶಿಯಲ್ಲಿ ಸೂರ್ಯನ ಈ ಸಂಚಾರವು ಪ್ರೋತ್ಸಾಹದಾಯಕವಾಗಿಲ್ಲದಿರಬಹುದು ಮತ್ತು ಕೆಲಸದಲ್ಲಿ ತೃಪ್ತಿಕರ ಫಲಿತಾಂಶಗಳನ್ನು ಪಡೆಯದೆ ಹೆಚ್ಚಿನ ಅಡೆತಡೆಗಳನ್ನು ಎದುರಿಸಬೇಕಾಗಬಹುದು.

ಗುರುತಿನ ಕೊರತೆಯಿಂದಾಗಿ ಕೆಲವರು ತಮ್ಮ ಉದ್ಯೋಗವನ್ನು ಬಿಡಬಹುದು. ಆರ್ಥಿಕವಾಗಿ, ಈ ರಾಶಿಯರು ಹೆಚ್ಚಿನ ಮಟ್ಟದ ವೆಚ್ಚಗಳನ್ನು ಎದುರಿಸಬಹುದು. ಅನಗತ್ಯ ಖರ್ಚುಗಳು ಸಹ ಸಾಧ್ಯವಾಗಬಹುದು ಮತ್ತು ಸಂಪತ್ತಿನ ಲಾಭಗಳನ್ನು ಪೂರೈಸುವಲ್ಲಿ ಇದು ಅಡಚಣೆಯಾಗಿ ಕಾರ್ಯನಿರ್ವಹಿಸಬಹುದು. ಸಂಬಂಧಗಳ ಬಗ್ಗೆ ಮಾತನಾಡುವುದಾದರೆ, ಈ ರಾಶಿಯವರು ತಮ್ಮ ಜೀವನ ಸಂಗಾತಿ (Life partner) ಮತ್ತು ಕುಟುಂಬ ಸದಸ್ಯರೊಂದಿಗೆ ಒಳ್ಳೆಯ ಸಂಬಂಧ ಹೊಂದದೇ ಇರಬಹುದು. ಇದಕ್ಕೆ ಈ ರಾಶಿಯವರು  ಎದುರಿಸುತ್ತಿರುವ ಕೌಟುಂಬಿಕ ಸಮಸ್ಯೆಗಳು ಕಾರಣವಾಗಿರಬಹುದು ಮತ್ತು ಅದು ಅವರನ್ನು ಅಸಮಾಧಾನಗೊಳಿಸಬಹುದು.

ಕನ್ಯಾರಾಶಿ (Virgo)- ವ್ಯಾಪಾರ ಮಾಡುವ ಜನರು ನಷ್ಟ ಮತ್ತು ಲಾಭ ಎರಡನ್ನೂ ಅನುಭವಿಸಬಹುದು. ವ್ಯಾಪಾರ ಮಾಡುವ ಈ ರಾಶಿಯ ಜನರು ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಕೆಲವರು ಸ್ಪರ್ಧೆಯಿಂದ ನಷ್ಟ ಎದುರಿಸಬಹುದು ಮತ್ತು ಹಾಗೆ ಮಾಡುವ ಮುಂಚಿತವಾಗಿ ಯೋಜಿಸಬೇಕು. 

ಆರ್ಥಿಕ ಸ್ಥಿತಿ ಬಗ್ಗೆ ಹೇಳುವುದಾದರೆ, ಮೇಷ ರಾಶಿಯಲ್ಲಿ ಸೂರ್ಯನ ಸ್ಥಾನವು ಹೆಚ್ಚಿನ ಖರ್ಚು ಮತ್ತು ನಷ್ಟಗಳಿಗೆ(Loss) ಕಾರಣವಾಗಬಹುದು.  ಹಣವನ್ನು ಯೋಜಿಸಬೇಕಾಗಬಹುದು ಮತ್ತು ಖರ್ಚು ಮಾಡಬೇಕಾಗಬಹುದು. ಸಂಬಂಧಗಳ ವಿಷಯಕ್ಕೆ ಬಂದಾಗ, ಈ ರಾಶಿಯವರು ತಮ್ಮ ಜೀವನ ಸಂಗಾತಿಯೊಂದಿಗೆ ಪ್ರೀತಿಯ ಕೊರತೆಯನ್ನು ನೋಡಬಹುದು ಮತ್ತು ಸಾಮರಸ್ಯದ ಸಾಧ್ಯತೆ ಇಲ್ಲದಿರಬಹುದು.

ತುಲಾ ರಾಶಿ- ವೃತ್ತಿಜೀವನದಲ್ಲಿ(Professional life), ಮೇಷ ರಾಶಿಯಲ್ಲಿ ಸೂರ್ಯನ ಸಂಚಾರವು ಸುಗಮವಾಗಿಲ್ಲದಿರಬಹುದು, ಏಕೆಂದರೆ ಈ ರಾಶಿಯವರು ತಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರೊಂದಿಗೆ ತುಂಬಾ ಆರೋಗ್ಯಕರ ಸಂಬಂಧವನ್ನು ಹೊಂದಿರೋದಿಲ್ಲ. ಕೆಲಸದಲ್ಲಿ ತೊಂದರೆಗಳು ಬರಬಹುದು ಮತ್ತು ಕೆಲಸದ ಒತ್ತಡವೂ ಹೆಚ್ಚಾಗಬಹುದು. ಕೆಲವರು ಅನಗತ್ಯವಾದ ಪ್ರಯಾಣ ಮಾಡಬೇಕಾಗಬಹುದು ಮತ್ತು ಅಂತಹ ಪ್ರಯಾಣವು ಫಲಪ್ರದವಾಗದಿರಬಹುದು.

ವ್ಯಾಪಾರ (Business) ಮಾಡುವವರು ಈ ಸಮಯದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಜಾಗರೂಕರಾಗಿರಬೇಕು. ಏಕೆಂದರೆ ಇವರು ನಷ್ಟ ಅನುಭವಿಸುವ ಸಾಧ್ಯತೆಯಿದೆ. ಆರ್ಥಿಕತೆಯ ಬಗ್ಗೆ ಹೇಳುವುದಾದರೆ, ಏಳನೇ ಮನೆಯಲ್ಲಿ ಸೂರ್ಯನ ಉಪಸ್ಥಿತಿಯು ಹೆಚ್ಚಿನ ಮಟ್ಟದ ಲಾಭವನ್ನು ಗಳಿಸುವಲ್ಲಿ ಹೆಚ್ಚಿನ ಅಡೆತಡೆಗಳನ್ನು ನೀಡಲಿದೆ. ಪ್ರಯಾಣದ ಸಮಯದಲ್ಲಿ ಹಠಾತ್ ಹಣ ನಷ್ಟವಾಗುವ ಸಾಧ್ಯತೆಯಿದೆ.

ಮಕರ ರಾಶಿ - ವ್ಯಾಪಾರ ಮಾಡುವವರಿಗೆ, ಸೂರ್ಯನ ಈ ಸಂಚಾರವು ಒಳ್ಳೆಯದಲ್ಲ. ಇವರು ಲಾಭಕ್ಕಿಂತ ಹೆಚ್ಚಿನ ನಷ್ಟವನ್ನು ಎದುರಿಸಬಹುದು.  ಪ್ರತಿಸ್ಪರ್ಧಿಗಳೊಂದಿಗೆ(Competitor) ಉನ್ನತ ಮಟ್ಟದ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ಆರ್ಥಿಕ ದೃಷ್ಟಿಯಿಂದ, ನಾಲ್ಕನೇ ಮನೆಯಲ್ಲಿ ಸೂರ್ಯನ ಉಪಸ್ಥಿತಿಯು  ಕುಟುಂಬ ವೆಚ್ಚಗಳ ರೂಪದಲ್ಲಿ ಹೆಚ್ಚಿನ ವೆಚ್ಚಗಳನ್ನು ತರಬಹುದು. 

ಮಕರ ರಾಶಿಯವರು ಹಣದ ನಷ್ಟವನ್ನು ಎದುರಿಸಬೇಕಾಗಬಹುದು. ಸಂಬಂಧಗಳ ವಿಷಯಕ್ಕೆ ಬಂದಾಗ, ಇವರು ತಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕೆಲವು ತೊಂದರೆ ಎದುರಿಸಬಹುದು. ಈ ಸಮಯದಲ್ಲಿ ಆರೋಗ್ಯವು ಉತ್ತಮ ಸ್ಥಿತಿಯಲ್ಲಿಲ್ಲದಿರಬಹುದು ಏಕೆಂದರೆ ತೀವ್ರ ತಲೆನೋವಿನ(Head ache) ಸಾಧ್ಯತೆಯಿದೆ.

click me!