ಭಾನುವಾರ ಈ ಕೆಲಸ ಮಾಡಲೇಬಾರದಂತೆ!

First Published Mar 19, 2023, 5:17 PM IST

ಹಿಂದೂ ಧರ್ಮದಲ್ಲಿ ವಾರದ ಪ್ರತಿದಿನಕ್ಕೂ ಒಂದೊಂದು ವಿಶೇಷ ಮಹತ್ವವಿದೆ. ಅದರಲ್ಲೂ ಭಾನುವಾರಕ್ಕೆ ವಿಶೇಷ ಮಹತ್ವವಿದೆ, ಈ ದಿನವನ್ನು ವಾರದ ಎಲ್ಲಾ ದಿನಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ದಿನ ಯಾವ ಕೆಲಸ ಮಾಡಬಾರದು ಅನ್ನೋದನ್ನು ತಿಳಿಯೋಣ. 

ಹಿಂದೂ ಧರ್ಮದಲ್ಲಿ (Hindu Region) ಒಂದೊಂದು ವಿಶೇಷ ದಿನದ ಬಗ್ಗೆ ಹೇಳಲಾಗಿದೆ. ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸಲಾಗುತ್ತದೆ. ಅದೇ ರೀತಿ ಭಾನುವಾರವೂ ವಿಶೇಷವಾಗಿದೆ. ಈ ದಿನದಂದು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತೆ. ಭಾನುವಾರ ಯಾವ ಕೆಲಸ ಮಾಡೋದನ್ನು ನಿಷೇಧಿಸಲಾಗಿದೆ ಎಂದು ತಿಳಿದುಕೊಳ್ಳೋಣ.
 

ಹಿಂದೂ ನಂಬಿಕೆಯ ಪ್ರಕಾರ ಭಾನುವಾರದಂದು ವಿಷ್ಣು ಮತ್ತು ಸೂರ್ಯನನ್ನು ಪೂಜಿಸಲಾಗುತ್ತದೆ. ಭಾನುವಾರದಂದು ಸೂರ್ಯನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಅದರಿಂದ ನಿಮಗೆ ಎಲ್ಲಾ ರೀತಿಯ ಗೌರವ, ಆರ್ಥಿಕ ಅಭಿವೃದ್ಧಿಯಾಗುವುದು ಎನ್ನಲಾಗಿದೆ. 

Latest Videos


ಇನ್ನು ಹಿಂದೂ ಧರ್ಮದ ಪ್ರಕಾರ ಎಲ್ಲಾ ವಾರಗಳಲ್ಲಿ ಭಾನುವಾರವನ್ನು (Sunday) ಅತ್ಯಂತ ವಿಶೇಷ ದಿನ ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ಕೆಲವೊಂದು ಕೆಲಸಗಳನ್ನು ಮಾಡೋದನ್ನು ನಿಷೇಧಿಸಲಾಗಿದೆ. ಆ ಕೆಲಸಗಳು ಯಾವುವು ಅನ್ನೋದನ್ನು ತಿಳಿಯೋಣ. 

ಭಾನುವಾರದಂದು ನೀವು ಎಲ್ಲಿಗಾದರೂ ಟೂರ್ ಪ್ಲ್ಯಾನ್ ಮಾಡಿದ್ದೀರಾ? ನಾವೇನೂ ಟೂರ್ ಪ್ಲ್ಯಾನ್ (tour plan) ಮಾಡ್ಬೇಡಿ, ಅಂತಾ ಖಂಡಿತಾ ಹೇಳಲ್ಲ. ಆದರೆ ಭಾನುವಾರ ಯಾವತ್ತೂ ಪಶ್ಚಿಮ ದಿಕ್ಕಿನ ಕಡೆ ಪ್ರಯಾಣ ಬೇಳೆಸೋದು ಒಳ್ಳೆಯದಲ್ಲ ಎಂದು ಹೇಳಲಾಗುತ್ತೆ. ಇದರಿಂದ ಕೆಟ್ಟದಾಗುತ್ತಂತೆ. 

ಹೆಚ್ಚಾಗಿ ಜನರು ಭಾನುವಾರ ರಜಾ ಇರೋದರಿಂದ ಆರಾಮವಾಗಿ ಕೂದಲು ಕತ್ತರಿಸಿಕೊಳ್ಳಬಹುದು (hair cut) ಎಂದು ಅಂದುಕೊಳ್ಳುತ್ತಾರೆ. ಆದರೆ ಭಾನುವಾರ, ಒಬ್ಬ ವ್ಯಕ್ತಿಯು ತನ್ನ ಕೂದಲನ್ನು ಕತ್ತರಿಸಬಾರದು ಎಂದು ಹೇಳಲಾಗುತ್ತದೆ,  ಹೀಗೆ ಮಾಡೋದರಿಂದ ಇದು ಸೂರ್ಯನನ್ನು ದುರ್ಬಲಗೊಳಿಸುತ್ತದೆ ಎನ್ನಲಾಗುತ್ತೆ.

ಎಲ್ಲಾರೂ ಪಾರ್ಟಿ ಮಾಡಲು, ಚಿಕನ್ ಸೇರಿದಂತೆ ನಾನ್ ವೆಜ್ (non veg) ಸಖತ್ತಾಗಿ ತಿನ್ನಲು, ಭಾನುವಾರ ಬೆಸ್ಟ್ ಎಂದು ಅಂದುಕೊಳ್ಳುತ್ತಾರೆ. ಆದರೆ ಭಾನುವಾರ ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು, ಇದು ಜಾತಕದಲ್ಲಿ ಸೂರ್ಯ ಮತ್ತು ಶನಿಯ ಸ್ಥಾನವನ್ನು ಇನ್ನಷ್ಟು ಹದಗೆಡಿಸುತ್ತದೆ ಎನ್ನಲಾಗುತ್ತದೆ.

ಅಷ್ಟೆ ಅಲ್ಲ ಭಾನುವಾರದಂದು ಉಪ್ಪನ್ನು ಸಹ ಹೆಚ್ಚಾಗಿ ಬಳಕೆ ಮಾಡಬಾರದು ಎಂಬ ನಂಬಿಕೆಯೂ ಸಹ ಇದೆ. ಯಾಕಂದ್ರೆ ಭಾನುವಾರ ಹೆಚ್ಚು ಉಪ್ಪು (salt)  ಸೇವಿಸೋದ್ರಿಂದ ಆರೋಗ್ಯಕ್ಕೆ ಹಾನಿಯುಂಟಾಗುವ ಸಾಧ್ಯತೆ ಇದೆ. 
 

ಭಾನುವಾರದಂದು ತ್ರಾಮದ ವಸ್ತುಗಳನ್ನು ಖರೀದಿಸೋದು,  ಅಥವಾ ಅವುಗಳನ್ನು ಮಾರೋದು ಸಹ ಉತ್ತಮ ಅಲ್ಲ ಎನ್ನಲಾಗುತ್ತೆ. ಯಾಕಂದ್ರೆ ಇದರಿಂದ ರಾಶಿಯಲ್ಲಿನ ಸೂರ್ಯನ ಶಕ್ತಿ ಕಡಿಮೆಯಾಗುತ್ತಂತೆ. ಇದರಿಂದ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತೆ. 

click me!