ವೈವಾಹಿಕ ಜೀವನದಲ್ಲಿ ಸಂತೋಷ ತುಂಬಲು Chanakya Neeti ಅನುಸರಿಸಿ

First Published | Mar 12, 2022, 2:44 PM IST

ಚಾಣಕ್ಯ ನೀತಿಯ ಪ್ರಕಾರ, ಯಾರ ವೈವಾಹಿಕ ಜೀವನವು ಸಂತೋಷದಿಂದ ತುಂಬಿದೆಯೋ ಅವರು ಜೀವನದಲ್ಲಿ ಯಶಸ್ಸನ್ನು ಸಹ ಪಡೆಯುತ್ತಾರೆ. ಆಚಾರ್ಯ ಚಾಣಕ್ಯನ ಪ್ರಕಾರ, ಗಂಡ ಮತ್ತು ಹೆಂಡತಿಯ ಸಂಬಂಧವು ಈ ಭೂಮಿಯ ಮೇಲಿನ ಬಲವಾದ ಸಂಬಂಧಗಳಲ್ಲಿ ಒಂದಾಗಿದೆ. ಈ ಸಂಬಂಧವು ಎಷ್ಟು ಬಲವಾಗಿರುತ್ತದೋ, ಬದುಕುವುದು ಸುಲಭ. ಈ ಸಂಬಂಧವನ್ನು ಸುಧಾರಿಸಲು ಚಾಣಕ್ಯನು ಕೆಲವು ವಿಷಯಗಳನ್ನು ಹೇಳಿದ್ದಾನೆ.

Relationships

ಚಾಣಕ್ಯ(Chanakya) ನೀತಿಯಲ್ಲಿ ತಿಳಿಸಿದ ಕೆಲವೊಂದು ವಿಷಯಗಳನ್ನು ನಾವು ತಿಳಿದುಕೊಂಡರೆ ಇದರಿಂದ ವೈವಾಹಿಕ ಜೀವನವು ಸುಲಭವಾಗಿ ಸಾಗುವುದು. ಜೀವನದಲ್ಲಿ ಹಲವು ಸಮಸ್ಯೆಗಳು ದೂರವಾಗಿ ಯಶಸ್ವಿ ಮತ್ತು ಸಂತೋಷದಿಂದ ಕೂಡಿದ ವೈವಾಹಿಕ ಜೀವನ ನಿಮ್ಮದಾಗುತ್ತದೆ. 

Relationships

ಪ್ರೀತಿ(Love)- ಚಾಣಕ್ಯನ ನೀತಿಯ ಪ್ರಕಾರ, ಪ್ರೀತಿ ಪ್ರತಿಯೊಂದು ಸಂಬಂಧದ ಪ್ರಮುಖ ಕೊಂಡಿಯಾಗಿದೆ. ಪ್ರೀತಿಯ ಕೊರತೆ ಇದ್ದಾಗ, ನಿಕಟ ಸಂಬಂಧವು ದುರ್ಬಲವಾಗಿ ಕಾಣಲು ಪ್ರಾರಂಭಿಸುತ್ತದೆ. ಜೀವನದಲ್ಲಿ ಪ್ರೀತಿಯ ಕೊರತೆ ಇಲ್ಲದ ವ್ಯಕ್ತಿ ಯಾವಾಗಲೂ ಯಶಸ್ಸನ್ನು ಸಾಧಿಸುತ್ತಾನೆ. 

Tap to resize

Relationships

ಪತಿ ಪತ್ನಿ(Husband and wife) ನಡುವೆ ಪ್ರೀತಿ ಯಾವಾಗಲೂ ಇದ್ದರೆ ಅಲ್ಲಿ ಲಕ್ಷ್ಮಿ ದೇವಿಯ  ಅನುಗ್ರಹವೂ ಉಳಿಯುತ್ತದೆ. ಇವರ ಕೆಲಸಗಳೆಲ್ಲಾ ಯಶಸ್ವಿಯಾಗಿ ನಡೆಯುತ್ತದೆ. ಆದುದರಿಂದ ಪತಿ ಪತ್ನಿ ನಡುವಿನ ಸಂಬಂಧ ಎಂದಿಗೂ ಮುರಿಯದಂತೆ ಗಟ್ಟಿಯಾಗಿರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. 

Relationships

ಸಮರ್ಪಣೆ(Dedication)- ಚಾಣಕ್ಯನ ನೀತಿಯ ಪ್ರಕಾರ ಪತಿ-ಪತ್ನಿಯರ ಸಂಬಂಧದಲ್ಲಿ ಸಮರ್ಪಣಾ ಮನೋಭಾವ ಬಹಳ ಮುಖ್ಯ. ಎಲ್ಲಿಯವರೆಗೆ ಸಂಬಂಧದಲ್ಲಿ ಸಮರ್ಪಣಾ ಭಾವ ಇರುವುದಿಲ್ಲ, ಅಲ್ಲಿಯವರೆಗೆ ಈ ಸಂಬಂಧದಲ್ಲಿ ಮಾಧುರ್ಯ ಮತ್ತು ಶಕ್ತಿ ಇರುವುದಿಲ್ಲ. 

Relationships

ಪತಿ -ಪತ್ನಿ ನಡುವೆ ಸಮರ್ಪಣೆ ಇದ್ದಾಗ, ಪರಸ್ಪರರ ನ್ಯೂನತೆಗಳನ್ನು ಸುಲಭವಾಗಿ ತೆಗೆದುಹಾಕಲಾಗುವುದು. ಆದ್ದರಿಂದ ಈ ಸಂಬಂಧದಲ್ಲಿ(Relationship) ಪರಸ್ಪರರ ಬಗ್ಗೆ ಸಮರ್ಪಣಾ ಭಾವ ಕಡಿಮೆಯಾಗಬಾರದು. ಇಬ್ಬರೂ ಒಬ್ಬರಿಗೊಬ್ಬರು ಎಲ್ಲ ವಿಷಯದಲ್ಲೂ ಹೊಂದಿಕೊಂಡು ಸಮರ್ಪಣಾ ಭಾವದಿಂದ ಇರಬೇಕು. 

relationships

ಗೌರವ(Respect) - ಚಾಣಕ್ಯನ ನೀತಿಯ ಪ್ರಕಾರ ವೈವಾಹಿಕ ಜೀವನದಲ್ಲಿ ಪರಸ್ಪರ ಗೌರವದ ಕೊರತೆ ಇರಬಾರದು.  ಗೌರವದ ಕೊರತೆ ಇದ್ದಾಗ, ಈ ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಪತ್ನಿ ಪತಿಗೆ ಹೇಗೆ ಗೌರವ ಕೊಡುತ್ತಾಳೋ, ಅದೇ ರೀತಿ ಪತಿ ಸಹ ಪತ್ನಿಗೆ ಗೌರವ ನೀಡಬೇಕು. 
 

relationships

ಚಾಣಕ್ಯನ ಪ್ರಕಾರ ಪ್ರತಿಯೊಂದು ಸಂಬಂಧದಲ್ಲೂ ಘನತೆ ಮತ್ತು ಗೌರವವಿದೆ. ಇದನ್ನು ಯಾವಾಗಲೂ ಪರಸ್ಪರ ನೋಡಿಕೊಳ್ಳಬೇಕು. ವೈವಾಹಿಕ ಜೀವನದಲ್ಲಿ(Marraige Life)  ಗೌರವ ಮೇಲುಗೈ ಸಾಧಿಸಿದಾಗ, ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲಾಗುತ್ತದೆ.

Latest Videos

click me!