Ugadi 2023: ಹಬ್ಬಕ್ಕೆ ಮನೆ ಮುಂದೆ ಸುಂದರವಾದ ರಂಗೋಲಿ ಬಿಡಿಸಿಲ್ಲಾಂದ್ರೆ ಹೇಗೆ? ಇಲ್ಲಿದೆ ಡಿಸೈನ್ಸ್

Published : Mar 21, 2023, 12:05 PM ISTUpdated : Mar 21, 2023, 12:06 PM IST

ರಂಗೋಲಿಯು ಭಾರತದಲ್ಲಿ ಹುಟ್ಟಿಕೊಂಡ ಒಂದು ಕಲಾ ಪ್ರಕಾರವಾಗಿದೆ, ಇದರಲ್ಲಿ ಪುಡಿ ಮಾಡಿದ ಸುಣ್ಣದ ಕಲ್ಲು,  ಒಣ ಅಕ್ಕಿ ಹಿಟ್ಟು, ಬಣ್ಣದ ಮರಳು, ಕ್ವಾರ್ಟ್ಜ್ ಪುಡಿ, ಹೂವಿನ ದಳಗಳನ್ನು ಬಳಸಿಕೊಂಡು ನೆಲದ ಮೇಲೆ ರಂಗೋಲಿ ರಚಿಸಲಾಗುತ್ತದೆ. ಇದು ಅನೇಕ ಹಿಂದೂ ಧರ್ಮದಲ್ಲಿನ ಒಂದು ಪವಿತ್ರ ಮತ್ತು ದೈನಂದಿನ ಆಚರಣೆಯಾಗಿದೆ.   

PREV
18
Ugadi 2023: ಹಬ್ಬಕ್ಕೆ ಮನೆ ಮುಂದೆ ಸುಂದರವಾದ ರಂಗೋಲಿ ಬಿಡಿಸಿಲ್ಲಾಂದ್ರೆ ಹೇಗೆ? ಇಲ್ಲಿದೆ ಡಿಸೈನ್ಸ್

ಹೆಚ್ಚಾಗಿ ಹಿಂದೂ ಧರ್ಮದಲ್ಲಿ (Hindu Religion) ಪ್ರಮುಖ ಹಬ್ಬ ಹರಿದಿನಗಳಂದು ಮನೆಗಳ ಮುಂದೆ ರಂಗೋಲಿ ಹಾಕಿ ಹಬ್ಬದ ಸಂಭ್ರಮ ಹೆಚ್ಚಿಸುತ್ತಾರೆ. ರಂಗೋಲಿಗಳನ್ನು ಸಾಮಾನ್ಯವಾಗಿ ದೀಪಾವಳಿ, ಯುಗಾದಿ, ಸಂಕ್ರಾಂತಿ, ಹೀಗೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಹಾಕಲಾಗುತ್ತೆ. ಇದು ಹಿಂದಿನಿಂದಲೂ ನಡೆದು ಬಂದಂತಹ ಸಂಪ್ರದಾಯವಾಗಿದೆ. ಇದನ್ನು ಇಂದಿಗೂ ಸಹ ಜನ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. 

28

ರಂಗೋಲಿ (Rangoli) ರಾಜ್ಯ ಮತ್ತು ಸಂಸ್ಕೃತಿಯ ಆಧಾರದ ಮೇಲೆ ವಿಭಿನ್ನ ಹೆಸರುಗಳನ್ನು ಹೊಂದಿದೆ. ಹಿಂದಿನ ಕಾಲದಿಂದಲೂ ಇದನ್ನು ಸಾಂಪ್ರದಾಯಿಕವಾಗಿ ಮನೆಯ ಮುಂದುಗಡೆ ಪ್ರತಿದಿನ ಹಾಕಲಾಗುತ್ತದೆ. ಇಂದು ಈ ಆಚರಣೆ ಕಡಿಮೆಯಾಗುತ್ತಿದ್ದರೂ, ಹಬ್ಬಗಳ ದಿನ ಮನೆಯಲ್ಲಿ ರಂಗೋಲಿ ಹಾಕುತ್ತಾರೆ. ಮನೆಯ ಅಂಗಳವನ್ನು ಸೆಗಣಿಯಿಂದ ಸ್ವಚ್ಚ ಮಾಡಿ, ನಂತರ ರಂಗೋಲಿ ಹಾಕುವುದು ಸಂಪ್ರದಾಯ. 
 

38

ಸಾಂಪ್ರದಾಯಿಕವಾಗಿ, ರಂಗೋಲಿ ಮಾಡಲು ಬಳಸುವ ಭಂಗಿಗಳು ಮಹಿಳೆಯರಿಗೆ ತಮ್ಮ ಬೆನ್ನುಮೂಳೆಯನ್ನು (back bone) ನೇರಗೊಳಿಸಲು ಒಂದು ರೀತಿಯ ವ್ಯಾಯಾಮವಾಗಿದೆ. ಅಷ್ಟೇ ಅಲ್ಲ ರಂಗೋಲಿ ಮನೆಯ ಸಂತೋಷ, ಸಕಾರಾತ್ಮಕತೆ ಮತ್ತು ಜೀವಂತಿಕೆಯನ್ನು ಪ್ರತಿನಿಧಿಸುತ್ತದೆ ಮತ್ತು ಸಂಪತ್ತು ಮತ್ತು ಅದೃಷ್ಟದ ದೇವತೆಯಾದ ಲಕ್ಷ್ಮಿಯನ್ನು ಸ್ವಾಗತಿಸುವ ಉದ್ದೇಶವನ್ನು ಹೊಂದಿದೆ ಎನ್ನಲಾಗುವುದು.

48

ರಂಗೋಲಿ ಆರು ಗಣಿತ ಕೌಶಲ್ಯಗಳನ್ನು ಒಳಗೊಂಡಿದೆ. ಒಂದು ಪರಿಪೂರ್ಣವಾದ ರಂಗೋಲಿಯನ್ನು ಮಾಡಲು, ಆ ಸುಂದರವಾದ ಜ್ಯಾಮಿತೀಯ ಮಾದರಿಗಳನ್ನು ರೂಪಿಸುವಾಗ ಚುಕ್ಕೆಗಳು, ಶೃಂಗಗಳು, ಚಾಪಗಳು ಮತ್ತು ರೇಖೆಗಳ ಎಣಿಕೆಯನ್ನು ಇರಿಸಿಕೊಳ್ಳಬೇಕು. ರಂಗೋಲಿಯನ್ನು ಕೂಡಾ ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಿಂದ ಮಹಿಳೆಯರ ಮೆದುಳು ಚುರುಕಾಗುತ್ತದೆ ಎನ್ನಲಾಗುತ್ತದೆ. 

58

ರಂಗೋಲಿ ಹಾಕೋದಕ್ಕೆ ವೈಜ್ಞಾನಿಕ ಕಾರಣಗಳೂ (scintific reason) ಇವೆ. ರಂಗೋಲಿಯನ್ನು ಸುಣ್ಣದಲ್ಲಿ ಮಾಡಲಾಗುತ್ತದೆ. ಈ ಸುಣ್ಣದಕಲ್ಲು ಕೀಟಗಳು ಮನೆಗೆ ಪ್ರವೇಶಿಸದಂತೆ ತಡೆಯುವ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಬಣ್ಣದ ಪುಡಿಗಳು ಕೀಟಗಳನ್ನು ಆಕರ್ಷಿಸುತ್ತವೆ ಮತ್ತು ಅವುಗಳನ್ನು ಮನೆಗೆ ಪ್ರವೇಶಿಸದಂತೆ ತಡೆಯುತ್ತವೆ. 

68

ರಂಗೋಲಿಯನ್ನು ಸಾಂಪ್ರದಾಯಿಕವಾಗಿ ಹುಡುಗಿಯರು ಅಥವಾ ಮಹಿಳೆಯರು ಹಾಕುತ್ತಾರೆ, ಆದರೂ ಪುರುಷರು ಮತ್ತು ಹುಡುಗರು ಇಂದು ಅವುಗಳನ್ನು ರಚಿಸುತ್ತಾರೆ. ಹಿಂದೂ ಮನೆಗಳಲ್ಲಿ, ರಂಗೋಲಿ ದೈನಂದಿನ ಅಭ್ಯಾಸವಾಗಿದೆ. ಬಣ್ಣಗಳ ಬಳಕೆ ಮತ್ತು ರೋಮಾಂಚಕ ವಿನ್ಯಾಸಗಳನ್ನು ಹಬ್ಬಗಳು, ಶುಭ ಆಚರಣೆಗಳು, ವಿವಾಹ ಆಚರಣೆಗಳ ಸಂದರ್ಭದಲ್ಲಿ ರಂಗೋಲಿ ಹಾಕಲಾಗುತ್ತೆ. 

78

ಈಗ ರಂಗೋಲಿ ಬಗ್ಗೆ ಯಾಕೆ ಹೇಳ್ತಿದ್ದೀವಿ ಅಂದ್ರೆ, ಯುಗಾದಿ ಹಬ್ಬ, ಅಂದರೆ ಹಿಂದೂಗಳಿಗೆ ಹೊಸ ವರ್ಷ. ಮನೆಯನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಿ, ಪೂಜೆ ಮಾಡಿ, ಹಬ್ಬದ ಅಡುಗೆ ಮಾಡಿ ಊಟ ಮಾಡಲು ಎಲ್ಲಾ ತಯಾರಿಯಾಗಿರಬಹುದು ಅಲ್ವಾ? 

88

ಇನ್ನು ಯುಗಾದಿ ಹಬ್ಬಕ್ಕೆ ನೀವು ಮನೆಯ ಅಲಂಕಾರದ ಜೊತೆಗೆ ರಂಗೋಲಿ ಹಾಕಲು ಬಯಸಿದರೆ, ನಿಮಗಾಗಿ ಇಲ್ಲಿ ವಿವಿಧ ರೀತಿ, ರಂಗು ರಂಗಾದ ರಂಗವಲ್ಲಿಗಳನ್ನು ನೀಡಲಾಗಿದೆ. ಇವುಗಳನ್ನು ನೋಡಿಕೊಂಡು ನೀವು ರಂಗೋಲಿ ಹಾಕುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು.

Read more Photos on
click me!

Recommended Stories